Get Updates
Get notified of breaking news, exclusive insights, and must-see stories!

ಹೃತಿಕ್‌ ಚಿತ್ರ ನೋಡಿಓಟು ನಮಗೇ ನೀಡಿ !

*ಫಕೀರ್‌ ಹಸ್ಸನ್‌

ಡರ್ಬನ್‌ : ಅಮೆರಿಕದಲ್ಲಿ ನ ಚುನಾವಣಾ ಹುದ್ದರಿಗಳು ಅಲ್ಲಿನ ಭಾರತೀಯ ನಿವಾಸಿಗಳ ಓಟು ಗಿಟ್ಟಿಸಿಕೊಳ್ಳಲಿಕ್ಕೆ ಏನೆಲ್ಲಾ ಮಾತು ಖರ್ಚು ಮಾಡಿದ್ದು ನಿಮಗೆ ಗೊತ್ತು . ಆದರೆ, ಇಲ್ಲಿನ ಚುನಾವಣಾ ಹುದ್ದರಿಗಳು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ದಕ್ಷಿಣ ಆಫ್ರಿಕಾದ ವಿರೋಧ ಪಕ್ಷ ಡೆಮಾಕ್ರಟಿಕ್‌ ಅಲೈಯನ್ಸ್‌ (ಡಿಎ) ಭಾರತೀಯರ ಭಾವನೆಗಳನ್ನು ತನ್ನ ಬಂಡವಾಳವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಡಿಎ ಪಕ್ಷ ಬಳಸಿಕೊಳ್ಳುತ್ತಿರುವುದು ಬಾಲಿವುಡ್‌ನ ಹೊಸ ಮಿಂಚು ಹೃತಿಕ್‌ ರೋಷನ್‌ನನ್ನು. ಅಂದಹಾಗೆ, ಮಂಗಳವಾರ (ಡಿ.5) ಅಲ್ಲಿ ಚುನಾವಣೆ.

ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯರ ಏಕಮಾತ್ರ ಸಾಪ್ತಾಹಿಕದ ಇತ್ತೀಚಿನ ಸಂಚಿಕೆಯಲ್ಲಿ ಪೂರ್ಣ ಪುಟವೊಂದರಲ್ಲಿ ಹೃತಿಕ್‌ ರೋಷನ್‌ನ ಭಾವ ಚಿತ್ರವನ್ನು ಪಕ್ಷ ಪ್ರಾಯೋಜಿಸಿದೆ. ಪತ್ರಿಕೆಗೆ ಸಾವಿರಾರು ಓದುಗರಿದ್ದಾರೆ. ಅವರಲ್ಲಿ ಮಹಿಳೆಯರು ಹಾಗೂ ಹದಿ ಹರೆಯದವರ ಸಂಖ್ಯೆಯೇ ಹೆಚ್ಚು . ಇವರೆಲ್ಲರ ಗಮನವನ್ನು ತನ್ನತ್ತ ಸೆಳೆಯುವುದು ಡಿಎ ಪಕ್ಷದ ಪ್ರಚಾರ ತಂತ್ರ.

ಡಿಎ ಪಕ್ಷದ ಪ್ರಾಯೋಜಿತ ಹೃತಿಕ್‌ ರೋಷನ್‌ನ ಭಾವಚಿತ್ರವನ್ನು ಪ್ರಕಟಿಸಿದ ಮಾತ್ರಕ್ಕೆ ನಾವು ಆ ಪಕ್ಷವನ್ನು ಬೆಂಬಲಿಸುತ್ತಿದ್ದೇವೆ ಎಂದರ್ಥವಲ್ಲ ಎಂದು ಪತ್ರಿಕೆಯ ಸಂಪಾದಕ ಬ್ರಿಜಾಲ್‌ ರಾಮ್‌ಗುತ್ತಿ ಸ್ಪಷ್ಟೀಕರಣ ನೀಡಿದ್ದಾರೆ. ನಾವು ಹೃತಿಕ್‌ ಪೋಸ್ಟರ್‌ ಪ್ರಕಟಿಸಿರುವುದು ಕೇವಲ ನಮ್ಮ ಓದುಗರ ಅಭಿರುಚಿಯ ಹಿನ್ನೆಲೆಯಲ್ಲಿ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ. ಹೃತಿಕ್‌ ಇಲ್ಲಿ ಭಾರೀ ಜನಪ್ರಿಯ. ಆತನ ಹೊಸ ಚಿತ್ರ ಕಹೋ ನ ಪ್ಯಾರ್‌ ಹೈ ಅಂತೂ ಸಂಚಲನೆಯನ್ನೇ ಸೃಷ್ಟಿಸಿದೆ. ಸಹ ಪ್ರಾಯೋಜಕತ್ವದಲ್ಲಿ ಹೃತಿಕ್‌ನ ಭಾವಚಿತ್ರವನ್ನು ಪ್ರಕಟಿಸಲು ನಮ್ಮ ಜಾಹಿರಾತು ವಿಭಾಗ ಆಹ್ವಾನ ನೀಡಿತ್ತು . ಈ ಸಂದರ್ಭವನ್ನು ಡಿಎ ಪಕ್ಷ ಬಳಸಿಕೊಂಡಿತು ಎಂದು ಚಿತ್ರ ಪ್ರಕಟವಾದ ಸಂದರ್ಭದ ಕುರಿತು ಸಂಪಾದಕರು ಹೇಳುತ್ತಾರೆ.

ಭಾರತೀಯರನ್ನು ಓಲೈಸುವ ಕೆಲಸದಲ್ಲಿ ತೊಡಗಿರುವುದು ಡಿಎ ಪಕ್ಷ ಮಾತ್ರವಲ್ಲ . ಪ್ರಸ್ತುತ ಆಡಳಿತದಲ್ಲಿರುವ ಅಫ್ರಿಕನ್‌ ನ್ಯಾಶನಲ್‌ ಕಾಂಗ್ರೆಸ್‌(ಎಎನ್‌ಸಿ) ಮತ್ತು ಹಿರಿಯ ರಾಜಕಾರಣಿ ಅಮಿಚಂದ್‌ ಬನ್ಸಾರಿ ಅವರ ಅಲ್ಪ ಸಂಖ್ಯಾತರ ಘಟಕಗಳು ವಿವಿಧ ಕಾರಣಗಳನ್ನೊಡ್ಡಿ ಭಾರತೀಯರ ಮನೆಗಳನ್ನು ಗಂಭೀರವಾಗಿ ತಟ್ಟುತ್ತಿವೆ. ಬನ್ಸಾರಿ ಅವರು ಸ್ಥಳೀಯ ಭಾರತೀಯ ತಂಡಗಳ ಸಂಗೀತ ಪ್ರದರ್ಶನಗಳನ್ನು ಏರ್ಪಡಿಸಿ, ಅಲ್ಲಿ ಬಾಂಗ್ರಾದಂಥ ಪ್ರಸಿದ್ಧ ಭಾರತೀಯ ಸಂಗೀತ ಹಾಡಿಸುವ ಮೂಲಕ ಭಾರತೀಯರನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ರಾಜಕೀಯ ಪಕ್ಷಗಳ ಎಲ್ಲಾ ಪ್ರಯತ್ನಗಳನ್ನು ಗಂಭೀರವಾಗಿ ಗಮನಿಸುತ್ತಿರುವ ಭಾರತೀಯ ನಿವಾಸಿಗಳ ಮನಸ್ಸು ಯಾರತ್ತ ಅನ್ನುವುದು ಈವರೆಗೂ ಸ್ಪಷ್ಟವಾಗಿಲ್ಲ . ಬುಧವಾರ ತೆರೆದುಕೊಳ್ಳುವ ಮತಪೆಟ್ಟಿಗೆ ಆ ರಹಸ್ಯವನ್ನು ಬಿಚ್ಚಿಡುತ್ತದೆ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+