Get Updates
Get notified of breaking news, exclusive insights, and must-see stories!

ರಣಜಿ ಕ್ರಿಕೆಟ್‌: ಗೋವಾಕ್ಕೆ ಸೋಲು, ಸೂಪರ್‌ಲೀಗ್‌ಗೆ ಕರ್ನಾಟಕ

ಮಡಗಾಂವ್‌ : ಶನಿವಾರ ಮುಕ್ತಾಯಗೊಂಡ ಗೋವಾ ವಿರುದ್ಧದ ಪಂದ್ಯದಲ್ಲಿ ಪೂರ್ಣ ಜಯ ಗಳಿಸುವುದರೊಂದಿಗೆ ಕರ್ನಾಟಕ ತಂಡ ತನ್ನ ಲೀಗ್‌ ಲೆಕ್ಕಾಚಾರದಲ್ಲಿ 24 ಪಾಯಿಂಟ್‌ ಗಳಿಸಿ ಸೂಪರ್‌ ಲೀಗ್‌ನಲ್ಲಿ ಆಡುವುದನ್ನು ಖಚಿತಪಡಿಸಿಕೊಂಡಿತು.

ತಮಿಳುನಾಡು ಹಾಗೂ ಹೈದರಾಬಾದ್‌ ತಂಡಗಳು ದಕ್ಷಿಣ ವಲಯದಿಂದ ಸೂಪರ್‌ಲೀಗ್‌ಗೆ ಅರ್ಹತೆ ಗಳಿಸಿರುವ ಉಳಿದೆರಡು ತಂಡಗಳಾಗಿವೆ. ಅವುಗಳ ಕೊನೆಯ ಪಂದ್ಯಗಳು ಇನ್ನೂ ಮುಗಿದಿಲ್ಲವಾದ್ದರಿಂದ ವಲಯ ಚಾಂಪಿಯನ್‌ಷಿಪ್‌ ಪ್ರಶಸ್ತಿ ಯಾರಿಗೆಂಬುದು ಇನ್ನೂ ನಿರ್ಧಾರವಾಗಿಲ್ಲ . ಡಿಸೆಂಬರ್‌ 5 ರಿಂದ ಚೆನ್ನೈನಲ್ಲಿ ವಲಯ ತಂಡಗಳ ಒಂದು ದಿನದ ಪಂದ್ಯಗಳು ನಡೆಯಲಿವೆ.

ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿ ಆಟವಾಡಿದ್ದ ಗೋವಾ, ಕರ್ನಾಟಕಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಬಿಟ್ಟು ಕೊಟ್ಟಿದ್ದು ಕೇವಲ 18 ರನ್‌ಗಳ ಮುನ್ನಡೆ. ಆದರೆ, ಎರಡನೆ ಇನಿಂಗ್ಸ್‌ನಲ್ಲಿ ಕೇವಲ 136 ರನ್‌ಗಳಿಗೆ ಕುಸಿದ ಗೋವಾ ತಂಡ ಕರ್ನಾಟಕ ತಂಡಕ್ಕೆ ಕೇವಲ 119 ರನ್‌ಗಳ ಸವಾಲೆಸೆಯಿತು. ಒಂದು ವಿಕೆಟ್‌ ನಷ್ಟಕ್ಕೆ ಕರ್ನಾಟಕ ತಂಡ ಗೆಲುವು ಸಾಧಿಸಿತು.

ಸೂಪರ್‌ಲೀಗ್‌ ಪ್ರವೇಶಿಸಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ರಾಜ್ಯ ತಂಡಕ್ಕಿತ್ತು . ಈ ಮೊದಲಿನ ಪಂದ್ಯದಲ್ಲಿ ಕೇರಳ ವಿರುದ್ಧ ಕರ್ನಾಟಕ ಸೋಲನುಭವಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಹಿರಿಯ ಆಟಗಾರರ ಅನುಪಸ್ಥಿತಿ ಇದ್ದಾಗ್ಯೂ ಯುವ ಆಟಗಾರರು ರಾಜ್ಯ ತಂಡವನ್ನು ಸೂಪರ್‌ ಲೀಗ್‌ಗೆ ನಡೆಸಿರುವ ಬಗ್ಗೆ ತಂಡದ ಕೋಚ್‌ ಎಸ್‌.ಎಂ.ಎಚ್‌. ಕಿರ್ಮಾನಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಕೋರು ವಿವರ : ಗೋವಾ: ಒಂದನೇ ಇನಿಂಗ್ಸ್‌ - 303, ಎರಡನೇ ಇನಿಂಗ್ಸ್‌ - 136. ಕರ್ನಾಟಕ : ಒಂದನೇ ಇನಿಂಗ್ಸ್‌ - 321, ಎರಡನೇ ಇನಿಂಗ್ಸ್‌ - ಒಂದು ವಿಕೆಟ್‌ಗೆ 119.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+