ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಭಾವನಾತ್ಮಕ ಸಮಸ್ಯೆಗಳಿಗೆ ಕೈ ಹಾಕಲು ಇದು ಹೇಳಿ ಮಾಡಿಸಿದ ದಿನ. ಅಂದಹಾಗೆ ನಿಮ್ಮೆದುರಿಗೆ ಸವಾಲಿನಂತೆ ಉಳಿದು ಬಂದಿರುವ ಕೆಲಸ ಪ್ರಾರಂಭಿಸಲು ಇಂದು ಮುಹೂರ್ತವೂ ಕೂಡಿ ಬಂದೀತು.ವೃಷಭ : ನಿನ್ನೆಯ ಯಶಸ್ಸೇ ಇಂದೂ ಮುಂದುವರಿಯಲಿದೆ. ಕಾಲ ನಿಮ್ಮದು. ಪ್ರಣಯ, ಪ್ರಯಾಣ ಜೊತೆ ಜೊತೆಗೇ ಇವೆ.
ಮಿಥುನ :ವೃಥಾ ಸಂಚಾರದಿಂದ ಬೇಜಾರು ಬೇಡ. ಅಂತಹ ತೊಂದರೆಯೇನಾಗುವುದಿಲ್ಲ.ಯಾರೋ ಏನೋ ಹೇಳುತ್ತಾರೆ ಎಂಬ ಹೆದರಿಕೆಯಿಂದ ಕೆಲಸ ಮಾಡುವ ಅನಗತ್ಯ ಉಮೇದು ಬೇಡ.
ಕಟಕ : ಬಂಧು ವರ್ಗದಲ್ಲಿ ಮನ್ನಣೆ. ಅಂದರೆ ಕುಟುಂಬದವರಿಗೆ ಊಟ ಹಾಕಿಸುವ ಯೋಗವಿದೆ. ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಸಿಗುವ ಅವಕಾಶವೂ ಇದೆ.
ಸಿಂಹ :ಸುಪ್ತ ಪ್ರತಿಭೆ ಪರಿಸ್ಥಿತಿಗೆ ಅನುಗುಣವಾಗಿ ಹೊರಬರುತ್ತದೆ. ಸಹೋದ್ಯೋಗಿಗಳಲ್ಲಿ ಕಿರಿಕಿರಿ ಮಾಡಿಕೊಳ್ಳದಂತೆ ಎಚ್ಚರವಿರಲಿ.
ಕನ್ಯಾ :ಸೋದರರೊಂದಿಗೆ ಜಗಳ ಕಾಯುವುದರಿಂದ ಪ್ರಯೋಜನವಿಲ್ಲ. ಮನದನ್ನಗೆ ಹಿತವೆಂದು ನಿಮ್ಮ ಇಮೇಜು ಕಳೆದು ಕೊಳ್ಳಬೇಡಿ.
ತುಲಾ : ಕಾಲಿಗೆ ಬಂದು ಬಿದ್ದಿರುವ ಅವಕಾಶವನ್ನು ಹಾಗೇ ಬಿಟ್ಟು ಬಿಡುವುದು ಉದ್ಧತಟತನ. ಹೋದರೊಂದು ಕಲ್ಲು ಸಿಕ್ಕರೆ ಹಣ್ಣು ತಾನೇ ? ಇಷ್ಟಕ್ಕೂ ನಿಮ್ಮ ಕಷ್ಟ ಏನು ?
ವೃಶ್ಚಿಕ : ಹಣ ಖಚಾಗುತ್ತದೆ ಅಂತ ಏನೂ ಮಾಡಲಾಗದು. ಆಗಬೇಕಾದ ಕೆಲಸ ಬಿಟ್ಟು ಬಿಡುವುದಕ್ಕಾಗುತ್ತಾ ? ಆದರೂ ಗುರುವಾಗಿ, ವಿಶ್ಲೇಷಣಾಕಾರರಾಗಿ ನೀವು ಮಿಂಚುತ್ತೀರಿ.
ಧನಸ್ಸು : ಪ್ರಯಾಣ ಯೋಗ. ಏನಾಗುವುದೋ ಏನೋ ಎಂಬ ಆತಂಕ ಸದ್ಯಕ್ಕೆ ದೂರಾಗಲಿದೆ. ಸಂಗೀತ ಕಲಿಯಬೇಕೆಂದುಕೊಂಡು ಎಷ್ಟು ತಿಂಗಳು ಕಳೆಯಿತು. ಸುಸಮಯ ಬಂದಿದೆ. ಆರಂಭಿಸಿ.
ಮಕರ : ಆಘಾತಕಾರಿ ಸುದ್ದಿ ಕಾದಿದೆ. ಸ್ನೇಹಿತರ ಮೇಲೆ ಸಿಟ್ಟು ಬೇಡ. ಇಂತಹ ಸಣ್ಣ ಸುದ್ದಿಗೆ ತಲೆ ಕೆಡಿಸಿಕೊಳ್ಳುವುದು ತರವಲ್ಲ. ಮೇಲಾಧಿಕಾರಿಗಳ ಜೊತೆ ಇರುಸು ಮುರುಸು ಪರಿಸ್ಥಿತಿ ಎದುರಿಸುವ ಪ್ರಸಂಗ ಬಂದೀತು.
ಕುಂಭ : ತಂತ್ರಜ್ಞಾನ ನಿಮ್ಮನ್ನು ಸೆಳೆಯುತ್ತದೆ. ನಿಮ್ಮ ಕೌಶಲ್ಯ ಪ್ರದರ್ಶನಕ್ಕೆ ಇದು ಸಕಾಲ. ಮೇಲಧಿಕಾರಿಗಳು ಹೇಳಿದ ಪೂಸಿ ಮಾತಿಗೆ ಪುಳಕಿತಗೊಂಡು ಬಿಟ್ಟೀರಾ ?
ಮೀನ : ಸಂತೋಷದ ದಿನ. ಇಲ್ಲ ಸಲ್ಲದ ಮಾತುಗಳಿಗೆ ಕವಿಗೊಡಬೇಡಿ. ಎಲ್ಲ ವ್ಯವಹಾರದಲ್ಲೂ ಜಯ ನಿಮ್ಮದೆ. ವ್ಯಾಪಾರದಲ್ಲಿ ಮುನ್ನಡೆ. ಧನಲಕ್ಷ್ಮಿಯ ಕೃಪೆ ನಿಮಗಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications