ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗ-ಪೂ-ರ್‌ ಫುಟ್ಬಾ-ಲ್‌ : ಮ್ಯಾಚ್‌-ಫಿ-ಕ್ಸಿಂ-ಗ್‌ ತಡೆ-ಯ-ಲು ಲೈ- ಡಿಟೆ-ಕ್ಟ-ರ್‌ ಟೆಸ್ಟ್‌

By Staff
|
Google Oneindia Kannada News

ಸಿಂಗಪೂರ : ಫುಟ್‌ಬಾಲ್‌ ಆಟಗಾರರಿಗೆ ಪಾಲಿಗ್ರಾಫ್‌ ಮತ್ತು ಲೀ- ಡಿಟೆಕ್ಟರ್‌ ಪರೀಕ್ಷೆಗಳನ್ನು ನಡೆಸಿ ಮ್ಯಾಚ್‌ ಫಿಕ್ಸಿಂಗ್‌ನಿಂದ ದೂರ ಉಳಿಯಲು ನಿರ್ಧರಿಸಿರುವ ಪ್ರಥಮ ದೇಶ ಸಿಂಗಪೂರ ಎನಿಸಿದೆ.

ಸಿಂಗಪೂರದ ಫುಟ್‌ಬಾಲ್‌ ಅಸೋಸಿಯೇಷನ್‌ ಅಧ್ಯಕ್ಷ ಮಾಹ್‌ ಬೌ ಟಾನ್‌ ಮತ್ತು ಪ್ರಾದೇಶಿಕ ಎಸ್‌ ಲೀಗ್‌ ಕ್ಲಬ್‌ನ ಅಧ್ಯಕ್ಷರ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆಟಗಾರರ ಟೀಮಿನಲ್ಲಿ ಶುದ್ಧತೆ ಇರುವಂತೆ ನೋಡಿಕೊಳ್ಳುವ ದೃಷ್ಠಿಯಿಂದ ಮತ್ತು ಫುಟ್‌ ಬಾಲ್‌ ಬೆಟ್ಟಿಂಗ್‌ನಲ್ಲಿ ಭಾಗವಹಿಸುವವರಲ್ಲಿ ಟೀಮಿನ ಬಗ್ಗೆ ಆತ್ಮ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಫ್‌.ಎ.ಎಸ್‌ನ ಮೂಲಗಳು ಹೇಳಿವೆ. ಕಾನೂನು ರೀತಿಯಲ್ಲಿ ತನ್ನದೇ ಸ್ಥಾನ ಪಡೆದಿರುವ ಫಟ್‌ಬಾಲ್‌ ಬೆಟ್ಟಿಂಗ್‌ನಲ್ಲಿ ಕಳೆದ ವರ್ಷ ಸುಮಾರು 117 ಮಿಲಿಯನ್‌ ಯುಎಸ್‌ಎ ಡಾಲರ್‌ ರೂಪಾಯಿ ವ್ಯವಹಾರ ನಡೆದಿರುವುದು ಗೊತ್ತಾಗಿದೆ. ಆದರೆ ಈ ವರ್ಷ ಈ ವ್ಯವಹಾರ 75ರಿಂದ 80 ಶೇಕಡಾದಷ್ಟು ಕಡಿಮೆಯಾಗಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ.

ಹಾಗೆಂದು ಬೆಟ್ಟಿಂಗ್‌ ಪೂರ್ತಿಯಾಗಿ ನಿಂತಿದೆ ಎಂದಲ್ಲ. ಇವಿಕಾ ರಾಗುಝ್‌ ಅವರನ್ನು ಆಟ ಆಡದಂತೆ ಬುಕ್ಕಿಯಾಬ್ಬ ಹಾಕಿ ಸ್ಟಿಕ್‌ನಿಂದ ಹೊಡೆದಿದ್ದು, ನಂತರ ಆತ ಜೈಲು ಸೇರಿರುವ ಘಟನೆ ಕಳೆದ ಅಕ್ಟೋಬರ್‌ 16ರಂದು ವರದಿಯಾಗಿತ್ತು. ಜರ್ಮನ್‌ನ ಲಟ್ಝ್‌ ಫಾನ್ನೆನ್‌ಸಸ್ಟಿಲ್‌ ಮತ್ತು ಆಸ್ಟ್ರೇಲಿಯಾದ ಮಿಕೋ ಜುರಿಲ್ಜಿ ಮ್ಯಾಚ್‌ ಫಿಕ್ಸಿಂಗ್‌ನ ಟ್ರಾಯಲ್‌ ಕೇಸ್‌ ಎದುರಿಸುತ್ತಿದ್ದಾರೆ.

ಆಟಗಾರರಿಗೆ ಲೀ ಡಿಟೆಕ್ಟರ್‌ ಪರೀಕ್ಷೆಯನ್ನು ಏರ್ಪಡಿಸುವುದನ್ನು ಏಷ್ಯಾದ ಫುಟ್‌ಬಾಲ್‌ ಒಕ್ಕೂಟದ ಮುಖ್ಯ ಕಾರ್ಯದರ್ಶಿ ವೇಲಪ್ಪನ್‌ ಸ್ವಾಗತಿಸಿದ್ದಾರೆ. ಇದರಿಂದಾಗಿ ರಾಷ್ಟ್ರಮಟ್ಟದ ಟೀಮಿನಲ್ಲಿಯೇ ಸಾಕಷ್ಟು ಸ್ಪರ್ಧೆ ಏರ್ಪಟ್ಟು ಕೊನೆಗೆ ಉಳಿಯುವ ಟೀಂ ಸಬಲವಾಗಿರುತ್ತದೆ ಎಂದು ಫಿಫಾದ ಬಾತ್ಮೀದಾರ ಹೇಳುತ್ತಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X