ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಆಫೀಸಿನಲ್ಲಿ ಕಿರಿಕಿರಿಯ ದಿನ. ಬಾಸ್‌ನಿಂದ ಮಾತುಗಳನ್ನೂ ಕೇಳಬೇಕಾದೀತು. ಕೆಲಸದ ಅಚ್ಚುಕಟ್ಟಿನ ಬಗ್ಗೆ ಮೈಯ್ಯೆಲ್ಲಾ ಕಣ್ಣಾಗಿರಿ. ಎಷ್ಟು ದುಡಿದರೂ ಅವರ ಹಣೆಬರಹ ಇಷ್ಟೇ ಎನಿಸಬಹುದು, ಅನ್ಯಥಾ ಶರಣಂ ನಾಸ್ತಿ !ವೃಷಭ : ಆಡಳಿತದಲ್ಲಿ ಯಶಸ್ಸು ಗಳಿಸುತ್ತೀರಿ. ಅಂದಮೇಲೆ ಬಡ್ತಿ ಕೈಗೆಟಕುವ ಅಂತರದಲ್ಲೇ ಇದೆ. ಯಶಸ್ಸಿನ ಅಮಲು ಹತ್ತಿಸಿಕೊಳ್ಳದಿರುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.
ಮಿಥುನ : ಮಡದಿ, ಮಕ್ಕಳ ಮಮತೆ ನಿಮ್ಮ ಪಾಲಿಗೆ ಸಂಪೂರ್ಣ ದಕ್ಕುವ ದಿನವಿದು. ನೀವೂ ಕೂಡ ಪ್ರೀತಿಯನ್ನು ಮುಕ್ತವಾಗಿ ತೋರುವಲ್ಲಿ ಮುಜುಗರ ಪಡಬೇಡಿ.
ಕಟಕ : ಯಶಸ್ಸಿನ ದಿನಗಳ ಪಾಲಿಗೆ ಈ ದಿನವೂ ಸೇರಲಿದೆ. ಪ್ರಣಯಕ್ಕೆ ಅನುಕೂಲವಾದ ದಿನ. ವೃತ್ತಿಯಲ್ಲಿ ಶುಭ ಕಾಣುತ್ತೀರಿ.
ಸಿಂಹ : ತೀರ್ಥ ತಗೊಂಡರೆ ಶೀತ ಅನ್ನುವಂತಹ ದೇಹ ನಿಮ್ಮದು. ದೇಹವೇ ದೇಗುಲ ನೆನಪಿರಲಿ. ಆರೋಗ್ಯ ಉಪೇಕ್ಷಿಸಬೇಡಿ. ದಣಿದ ದೇಹಕ್ಕೆ ವಿಶ್ರಾಂತಿ ಅಗತ್ಯ.
ಕನ್ಯಾ : ಎಲ್ಲಾ ಇದ್ದು ಏನು ಬಂತು ಹೇಳಿ, ಮನಸ್ಸಿಗೆ ನೆಮ್ಮದಿ ಇಲ್ಲದಿದ್ದ ಮೇಲೆ. ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಬೇಸರ ಬೇಡ. ನಿಮ್ಮ ಬಗ್ಗೆ ಅವರದೂ ಇದೇ ದೂರು.
ತುಲಾ : ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದವರನ್ನು ಭೇಟಿಯಾಗುತ್ತೀರಿ. ಅವರಿಂದ ಏನಾದರೂ ಉಪಯೋಗವಾದೀತಾ ಎಂದು ನಿರೀಕ್ಷಿಸಿದರೆ ಅದು ನೀವೆಷ್ಟು ಮುಗ್ಧರು ಅನ್ನುವುದನ್ನು ತೋರುತ್ತದೆ.
ವೃಶ್ಚಿಕ : ಮನುಷ್ಯರ ಮೇಲೆ ಮತ್ತೆ ನಂಬಿಕೆ ಕಳಕೊಳ್ಳುತ್ತೀರಿ. ನಿಮ್ಮ ಕೆಲಸವನ್ನು ಮೌನದಿಂದ ಮಾಡಿಕೊಂಡು ಹೋಗುವುದಕ್ಕಿಂಥ ಉತ್ತಮ ದಾರಿ ಸದ್ಯಕ್ಕೆ ಬೇರೆ ಇಲ್ಲ.
ಧನಸ್ಸು : ಹೊಸತನ್ನು ಕಲಿಯಬೇಕು ಅನ್ನುವ ನಿಮ್ಮ ಹಂಬಲಕ್ಕೆ ಅವಕಾಶ ಕೂಡಿ ಬರಲಿದೆ. ಹಣಕಾಸಿನ ಸ್ಥಿತಿಯೂ ನಿನ್ನೆಗಿಂತ ಉತ್ತಮವಾಗಲಿದೆ.
ಮಕರ : ಊರು ಸುತ್ತುವ ಅವಕಾಶ ಹತ್ತಿರದಲ್ಲೇ ಇದೆ . ನಿಮಗಾಗಿ ಹೊಸ ಬಾಗಿಲುಗಳು ತೆರೆದುಕೊಂಡಿವೆ. ಅನುಕೂಲವಾದ ಕಡೆ ತೂರಿಕೊಳ್ಳುವ ಜಾಣರಾಗಿ.
ಕುಂಭ : ಇಷ್ಟ ದೈವವನ್ನು ಪೂಜಿಸಿ. ಕುಲದೈವ ನಿಮ್ಮ ಮೇಲೆ ಪ್ರೀತನಾಗಿರುವುದರಿಂದ ಎಲ್ಲಾ ನೀವು ಅಂದುಕೊಂಡ ಹಾಗೇ ಜರುಗುತ್ತದೆ.
ಮೀನ : ಅನೇಕ ಅಚ್ಚರಿಗಳು ನಿಮಗಾಗಿ ಕಾದಿವೆ. ಅನುಭವ ವ್ಯಾಪ್ತಿ ಹೆಚ್ಚುವಾಗ ಜೇಬು ಹಗುರಾಗುತ್ತಿದೆಯೆಂದು ಚಿಂತೆ ಬೇಡ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications