Get Updates
Get notified of breaking news, exclusive insights, and must-see stories!

ಗರ್ಭಿಣಿಯ ಏಡ್ಸ್‌ ಸೋಂಕು ಗರ್ಭದ ಮಗುವಿಗೆತಗುಲದಂತೆ ಚಿಕಿತ್ಸೆ!

ಬೆಂಗಳೂರು : ಭಾರತದಲ್ಲಿ ಆತ್ಮಹತ್ಯೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ನರಶಾಸ್ತ್ರ ತಜ್ಞರು ಇದನ್ನು ತಡೆಗಟ್ಟಲು ಸೂಕ್ತ ರೀತಿಯ ಅಧ್ಯಯನ ಮಾಡಬೇಕಾದುದು ಅತ್ಯಗತ್ಯ ಎಂದು ಕೇಂದ್ರ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವ ಸಿ.ಪಿ.ಠಾಕೂರ್‌ ಕಳಕಳಿಯ ಮನವಿ ಮಾಡಿದ್ದಾರೆ. ಸಂದರ್ಭ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ಯ 5ನೇ ಘಟಿಕೋತ್ಸವ, ಸೋಮವಾರ.

ಠಾಕೂರ್‌ ಅಧ್ಯಕ್ಷೀಯ ಭಾಷಣದ್ಲಲಿ ಹೆಕ್ಕಲಾದ ಕೆಲವು ಅಂಶಗಳು ಇಂತಿವೆ :

  • ಒಂದು ಡೋಸ್‌ ಆ್ಯಂಟಿ ರಿಟ್ರೋ ವೈರಸ್‌ ಔಷಧವನ್ನು ಚುಚ್ಚುಮದ್ದಿನ ಮೂಲಕ ಕೊಡುವುದರಿಂದ ಗರ್ಭಿಣಿ ಸ್ತ್ರೀಯರ ಹೊಟ್ಟೆಯಲ್ಲಿರುವ ಮಗುವಿಗೆ ಏಡ್ಸ್‌ ಸೋಂಕು ತಗುಲದಂತೆ ತಡೆಯಬಹುದು. ಆದರೆ ಈ ಔಷಧದ ಬೆಲೆಯನ್ನು ಸಾಮಾನ್ಯ ಜನರ ಕೈಗೆಟುಕುವಷ್ಟು ಅಗ್ಗ ಮಾಡುವಂತೆ ಡಬ್ಲ್ಯು ಟಿ ಓ ಗೆ ಸರ್ಕಾರ ಪತ್ರ ಬರೆದಿದೆ.
  • ರಾಷ್ಟ್ರೀಯ ಅಪರಾಧ ದಾಖಲಾತಿ ಕೇಂದ್ರದ ಪ್ರಕಾರ ದೇಶದಲ್ಲಿ ಆತ್ಮಹತ್ಯೆ ಸಂಖ್ಯೆ ಪ್ರತಿಶತ 10ಕ್ಕಿಂತಲೂ ಅಧಿಕವಾಗಿದೆ.
  • 1998ರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಆತ್ಮಹತ್ಯೆಯಲ್ಲಿ ನಂ.1 ರಾಜ್ಯ. ಬೆಂಗಳೂರು ನಂ. 1 ನಗರ.
  • ಬಹುತೇಕ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಬಿಹಾರದಂಥ ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಗಳು ಅತಿ ಕಡಿಮೆ. ಬೆಂಗಳೂರು ಮತ್ತು ಕೇರಳದಲ್ಲೇ ಏಕೆ ಹೆಚ್ಚು ಎಂಬುದಕ್ಕೆ ನರಶಾಸ್ತ್ರ ತಜ್ಞರು ಪಕ್ಕಾ ಅಧ್ಯಯನ ಮಾಡಬೇಕು.
  • ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ಏನು ಕಾರಣ ಎಂಬುದರ ಕುರಿತು ಇ್ತತೀಚೆಗೆ ನಿಮ್ಹಾನ್ಸ್‌ ಅಧ್ಯಯನ ನಡೆಸಿ, ಒಂದು ವರದಿಯನ್ನು ಕೊಟ್ಟಿದೆ. ಅದರ ಪ್ರಕಾರ ಆತ್ಮಹತ್ಯಾ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವು ಯಶಸ್ವಿಯಾದಲ್ಲಿ ಆತ್ಮಹತ್ಯೆ ಅಧಿಕವಾಗಿರುವ ಇತರೆ ಪ್ರದೇಶಗಳಲ್ಲೂ ಅವನ್ನು ಅನುಷ್ಠಾನಕ್ಕೆ ತರಲಾಗುವುದು.
  • ಮೂರ್ಛೆರೋಗದ ಬಗ್ಗೆ ಜನರಿಗೆ ತಿಳಿವಳಿಕೆ ಇಲ್ಲ. ಪ್ರತಿ 80 ಲಕ್ಷ ಮೂರ್ಛೆರೋಗಿಗಳಲ್ಲಿ 40 ಲಕ್ಷ ಮಂದಿ ಯಾವುದೇ ಚಿಕಿತ್ಸೆ ಪಡೆದಿಲ್ಲ. ಇದಕ್ಕೆ ಮದ್ದಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ ಓ) ಯ ನೆರವಿನಿಂದ ಮೂರ್ಛೆರೋಗ ಮಾದರಿ ಜಿಲ್ಲಾ ಚಿಕಿತ್ಸಾ ಕೇಂದ್ರಗಳನ್ನು ನಿಮ್ಹಾನ್ಸ್‌ ತೆರೆದಿದೆ. ಆದರೂ ಕುಗ್ರಾಮಗಳ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಅತ್ಯಗತ್ಯ.
  • 1996-97ರಲ್ಲಿ ಬಳ್ಳಾರಿಯಲ್ಲಿ ನಿಮ್ಹಾನ್ಸ್‌ , ಮೊದಲ ಜಿಲ್ಲಾ ಮಾದರಿ ಮಾನಸಿಕ ಆರೋಗ್ಯ ಕೇಂದ್ರ ಸ್ಥಾಪಿಸಿತು. ಈಗ ಕೇಂದ್ರ ಸರ್ಕಾರ ಇದೇ ರೀತಿ ಕನಿಷ್ಠ ರಾಜ್ಯಕ್ಕೊಂದು ಜಿಲ್ಲೆಯಲ್ಲಾದರೂ ಇಂಥ ಕೇಂದ್ರವನ್ನು ಸ್ಥಾಪಿಸಿ, ಪ್ರತಿವರ್ಷ 92 ಲಕ್ಷ ರುಪಾಯಿ ವೆಚ್ಚದಲ್ಲಿ ಅದನ್ನು ನಿರ್ವಹಿಸಲು ನಿರ್ಧರಿಸಿದೆ.
  • ಪ್ರತಿ ರಾಜ್ಯದ ಒಂದೊಂದು ವೈದ್ಯಕೀಯ ಕಾಲೇಜುಗಳಿಗೆ 1.5 ಕೋಟಿ ರುಪಾಯಿ ವೆಚ್ಚದಲ್ಲಿ ಕೇಂದ್ರ ಗ್ರಂಥಾಲಯವನ್ನು ಸ್ಥಾಪಿಸಲು ಕೇಂದ್ರ ನಿರ್ಧರಿಸಿದೆ. ಇದರಿಂದ ಆರೋಗ್ಯದ ಬಗೆಗೆ ಸಾಮಾನ್ಯರಿಗೂ ಹೆಚ್ಚಿನ ಮಾಹಿತಿ ಸಿಕ್ಕಂತಾಗುತ್ತದೆ. ಹಂತ ಹಂತಗಳಲ್ಲಿ ಹಮ್ಮಿಕೊಳ್ಳಲಾಗುವ ಈ ಯೋಜನೆಯ ಲಾಭ ಮೊದಲು ಬೆಂಗಳೂರು ವೈದ್ಯಕೀಯ ಕಾಲೇಜಿಗೆ ದೊರೆಯಲಿದೆ.
(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+