ರಾಮ ಮಂತ್ರವ ಜಪಿಸೋ ! ಸಾಲ ಇಲ್ಲಿ ದೊರೆಯುತ್ತದೆ !!
*ಗೌರವ್ ಸೈಗಲ್
ವಾರಾಣಸಿ : ಇಲ್ಲೊಂದು ಬ್ಯಾಂಕು. ಹೆಸರು ರಾಮ್ ರಾಂಪತಿ. ದುಡ್ಡು ಕಟ್ಟೋದು, ತೆಗೆಯೋದು ಇಲ್ಲಿ ನಡೆಯೋದಿಲ್ಲವಾದರೂ ನಿಕ್ಕರ್ ಹಾಕಿದ ಹಳ್ಳಿ ಹೈದರಿಂದ ಹಿಡಿದು ಸೂಟು ಬೂಟುಧಾರಿ ಎನ್‌ಆರ್‌ಐಗಳವರೆಗೆ ಕಣ್ಣಾಡಿಸಿದಷ್ಟೂ ಜನ ! ಇವರೆಲ್ಲಾ ಸಾಲ ಪಡೆಯುವ ಅರ್ಜಿ ಭರ್ತಿ ಮಾಡುತ್ತಿದ್ದಾರೆ. ಇದೇನಪ್ಪಾ ಬರೇ ಸಾಲ ಕೊಡೇಕೆ ಬ್ಯಾಂಕ್ ಉಂಟೇ ಅಂದುಕೊಂಡಿರಾ? ಹೌದು, ಇಲ್ಲಿ ಓದಿ...
ಪವಿತ್ರ ಯಾತ್ರಾ ಸ್ಥಳವಾದ ವಾರಾಣಸಿಯಲ್ಲಿ ಎಲ್ಲಾ ನಡೆಯುತ್ತಿರುವುದು ನಂಬಿಕೆಯ ಮೇಲೆ, 73 ವರ್ಷಗಳಷ್ಟು ಹಳೆಯ ರಾಮ್ ರಾಂಪತಿ ಬ್ಯಾಂಕ್ ಸಹ. ಇಲ್ಲಿ ಸಾಲ ಪಡೆಯಲು ಹತ್ತಾರು ಅರ್ಜಿ ತುಂಬ ಬೇಕಿಲ್ಲ. ವಿಟ್‌ನೆಸ್‌ಗೆ ಯಾರೂ ಸಹಿ ಹಾಕಬೇಕಿಲ್ಲ. ‘ನಾನು ಆದರ್ಶ ಪುರುಷ ಶ್ರೀರಾಮನ ಹೆಸರನ್ನು 1 ಲಕ್ಷ 25 ಸಾವಿರ ಬಾರಿ ಬರೆಯುತ್ತೇನೆ ಮತ್ತು ಸಸ್ಯಾಹಾರವನ್ನೇ ಅಭ್ಯಾಸ ಮಾಡುತ್ತೇನೆ’ ಎಂಬ ಒಕ್ಕಣೆ (ಷರತ್ತು) ಗೆ ಸಹಿ ಹಾಕಿದರೆ ಸಾಕು ! ಜೊತೆಗೆ ನಿಮ್ಮ ಬಯಕೆ ಏನು ಅಂತ ಬರೆಯಬೇಕು. ಖಾತ್ರಿಗೆ ನಿಮ್ಮ ಮೂಲಭೂತ ಖಾಸಗಿ ವಿಷಯಗಳನ್ನು ಒದಗಿಸಬೇಕಷ್ಟೆ.
ದಿನಕ್ಕೆ 500ರಂತೆ ಶ್ರೀರಾಮ ನಾಮ ಬರೆಯುತ್ತಾ ಹೋದರೆ, ಸರಿಯಾಗಿ 8 ತಿಂಗಳು 10 ದಿನಕ್ಕೆ 1 ಲಕ್ಷ 25 ಸಾವಿರ ರಾಮ ನಾಮ ಪೂರ್ತಿಯಾಗುತ್ತದೆ.
ಈ ಒಂದೇ ಒಂದು ನಂಬಿಕೆಯ ಮೇಲೆ ಬ್ಯಾಂಕು ಸಾಲ ಕೊಡುತ್ತಿದೆ. ಯಾವುದೇ ವ್ಯಕ್ತಿ ಅಷ್ಟೊಂದು ದಿನಗಳ ಕಾಲ ಸಸ್ಯಾಹಾರವನ್ನೇ ಅಭ್ಯಾಸ ಮಾಡಿಕೊಂಡಿದ್ದು, ಶ್ರೀರಾಮ ನಾಮ ಬರೆದರೆ ತಂತಾನೇ ರಾಮಭಕ್ತನಾಗುತ್ತಾನೆ. ಸಾಲ ತೆಗೆದುಕೊಳ್ಳುವಾಗ ಕೊಟ್ಟ ಮಾತು ಅವನಲ್ಲಿ ಗುನುಗುನಿಸುತ್ತದೆ. ಅವ ಬರೆದ ಸಾಲಿಗೆ ಖಂಡಿತ ಬದ್ಧನಾಗಿರುತ್ತಾನೆ ಎನ್ನುತ್ತಾರೆ ಬ್ಯಾಂಕ್ ಮ್ಯಾನೇಜರ್ ದಾಸ್ ಬಸುದೇವ್ ಪ್ರಸಾದ್.
ರಾಮ ನಾಮ ಬರೆಹ ಪೂರ್ತಿಯಾದ ತಕ್ಷಣ ಬರೆದ ಕಾಗದಗಳನ್ನು ಬ್ಯಾಂಕಿಗೆ ಒದಗಿಸಬೇಕು. ಅವನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಓದಲಾಗುವುದು. ಸಾಲ ಪಡೆದವ 11 ಹೊಸಬರನ್ನು ಬ್ಯಾಂಕಿಗೆ ಪರಿಚಯಿಸಬೇಕು. ಒಮ್ಮೆ ಓದಿದ ರಾಮ ನಾಮ ಕಾಗದಗಳು ಲಾಕರ್ ಸೇರುತ್ತವೆ. ಹೀಗೆ ಒಬ್ಬೊಬ್ಬರೂ 11 ಹೊಸಬರನ್ನು ಪರಿಚಯಿಸುವುದರಿಂದ ರಾಮ ಭಕ್ತರ ಸಂಖ್ಯೆ ವೃದ್ಧಿಸುತ್ತದೆ. ನೈತಿಕ ಪ್ರಜ್ಞೆ ಹಾಗೂ ಆಧ್ಯಾತ್ಮವನ್ನ ಪಸರಿಸುವ ಬ್ಯಾಂಕ್‌ನ ಉದ್ದಿಶ್ಯವೂ ಈಡೇರುತ್ತದೆ.
ರಾಮ ನಾಮ ಸಾಲದ ಜೊತೆಗೆ ‘ಜಪಮಣಿ ಸಾಲ’ ಹಾಗೂ ‘ಮಂತ್ರೋಚ್ಚಾರ ಸಾಲ’ ಯೋಜನೆಗಳೂ ಈ ವಿಶೇಷ ಬ್ಯಾಂಕ್‌ನಲ್ಲಿವೆ. ಮೂರೂ ಸಾಲದ ಯೋಜನೆಗಳ ಲಾಭ ಪಡೆದವರ ಸಂಖ್ಯೆ 70 ಸಾವಿರ ಮೀರಿದೆ. ಆದರೆ ಯೋಜನೆಗಳಲ್ಲಿ ‘ರಾಮ ನಾಮ ಯೋಜನೆ’ಯೇ ಜನಪ್ರಿಯ. ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರೂ ರಾಮ ನಾಮ ಸಾಲ ಪಡೆಯಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ. ಅವರು ತಾವು ವಾಸವಿರುವ ದೇಶಗಳಿಂದಲೇ ರಾಮ ನಾಮ ಕಾಗದ ರವಾನಿಸಲು ವಿಶೇಷ ಅಂಚೆ ವ್ಯವಸ್ಥೆ ಕೂಡ ಇದೆ.
ಇದೇನಪ್ಪಾ ಪಡೆದ ಸಾಲ (ಹಣ) ತೀರಿಸಲು ಇಷ್ಟು ಮಾಡಿದರಾಯಿತೆ ಎಂದಿರಾ? ಇದು ಹಣದ ಸಾಲ ಅಲ್ಲ. ಈಗ ಹೇಳಿರೋ ಹಾಗೆ ರಾಮ ನಾಮ ಸಾಲ. ಪಡೆದ ಸಾಲವನ್ನು ಹೆಸರು ಬರೆದು ತೀರಿಸಬೇಕಷ್ಟೆ. ಯಾಂತ್ರೀಕೃತ ಜಗತ್ತಿನಲ್ಲಿ ಮನಸ್ಸು ಯಂತ್ರದಷ್ಟು ನಿಸ್ತೇಜ ಆಗುವುದು ಸಹಜ. ದೇವುರು ದಿಂಡರು ಅನ್ನೋದಕ್ಕೆ ಪುರುಸೊತ್ತಿಲ್ಲ ಬೇರೆ. ಅದಕ್ಕೇ ಈ ನೆಪದಲ್ಲಾದರೂ ರಾಮನಿಗೆ ಸಾಲ ತೀರಿಸಿ ನೆಮ್ಮದಿ ಕಂಡುಕೊಳ್ಳುವ ಜನಮನ ಈ ಬ್ಯಾಂಕಿನ ಗ್ರಾಹಕರು.
ಈ ಪ್ರಗತಿ (?) ನೋಡಿದರೆ ಮುಂದೆ ದೇವಸ್ಥಾನಕ್ಕೆ ಪೂಜೆ ಮಾಡಿಸಲೂ ಹೊಸದೊಂದು ಯೋಜನೆ ಹುಟ್ಟು ಕೊಳ್ಳಬಹುದು. ಏನಂತೀರಿ?
(ಐಎಎನ್‌ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications