ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

108 ದಿನಗಳ ರಾಜ್‌ ವನವಾಸದ ಅನುಭವ ದೂರದರ್ಶನದಲ್ಲಿ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು ಆಕಾಶವಾಣಿ ಕಳೆದ ಮೂರು ದಿನಗಳಿಂದ ‘ಆ 108 ದಿನಗಳು’ ಎಂಬ ಶೀರ್ಷಿಕೆಯಡಿ ಡಾ. ರಾಜ್‌ಕುಮಾರ್‌ ಅವರ ಅರಣ್ಯವಾಸದ ಅನುಭವಗಳ ಸರಣಿಯನ್ನು ಬಿತ್ತರಿಸುತ್ತಿದೆ. ಈಗ ಅಪಹರಣ ಅವಧಿಯ ಅನುಭವದ ಸುತ್ತ ಹೆಣೆದ ಕಾರ್ಯಕ್ರಮವೊಂದನ್ನು ಅತಿ ಶೀಘ್ರದಲ್ಲಿಯೇ ದೂರದರ್ಶನವೂ ಪ್ರಸಾರ ಮಾಡಲು ಸಜ್ಜಾಗಿದೆ.

13 ಭಾಗಗಳಲ್ಲಿ ಪ್ರಸಾರವಾಗುವ ‘ಅರಣ್ಯದ ದಿನಚರಿ’ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ರಾಜ್‌ ಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ವಾರ್ತಾ ಪ್ರಸಾರದ ನಂತರ 15 ನಿಮಿಷಗಳ ಕಾಲ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಜಿ.ಎಂ. ಶಿರಹಟ್ಟಿ ತಿಳಿಸಿದ್ದಾರೆ.

ರಾಜ್‌ಕುಮಾರ್‌ ಅವರ ಬದುಕಿಗೆ ಸಂಬಂಧಿಸಿದ ರಸಪ್ರಶ್ನೆ , ರಾಜ್‌ ಅಭಿನಯದ ಚಿತ್ರಗಳ ದೃಶ್ಯದ ತುಣುಕುಗಳನ್ನು ಈ ಧಾರಾವಾಹಿ ಒಳಗೊಂಡಿರುತ್ತದೆ ಎಂದು ತಿಳಿಸಿರುವ ಅವರು, ಈ ಕಾರ್ಯಕ್ರಮದಿಂದ ದೂರದರ್ಶನ ಸುಮಾರು 8 ಲಕ್ಷ ರುಪಾಯಿ ಆದಾಯ ನಿರೀಕ್ಷಿಸಿದೆ ಎಂದೂ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X