ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆ.ಆರ್‌.ಪೇಟೆಯಲ್ಲಿ ಕಂದುಹುಳುವಿನ ಉಪದ್ರವ

By Staff
|
Google Oneindia Kannada News

ಕೆ.ಆರ್‌. ಪೇಟೆ : ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಕಂದು ಜಿಗಿ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು , ರೈತರು ತಕ್ಷಣವೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೆ.ಆರ್‌. ಪೇಟೆಯ ಸಹಾಯಕ ಕೃಷಿ ನಿರ್ದೇಶಕ ಕೆ. ರಾಮಕೃಷ್ಣೇ ಗೌಡ ತಿಳಿಸಿದ್ದಾರೆ.

ಬೆಣೆಯಾಕಾರದ ಕಂದು ಜಿಗಿ ಹುಳುಗಳು ಭತ್ತದ ತೆಂಡೆಯ ಬುಡ ಭಾಗದಲ್ಲಿ ರಸ ಹೀರುತ್ತವೆ. ಪೊಟ್ಯಾಷ್‌ ಅಭಾವ ಮತ್ತು ಮಿತಿ ಮೀರಿದ ಸಾರಜನಕ ಬಳಕೆ, ವಾತಾವರಣದ ಏರು ಪೇರಿನಿಂದಾಗಿ ಈ ಹುಳುಗಳು ವ್ಯಾಪಕವಾಗಿ ಹರಡುತ್ತಿವೆ ಎನ್ನಲಾಗಿದೆ. ಜಕ್ಕನ ಹಳ್ಳಿ, ಹಾವನೂರ, ತೆಂಡೇಕೆರೆ, ಶಿವಪುರ, ಅಕ್ಕಿಹೆಬ್ಬಾಳು, ಕಸಬಾ ಹೋಬಳಿಯಲ್ಲಿ ಈ ಹುಳುಗಳ ಬಾಧೆ ಹೆಚ್ಚಾಗಿ ಕಂಡು ಬಂದಿದೆ.

ಹುಳುಗಳ ನಿಯಂತ್ರಣಕ್ಕೆ, ಗದ್ದೆಯಲ್ಲಿ ಚೆನ್ನಾಗಿ ನೀರು ಬಸಿದು, ಭೂಮಿ ಸ್ವಲ್ಪ ಒಣಗುವಂತೆ ಮಾಡಬೇಕು. ಭತ್ತದ ಗಿಡಗಳ ಬುಡ ಭಾಗವನ್ನು ಅತ್ತಿತ್ತ ಸರಿಸಿ, ಬಿಸಿಲು ಬೀಳುವಂತೆ ಮಾಡಬೇಕು ಎಂದು ರೈತರಿಗೆ ಸೂಚಿಸಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X