Get Updates
Get notified of breaking news, exclusive insights, and must-see stories!

ವಿಶ್ವದ ಹಿರಿಯ ನಾಗರಿಕ ಗಿನ್ನೆಸ್‌ ಗೌರವದ ಬೆಂಜಮಿನ್‌ ಇನ್ನಿಲ್ಲ

ಓಕ್ಲಹೋಮ : ವಿಶ್ವದ ಹಿರಿಯ ನಾಗರಿಕ ಎಂದು ಗಿನ್ನೆಸ್‌ ಗೌರವ ಪಡೆದಿದ್ದ ಬೆಂಜಮಿನ್‌ ಹ್ಯಾರಿಸನ್‌ ಹಾಲ್‌ಕೂಂಬ್‌ ಎನ್ನುವ ಕೃಷಿಕ ಇಲ್ಲಿನ ಕಾರ್ನೆಜಿ ನರ್ಸಿಂಗ್‌ ಹೋಂನಲ್ಲಿ ನಿಧನರಾಗಿದ್ದಾರೆ. ಅವರಿಗೆ 111 ವರ್ಷ ವಯಸ್ಸಾಗಿತ್ತು .

ಕಳೆದ ಮೇ ತಿಂಗಳಲ್ಲಿ ವಿಶ್ವದ ಅತ್ಯಂತ ಹಿರಿಯ ನಾಗರಿಕ ಎಂದು ಗಿನ್ನೆಸ್‌ ಪುಸ್ತಕದಿಂದ ಗುರ್ತಿಸಿದ್ದ ಬೆಂಜಮಿನ್‌ ಅವರ ಸಾವು ಅತ್ಯಂತ ಶಾಂತಿಯುತವಾಗಿತ್ತು , ಕೊನೆ ಗಳಿಗೆಗಳಲ್ಲಿ 84 ವರ್ಷದ ಮಗಳು ಲಿಯಾನ ಫೋರ್ಡ್‌ ಅವರ ಜೊತೆಗಿದ್ದರು ಎಂದು ನರ್ಸಿಂಗ್‌ ಹೋಂನ ಬ್ರೆಂಟ್‌ ಬುಸ್ಬಿ ತಿಳಿಸಿದ್ದಾರೆ. ನಾವು ಆತ್ಮೀಯರೊಬ್ಬರನ್ನು ಕಳೆದುಕೊಂಡಿದ್ದೇವೆ. ಆದರೆ, ಅವರ ಸಾವಿಗೆ ನಿರ್ದಿಷ್ಟ ಕಾರಣ ನಮಗೆ ತಿಳಿದು ಬಂದಿಲ್ಲ ಎಂದು ಬುಸ್ಬಿ ಹೇಳಿದ್ದಾರೆ.

ಬೆಂಜಮಿನ್‌ ಅವರು ಜನಿಸಿದ್ದು 1889 ರ ಜುಲೈ 3 ರಂದು, ಕನ್ಸಾಸ್‌ನ ರಾಬಿನ್‌ಸನ್‌ನಲ್ಲಿ . ಓಕ್ಲಹೋಮ್‌ನ ನೈಋತ್ಯಕ್ಕಿರುವ ಅಪಾಚೆ ನಗರದ ಸಮೀಪದಲ್ಲಿ ಅವರ ತವರಿದೆ. ಗೋಧಿ, ಹತ್ತಿ ಬೆಳೆಗಳ ಕೃಷಿ ಹಾಗೂ ಪಶುಪಾಲನೆಯಲ್ಲಿಯೇ ಅವರು ತಮ್ಮ ಜೀವನವನ್ನು ಕಳೆದಿದ್ದಾರೆ. ಎರಡು ಮಹಾಯುದ್ಧಗಳ ಸಂದರ್ಭಗಳಲ್ಲಿ ಅಪಾರ ತೊಂದರೆ ಅನುಭವಿಸಿದ ಅವರು, 1996 ರಲ್ಲಿ ಗ್ಯಾಂಗ್ರಿನ್‌ ತೊಂದರೆಯಿಂದ ಆಸ್ಪತ್ರೆ ಸೇರಿದ್ದನ್ನು ಬಿಟ್ಟರೆ ಉಳಿದಂತೆ ಆರೋಗ್ಯವಾಗಿಯೇ ಇದ್ದರು.

(ರಾಯ್ಟರ್ಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+