Get Updates
Get notified of breaking news, exclusive insights, and must-see stories!

ಪತ್ರಿ-ಕೆ ಓದಿ-ದಾ--ಗ-ಲೇ ಫರ್ನಾಂ-ಡಿ-ಸ್‌ --ಹೇ-ಳಿ-ಕೆ ತಿಳಿ-ದ-ದ್ದು : ಕೃಷ್ಣ

ಬೆಂಗಳೂರು : ವೀರಪ್ಪನ್‌ ಶಿಕಾರಿಗೆ ಗಡಿ ಭದ್ರಾತಾ ಪಡೆ ಕಳುಹಿಸುವ ಕೇಂದ್ರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಪರ್ನಾಂಡಿಸ್‌ ಅವರ ಧೋರಣೆಗೆ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಸೋಮವಾರ ನಗರದಲ್ಲಿ ಕಾಫಿ ಕುರಿತ ಒಂದು ದಿನದ ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವೀರಪ್ಪನ್‌ ಹಿಡಿಯುವ ವಿಷಯದಲ್ಲಿ ಉಭಯ ರಾಜ್ಯಗಳೂ (ಕರ್ನಾಟಕ ಮತ್ತು ತಮಿಳುನಾಡು) ಪ್ರಾಮಾಣಿಕ ಯತ್ನ ನಡೆಸುತ್ತಿವೆ. ಫರ್ನಾಂಡಿಸ್‌ ಅವರ ಹೇಳಿಕೆ ಪತ್ರಿಕೆಗಳಲ್ಲಿ ಓದಿದಾಗಲೇ ತಿಳಿದದ್ದು . ನಾವು ಎಸ್‌ಟಿಎಫ್‌ಗೆ ನೈತಿಕ ಬೆಂಬಲ ಕೊಡುವುದಕ್ಕೆ ಏನೇನು ಬೇಕೋ ಎಲ್ಲ ಮಾಡುತ್ತಿದ್ದೇವೆ. ಈ ಹೇಳಿಕೆಗೆ ನಾನು ಏನೂ ಪ್ರತಿಕ್ರಿಯೆ ನೀಡಲು ಇಷ್ಟ ಪಡುವುದಿಲ್ಲ ಎಂದರು.

ಸಮಾರಂಭದಲ್ಲಿ ಹಾಜರಿದ್ದ ಕೇಂದ್ರ ಜವಳಿ ಖಾತೆಯ ರಾಜ್ಯ ಸಚಿವ ವಿ.ಧನಂಜಯ ಕುಮಾರ್‌, ಫರ್ನಾಂಡಿಸ್‌ ಅವರ ಹೇಳಿಕೆ ಕೇಂದ್ರದ ನಿಲುವಿಗೆ ವ್ಯತಿರಿಕ್ತವಾದುದಲ್ಲ. ವೀರಪ್ಪನ್‌ನನ್ನು ಹಿಡಿಯಲು ಕೇಂದ್ರ ಮಿಲಿಟರಿ ಅಥವಾ ಅರೆ ಮಿಲಿಟರಿ ಪಡೆ ಕಳುಹಿಸುವುದು ತಕ್ಕುದಲ್ಲ ಎಂದಷ್ಟೇ ಅವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿದರು.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+