ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

306ರ ಗುರಿ ತಲುಪುವುದು ಜಿಂಬಾಬ್ವೆಗೆ ಕಷ್ಟವಾಗಬಾರದು, ಇದು ಕ್ರಿಕೆಟ್ಟು

By Staff
|
Google Oneindia Kannada News

ಅಹ-ಮ-ದಾ-ಬಾ-ದ್‌ : ನಾಯಕನ ಆಟ ಹೇಗಿರಬೇಕೆಂದು ತೋರಿದ ಸೌರವ್‌ ಗಂಗೂಲಿ (8ಬೌಂಡರಿ, 6 ಸಿಕ್ಸರ್‌ ಒಳಗೊಂಡ 152 ಎಸೆತಗಳಲ್ಲಿ 144) ಹಾಗೂ ತನ್ನ ರನ್‌ ಕುಸುರಿ ಕಲೆ ಮೆರೆದ ದ್ರಾವಿಡ್‌ (88 ಎಸೆತಗಳಲ್ಲಿ 62) ಉತ್ತಮ ಆಟದಿಂದ ಜಿಂಬಾಬ್ವೆ ವಿರುದ್ಧ ಒಂದು ದಿನಗಳ ಸರಣಿಯ 2ನೇ ಪಂದ್ಯದಲ್ಲಿ ಭಾರತ 305 ರನ್‌ಗಳ ಭಾರಿ ಮೊತ್ತ ಗಳಿಸಿದೆ.

ಮಾಸ್ಟರ್‌ ಬ್ಲಾಸ್ಟರ್‌ ತೆಂಡೂಲ್ಕರ್‌ (8) ವಿಕೆಟ್ಟನ್ನು 22 ರನ್‌ ಜೋಡಿಸುವಷ್ಟರಲ್ಲೇ ಭಾರತ ಕಳೆದುಕೊಂಡಿತು. ನಂತರ ಗಂಗೂಲಿ ಹಾಗೂ ದ್ರಾವಿಡ್‌ ಜೋಡಿ ಭಾರತದ ಮೊತ್ತವನ್ನು 180ರ ಗಡಿ ದಾಟಿಸಿತು. ಸ್ಲಾಗ್‌ ಓವರ್‌ಗಳಲ್ಲಿ ರನ್‌ಗಳನ್ನು ದೋಚಿದ ಜೋಷಿ (12 ಎಸೆತಗಳಲ್ಲಿ 22), ಸಾಮಾನ್ಯ ಎನಿಸಿದರೂ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸಿದ ಯುವರಾಜ್‌ ಸಿಂಗ್‌, ಬದಾನಿ ಆಟದ ನೆರವಿನಿಂದ ಭಾರತ ಈ ಮೊತ್ತ ತಲುಪಿತು.

ಕ್ಷೇತ್ರ ರಕ್ಷಣೆಗೆ ಹೆಸರುವಾಸಿಯಾಗಿರುವ ಜಿಂಬಾಬ್ವೆ ಆಟಗಾರರು ಅಂತಿಮ ಓವರ್‌ಗಳಲ್ಲಿ ಕೆಲವು ಕ್ಯಾಚ್‌ಗಳನ್ನು ಚೆಲ್ಲಿದ್ದಲ್ಲದೆ, ಬೌಂಡರಿಗಳನ್ನು ತಡೆಯಲೂ ವಿಫಲರಾದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X