ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಟೀವಿಯ ಕನ್ನಡ ವಾಹಿನಿ ‘ನಮ್ಮ ಚಾನೆಲ್‌’ 10 ರಿಂದ ಆರಂಭ

By Staff
|
Google Oneindia Kannada News

ಬೆಂಗಳೂರು : ಈ ನಾಡು ಟಿವಿ ಬಳಗದ ಕನ್ನಡ ವಾಹಿನಿ ‘ನಮ್ಮ ಚಾನೆಲ್‌’ ಎಂಬ ಹೆಸರಿನೊಂದಿಗೆ ಡಿಸೆಂಬರ್‌ 10ರಿಂದ ಕಾರ್ಯಾರಂಭ ಮಾಡಲಿದೆ.

ದಿನದ 24 ಗಂಟೆಗಳ ಕಾಲವೂ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಈ ಟೀವಿ ಕನ್ನಡ ವಾಹಿನಿಯಲ್ಲಿ ಪ್ರತಿನಿತ್ಯ 3 ದೈನಿಕ ಧಾರಾವಾಹಿಗಳು ಹಾಗೂ ಐದು ಸಾಪ್ತಾಹಿಕ ಧಾರಾವಾಹಿಗಳು ಕಿರುತೆರೆಯಲ್ಲಿ ಮೂಡಿ ಬರಲಿವೆ. ಈಗಾಗಲೇ ಕನ್ನಡದಲ್ಲಿ ಇರುವ ಉದಯಾ ಟೀವಿ, ಉಷೆ ಟೀವಿ, ಸುಪ್ರಭಾತ, ಕಾವೇರಿ, ಸಿಟಿ ಕೇಬಲ್‌, ಡಿಡಿ ಚಂದನದ ಸಾಲಿಗೆ ಈಟೀವಿ ಬಳಗದ ‘ನಮ್ಮ ಚಾನೆಲ್‌’ ಹೊಸ ಸೇರ್ಪಡೆಯಾಗಲಿದೆ.

ಗಂಟೆಗೊಮ್ಮೆ ವಾರ್ತೆ : ಉತ್ತಮ ನ್ಯೂಸ್‌ ನೆಟ್‌ವರ್ಕ್‌ ಹೊಂದಿರುವ ಈ ಬಳಗ ಗಂಟೆಗೊಮ್ಮೆ ವಾರ್ತೆಯನ್ನೂ ಬಿತ್ತರಿಸುವುದಲ್ಲದೆ, ದಿನಕ್ಕೆರಡು ಕನ್ನಡ ಚಿತ್ರಗಳನ್ನೂ ಪ್ರಸಾರ ಮಾಡಲಿದೆ. ಈ ವಿಷಯವನ್ನು ಕನ್ನಡ ವಾಹಿನಿಯ ಮುಖ್ಯಸ್ಥರಾದ ಪಿ.ಕೆ. ಮಾನ್ವಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳು, ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡತ್ತೇವೆ ಎಂದು ಅವರು ಹೇಳಿದರು. ಕನ್ನಡ ಕಿರುತೆರೆಯ ಹಾಗೂ ರಜತ ಪರದೆಯ ಹಲವಾರು ಹೆಸರಾಂತ ನಿರ್ದೇಶಕರು ಈಟೀವಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನೂ ಸಿದ್ಧಪಡಿಸುತ್ತಿದ್ದಾರೆ.

ಮುನ್ನುಡಿ ಚಿತ್ರದ ಮೂಲಕ ಹೆಸರು ಮಾಡಿರುವ ಹಾಗೂ ಮಾಯಾಮೃಗ ಮೆಘಾ ಧಾರಾವಾಹಿಯ ನಿರ್ದೇಶಕತ್ರಯರಲ್ಲಿ ಒಬ್ಬರಾದ ಪಿ. ಶೇಷಾದ್ರಿ ನಿರ್ದೇಶನದ ಕಣ್ಣಾಮುಚ್ಚಾಲೆ, ಪ್ರಕಾಶ್‌ ಬೆಳವಾಡಿ ನಿರ್ದೇಶನದ ಮುಸ್ಸಂಜೆಯ ಕಥಾ ಪ್ರಸಂಗ, ಜೆ.ಕೆ. ಶ್ರೀನಿವಾಸ ಮೂರ್ತಿ ಅವರ ದಿಗ್ಧರ್ಶನದಲ್ಲಿ ಅಣ್ಣ ಬಸವಣ್ಣ, ರವೀ ನಿರ್ದೇಶದ ಸೃಷ್ಟಿ, ಪಿ.ಎಚ್‌. ವಿಶ್ವನಾಥ್‌ ನಿರ್ದೇಶನದ ಪ್ರೇಮಕಥೆಗಳೇ ಮೊದಲಾದ ಧಾರಾವಾಹಿಗಳು ಪ್ರಸಾರವಾಗಲಿವೆ ಎಂದು ಗೋಷ್ಠಿಯಲ್ಲಿ ಹಾಜರಿದ್ದ ನಿರ್ಮಾಪಕ ಕೆ. ಸುರೇಂದ್ರ ನಾಥ್‌ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X