ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶವಾಣಿಯಲ್ಲಿ ಡಿ. 3ರಂದು ರಾತ್ರಿ ‘ನಕ್ಷತ್ರ ವೀಕ್ಷಣೆ’ ನೇರ ಪ್ರಸಾರ

By Staff
|
Google Oneindia Kannada News

ಬೆಂಗಳೂರು : ನಿತ್ಯವೂ ನಾವು ನೀಲಾಕಾಶದಲ್ಲಿ ನಕ್ಷತ್ರಗಳನ್ನು ಕಾಣುತ್ತೇವೆ. ಹಲವು ನಕ್ಷತ್ರಗಳು ಹಾಗೂ ನಕ್ಷತ್ರ ಪುಂಜಗಳು ನಮ್ಮ ಕಣ್ಮನ ಸೆಳೆಯುತ್ತವೆ. ವಿವಿಧ ಆಕಾರಗಳಲ್ಲಿರುವ ನಕ್ಷತ್ರ ಪುಂಜಗಳು ಯಾವುವು ಎಂದು ತಿಳಿದುಕೊಳ್ಳುವ ತವಕ ನಿಮ್ಮಲ್ಲೂ ಹಲವು ಬಾರಿ ಮೂಡಿರಬಹುದು.

ಈ ಕುತೂಹಲ ತಣಿಸುವ ಹಾಗೂ ನಕ್ಷತ್ರ ಪುಂಜಗಳ ಬಗ್ಗೆ ಅರಿಯುವ ಅವಕಾಶ ನಿಮಗೀಗ ಲಭಿಸಿದೆ. ಆಗಸದಲ್ಲಿ ಮಿನುಗುವ ಚುಕ್ಕಿಗಳ ಬಗ್ಗೆ ಹಾಗೂ ಆಕಾಶಕಾಯಗಳ ಬಗ್ಗೆ ಅರಿಯುವ ಉತ್ಸಹ ನಿಮ್ಮಲ್ಲಿದ್ದರೆ, ಭಾನುವಾರ ರಾತ್ರಿ 8 ಗಂಟೆಗೆ ತಪ್ಪದೆ ಬಿಡುವು ಮಾಡಿಕೊಳ್ಳಿ.

ಕೈಯಲ್ಲೊಂದು ಪುಟ್ಟ ಟ್ರಾನ್ಸಿಸ್ಟರ್‌ ಹಿಡಿದು ನಿಮ್ಮ ಮನೆಯ ಮಹಡಿಯ ಮೇಲೆ ಬನ್ನಿ. ಬೆಂಗಳೂರು ಆಕಾಶವಾಣಿ ಡಿಸೆಂಬರ್‌ 3ರ ರಾತ್ರಿ 8 ಗಂಟೆಗೆ ನಕ್ಷತ್ರ ವೀಕ್ಷಣಾ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ. ರೇಡಿಯೋದಲ್ಲಿ ಬರುವ ವೀಕ್ಷಕ ವಿವರಣೆಯನ್ನು ಕೇಳುತ್ತಾ ನೀವು ನಿಮಗೆ ಅರಿಯದ ಎಷ್ಟೋ ವಿಷಯಗಳನ್ನು ತಿಳಿಯಬಹುದಾಗಿದೆ.

ಅರ್ಧ ಗಂಟೆ ಕಾಲ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಕಿವಿಗೆ ರೇಡಿಯೋ ಇಟ್ಟು, ಕಣ್ಣನ್ನು ಮುಗಿಲಿನತ್ತ ನೆಟ್ಟು ನೀವು ನಿತ್ಯ ನೋಡುವ ನಕ್ಷತ್ರಗಳ ಹೆಸರೇನು. ಅದು ಯಾವ ಆಕಾಶ ಕಾಯ, ಇದು ಯಾವ ನಕ್ಷತ್ರ ಪುಂಜ ಎಂಬುದನ್ನು ತಿಳಿಯಬಹುದು. ವಿದ್ಯಾರ್ಥಿಗಳಿಗೆ ಹಾಗೂ ಖಗೋಳ ಶಾಸ್ತ್ರದ ಬಗ್ಗೆ ಆಸಕ್ತಿ ಇರುವವರಿಗೆ ಇದು ನಿಜಕ್ಕೂ ಒಂದು ಉತ್ತಮ ಅವಕಾಶ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X