ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿ ಮತ್ತು ತಂತ್ರಜ್ಞಾನ : ರಾಜ್ಯದ ಹೆಜ್ಜೆಗಳಿಗೆ ವಿಶ್ವ ನಾಯಕರ ಮೆಚ್ಚುಗೆ

By Staff
|
Google Oneindia Kannada News

* ಇಮ್ರಾನ್‌ ಖುರೇಶಿ

ಬೆಂಗಳೂರು : ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವಿರುವ ಮತ್ತು ಅರಿವಿಲ್ಲದಿರುವ ಕ್ಷೇತ್ರಗಳ ನಡುವಿನ ಬಿರುಕು ಮುಚ್ಚುವ ದೃಷ್ಠಿಯಿಂದ ಕರ್ನಾಟಕ ಇಟ್ಟಿರುವ ಹೆಜ್ಜೆಗಳಿಗೆ ವಿಶ್ವದ ವಿವಿಧ ನಾಯಕರಿಂದ ಪ್ರಶಂಸೆ ಲಭಿಸಿದೆ.

ಕಳೆದ ಒಂದು ಸಾಲಿನಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ ವಿಶ್ವದ ವಿವಿಧ ರಾಷ್ಟ್ರ ಗಳ ನಾಯಕರು ರಾಜ್ಯದ ಈ ಪ್ರಯತ್ನ ವನ್ನು ಮೆಚ್ಚಿದ್ದಾರೆ. ಇತ್ತೀಚೆಗೆ ವಿಶ್ವ ಬ್ಯಾಂಕ್‌ ಅಧ್ಯಕ್ಷ ಜೇಮ್ಸ್‌ ವೋಫೆನ್ಸನ್‌ ಐಟಿಯಿಂದಾಗಿ ಉಂಟಾಗುವ ಅಂತರವನ್ನು ಸರಿಪಡಿಸಲು ರಾಜ್ಯ ಸರಕಾರದ ಯತ್ನವನ್ನು ಹೊಗಳಿರುವುದಲ್ಲದೆ, ವಿಶ್ವ ಬ್ಯಾಂಕ್‌ ಕೂಡ ರಾಜ್ಯದ ಯೋಜನೆಗಳ ಜೊತೆಗೆ ಕೈಜೋಡಿಸಲು ಇಷ್ಟಪಡುತ್ತದೆ ಎಂದಿದ್ದಾರೆ. ಬಡತನ, ಅನಕ್ಷರತೆ ಮತ್ತು ನಿರುದ್ಯೋಗ ಸಮಸ್ಯೆಗಳಿದ್ದರೂ, ಐಟಿ ಕ್ಷೇತ್ರದ ವಿವಿಧ ಆಯಾಮಗಳಲ್ಲಿ , ಭಾರತದಲ್ಲಿ ಮುಖ್ಯವಾಗಿ ಕರ್ನಾಟಕ ವಿಶ್ವದ ಇತರ ರಾಷ್ಟ್ರಗಳಿಗೆ ಪ್ರಾಯೋಗಿಕ ರಾಜ್ಯವಾಗಿದೆ.

ಬೆಂಗಳೂರು ಮೂಲದ ಇನ್ಫೋಸಿಸ್‌ನ ಎನ್‌.ಆರ್‌. ನಾರಾಯಣ ಮೂರ್ತಿ ಹೇಳುವ ಪ್ರಕಾರ, ನಾಡಿನ ಪ್ರತಿಯಾಬ್ಬ ವ್ಯಕ್ತಿಗೂ ಐಟಿಯನ್ನು ತಲುಪುವ ವರೆಗೆ ಕಾಯುವುದು ಸಾಧ್ಯವಿಲ್ಲ. ನಿಧಾನವಾಗಿ ಐಟಿ ನಾಡಿನ ಮೂಲೆಗೆ ತನ್ನಿಂದ ತಾನೇ ತಲುಪುತ್ತದೆ. ವಿಶ್ವ ಬ್ಯಾಂಕ್‌ ಅಧ್ಯಕ್ಷರು ಇನ್ಫೋಸಿಸ್‌ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಲಿಲ್‌ ತಾನೇಜಾ ಎಂಬ ಐಟಿ ಇಂಜಿನಿಯರ್‌ ನಾರಾಯಣ ಮೂರ್ತಿ ಜೊತೆಗೆ ಅಲ್ಲಿಗೆ ಬಂದಿದ್ದರು.

ತಾನೇಜಾ ಅವರನ್ನು ಕರೆಸಿದ್ದು, ಕೃಷಿ ಮಾಹಿತಿ ನೀಡುವ ಫಾರ್ಮರ್ಸ್‌ ಡಾಟ್‌ ಕಾಮ್‌ ಎಂಬ ಹೊಸ ವೆಬ್‌ ಸೈಟ್‌ ಕುರಿತು ವಿವರಿಸಲು ಎಂದು ನಾರಾಯಣ ಮೂರ್ತಿ ಹೇಳುತ್ತಾರೆ. ತಾನೇಜಾ ನೇತೃತ್ವದ ವೆಬ್‌ ಸೈಟ್‌ ಹಿಮಾಚಲ ಪ್ರದೇಶದಲ್ಲಿನ ಸೇಬು ಬೆಳೆಗಾರರಿಗೆ ಮಧ್ಯವರ್ತಿಗಳ ಸಹಾಯವಿಲ್ಲದೇ ಸೇಬು ಮಾರಾಟಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ರೀತಿ ರೈತ ಮತ್ತು ಮಾರಾಟಗಾರರ ನಡುವೆ ನೇರ ಸಂಪರ್ಕ ಕಲ್ಪಿಸುವ ವೆಬ್‌ ಸೈಟ್‌ನ ಸೇವೆ ಇತರ ಬೆಳೆಗಾರರಿಗೂ ಸದ್ಯದಲ್ಲಿಯೇ ಲಭಿಸಲಿದೆಯಂತೆ.

ಕಂಪ್ಯೂಟರ್‌ ಮೂಲಕ ಜನರ ಕೈಯಲ್ಲಿ ಪಾರದರ್ಶಕ ಆಡಳಿತದ ಪ್ರತಿ

ಬೆಳೆಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಜವಾಬ್ದಾರಿಯನ್ನೂ ಸೈಟ್‌ ಹೊತ್ತುಕೊಳ್ಳಲಿದೆ. ಡಿಜಿಟಲ್‌ ರೆವಲ್ಯೂಷನ್‌ ಎಂದು ಕರೆಯುವ ಈ ಹೊಸ ಕಾರ್ಯಕ್ರಮ ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದ ರೈತರಿಗೇ ಹೆಚ್ಚು ಉಪಯೋಗವಾಗಲಿದೆ ಎಂದು ತಾನೇಜಾ ಐಎಎನ್‌ಸ್‌ನೊಡನೆ ಹೇಳಿದ್ದಾರೆ. ಉದಾಹರಣೆಗೆ ಹೇಳುವುದಿದ್ದರೆ, ಬೆಳ್ಳಂದೂರು ಪ್ರಾದೇಶಿಕ ಆಡಳಿತ ಕಂಪ್ಯೂಟರೀಕರಣಗೊಂಡಿದ್ದು, ಗ್ರಾಮಸ್ಥರು ತಮಗೆ ಬೇಕಾದ ದಾಖಲೆಗಳನ್ನು ಕಂಪ್ಯೂಟರ್‌ ಮೂಲಕ ಗಮನಿಸಬಹುದು. ಒಂದು ಬರ್ತ್‌ ಸರ್ಟಿಫಿಕೇಟ್‌ ತರಬೇಕಿದ್ದರೆ, ಮೂರು ದಿನ ಓಡಾಡ ಬೇಕಾಗಿತ್ತು. ಆದರೆ ಈಗ ಅರ್ಧ ಗಂಟೆಯಲ್ಲಿ ಬೇಕಾದ ಸರ್ಟಿಫಿಕೇಟ್‌ ಪಡೆಯಬಲ್ಲೆ ಎಂದು ಬೆಳ್ಳಂದೂರು ನಿವಾಸಿ ಹೊನ್ನಪ್ಪ ಕಂಪ್ಯೂಟರೀಕರಣದ ಉಪಯೋಗವನ್ನು ಮೆಚ್ಚಿ ಕೊಂಡು ಹೇಳುತ್ತಾರೆ. ಇದರಿಂದ ಸಮಯ ಮತ್ತು ಸುತ್ತಾಡಲು ಬಳಸುವ ಹಣವೂ ಉಳಿತಾಯವಾಗುತ್ತದೆ. ಕೀಟ ನಾಶಕ, ಬೆಳೆ ಕೊಯ್ಲು , ಹವಾಮಾನ ಮತ್ತಿತರ ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಂಪ್ಯೂಟರ್‌ ಮೂಲಕ ಪಡೆಯುವುದು ಸುಲಭ ಎಂದು ಅಲ್ಲಿನ ಇನ್ನೊಬ್ಬ ನಿವಾಸಿ ಜಗನ್ನಾಥ್‌ ಹೇಳುತ್ತಾರೆ. (ಐಎಎನ್‌ಎಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X