‘ಕ್ರಿಕೆಟ್ ಬೇಡ ಮಗ, ಕೆಲಸಮಾಡು’ ಅಂದದ್ದಕ್ಕೆ ನೇಣು ಹಾಕಿಕೊಂಡ ಯುವಕ
*ಜತೀಂದ್ರ ದಶ್
ಭುವನೇಶ್ವರ್ : ಕ್ರಿಕೆಟ್ ಪಂದ್ಯದ ದೂರದರ್ಶನ ನೇರಪ್ರಸಾರವನ್ನು ನೋಡಲು ತಂದೆ ಅವಕಾಶ ಮಾಡಿಕೊಡಲಿಲ್ಲವೆಂದು ಬೇಸತ್ತ 17ವರ್ಷದ ಯುವಕನೊಬ್ಬ ನೇಣು ಹಾಕಿಕೊಂಡ ವರದಿ ಒರಿಸ್ಸಾದ ಹಳ್ಳಿಯಾಂದರಿಂದ ತಡವಾಗಿ ವರದಿಯಾಗಿದೆ.
ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವೆ ಶನಿವಾರ ನಡೆದ ಒಂದು ದಿನದ ಪಂದ್ಯವನ್ನು ನೋಡಲು ಚಂಡಮಾರುತ ಪೀಡಿತ ಜಗತ್ಸಿಂಗ್ಪುರ ಜಿಲ್ಲೆಯ ನೆಡದ ಗ್ರಾಮದ ಸರತ್ ಮಂಡಲ್ ತೀರಾ ಕುತೂಹಲಿಯಾಗಿದ್ದ. ಆದರೆ, ಆತನ ತಂದೆ ಪಂದ್ಯವನ್ನು ವೀಕ್ಷಿಸುವ ಬದಲು ಕೆಲಸ ಮಾಡಲು ಒತ್ತಾಯಿಸಿದ್ದರಿಂದ ಬೇಸತ್ತ ಸರತ್ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾನೆ.
ಮೃತ ಯುವಕನ ತಂದೆ ಬಿಚ್ ಮಂಡಲ್ ಅಂದಿನ ದುಡಿಮೆಯಿಂದ ಹೊಟ್ಟೆ ತುಂಬಿಸಿಕೊಳ್ಳುವ ದಿನಗೂಲಿ ಕಾರ್ಮಿಕ. ಕಳೆದ ವರ್ಷ ಅಪ್ಪಳಿಸಿದ ಭೀಕರ ಚಂಡಮಾರುತಕ್ಕೆ ಆತನ ಹೆಂಡತಿ ಬಲಿಯಾಗಿದ್ದಾಳೆ. ಸರತ್ ಕೂಡ ಅಪ್ಪನೊಂದಿಗೆ ದುಡಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸರತ್ನ ಮರಣವನ್ನು ಆಸಹಜ ಸಾವು ಎಂದು ದಾಖಲಿಸಿಕೊಂಡಿರುವ ಪೊಲೀಸರು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೋಸದಾಟ ಪ್ರಕರಣದಲ್ಲಿ ಭಾರತೀಯ ಕ್ರಿಕೆಟ್ನ ಒಂದು ಕಾಲದ ತಾರೆಗಳು ಅಪರಾಧಿ ಸ್ಥಾನದಲ್ಲಿ ನಿಂತಿರುವಾಗಲೂ ಜನತೆಯಲ್ಲಿ ಕ್ರಿಕೆಟ್ನ ಹುಚ್ಚು ಮಾಸಿಲ್ಲ ಅನ್ನುವುದನ್ನು ಈ ಘಟನೆ ಸಮರ್ಥಿಸುತ್ತದೆ. ಶನಿವಾರ ಕಟಕ್ನಲ್ಲಿ ನಡೆದ ಒಂದು ದಿನದ ಪಂದ್ಯವನ್ನು ವೀಕ್ಷಿಸಲು ಆಸಕ್ತರ ನೂಕು ನುಗ್ಗಲು ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
(ಐಎಎನ್ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications