• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪ್ಪ, ಅಮ್ಮನನ್ನು ಒಪ್ಪಿಸಿ ಕನಸಿನ ಹುಡುಗನ ಕೈ ಹಿಡಿಯುತ್ತೇನೆ

By Staff
|

* ಶ್ಯಾಮ್‌ ಭಾಟಿಯಾ

ಲಂಡನ್‌ : ನನ್ನದು ಅರೇಂಜ್‌ ಮ್ಯಾರೇಜ್‌ ಅಲ್ಲ. ನನಗೆ ನನ್ನದೇ ಕನಸಿನ ಹುಡುಗ ಬೇಕು. ಹಾಗಂತ ಅಪ್ಪ, ಅಮ್ಮನ ಒಪ್ಪಿಗೆ ಇಲ್ಲದೆ ಮದುವೆಯಾಗುವುದಿಲ್ಲ. ಅವರ ಒಪ್ಪಿಗೆ ಪಡೆದೇ ಕನಸಿನ ಹುಡುಗನ ಕೈ ಹಿಡಿಯುತ್ತೇನೆ. ಇದು ವಿಶ್ವ ಸುಂದರಿಯರ ಕಣದಲ್ಲಿ ಯಶಸ್ವಿಯಾಗಿ ಓಡಿರುವ ಭಾರತದ ಚಲುವೆ ಪ್ರಿಯಾಂಕಾಳ ಅಣಿಮುತ್ತು.

ವಿಶ್ವ ಸುಂದರಿಯಾಗಿ ಆಯ್ಕೆಯಾದ ತಕ್ಷಣ ಐಎಎನ್‌ಎಸ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಮಾತುಗಳನ್ನು ಆಡಿರುವ ಪ್ರಿಯಾಂಕಾ , ನನ್ನ ಪೋಷಕರು ವಿಶಾಲ ಮನೋಭಾವ ಉಳ್ಳವರು ಹಾಗಾಗಿ ನಾನು ಇಷ್ಟಪಟ್ಟವನ ಜೊತೆ ನನ್ನ ಮದುವೆ ನಡೆಯುತ್ತದೆ. ಇಡೀ ಜೀವನವನ್ನು ಸವೆಸಬೇಕಾದ ನನ್ನ ಸಂಗಾತಿಯನ್ನು ನಾನೇ ಹುಡುಕಿಕೊಳ್ಳಬೇಕು. ಆದರೆ ತಂದೆ-ತಾಯಿಯನ್ನು ಬಿಟ್ಟು ಯೋಚಿಸುವುದಿಲ್ಲ ಅವರ ಒಪ್ಪಿಗೆ ಇಲ್ಲದೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಿಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ.

ಬಾಯ್‌ಪ್ರೆಂಡ್‌ ಇಲ್ಲ : 18ರ ಹರೆಯದ ಈ ಚಲುವೆಗೆ ನಿರ್ಧಿಷ್ಟವಾಗಿ ಒಬ್ಬ ಬಾಯ್‌ ಫ್ರೆಂಡ್‌ ಇಲ್ಲವಂತೆ. ತನ್ನ ಜೀವನದಲ್ಲಿ ಗಂಡಸರು ಪ್ರವೇಶವಾಗಿದ್ದಿದೆ . ನನಗೆ ಬಾಯ್‌ಫ್ರಂಡ್‌ಗಳೂ ಇದ್ದರು. ಅವರೆಲ್ಲಾ ಭಾರತೀಯರು. ಆದರೆ ಸಧ್ಯದಲ್ಲಿ ಯಾರೂ ಇಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.ನನ್ನ ಕನಸಿನ ಹುಡುಗ ತುಂಬಾ ಸೂಕ್ಷ್ಮ ಸ್ವಭಾವದವನಾಗಿರಬೇಕು. ಆತನ ನಗು ನನ್ನ ಕಣ್ಣ ಕೋರೈಸಬೇಕು. ಉತ್ತಮ ಗುಣವಂತ ಹಾಗೂ ವಿಶ್ವಾಸಪಾತ್ರನಾಗಿರಬೇಕು. ಬುದ್ದಿವಂತನಾಗಿರಬೇಕು. ಆದರೆ ಆತ ಭಾರತೀಯನೇ ಆಗಿರಬೇಕೆಂಬ ನಿರ್ಬಂಧವಿಲ್ಲ.

ಶುಕ್ರವಾರ ತನ್ನ ಆಯ್ಕೆ ಪ್ರಕಟವಾದ ತಕ್ಷಣ ಅನೇಕ ಅನಾಮಧೇಯ ಕರೆಗಳು ಪುರುಷರಿಂದ ತನಗೆ ಬಂದವು. ಅದರಲ್ಲಿ ಒಬ್ಬಾತ ತನ್ನ ಜೊತೆ ಔತಣ ಕೂಟಕ್ಕೆ ತನ್ನ ಮನೆಗೆ ಬರುವೆಯಾ ಎಂದು ಪ್ರಶ್ನಿಸಿದ ಎಂದು ಪ್ರಿಯಾಂಕ ತಿಳಿಸಿದ್ದಾರೆ.

ವಿಶ್ವ ಸುದರಿ ಸ್ಪರ್ಧೆಯನ್ನು ಸಂಘಟಿಸಿರುವವರು ಭಾನುವಾರದವರೆಗೆ ಪ್ರಿಯಾಂಕ ಅವರನ್ನು ಲಂಡನ್‌ನಲ್ಲೇ ಇಟ್ಟುಕೊಳ್ಳಲಿದ್ದಾರೆ. ನಂತರ ಅವರು ಜರ್ಮನಿಗೆ ಪ್ರಯಾಣ ಬೆಳೆಸಲಿದ್ದಾರೆ. ಲಂಡನ್‌ನಲ್ಲಿ ಕೆಲವು ಶಾಪಿಂಗ್‌ ಕಾಂಪ್ಲೆಕ್ಸ್‌ ಮತ್ತು ಸಂಸತ್‌ ಭವನಗಳನ್ನು ಹೊರತುಪರಡಿಸಿ ಬೇರೇನನ್ನೂ ಪ್ರಿಯಾಂಕಾ ನೋಡಿಲ್ಲವಂತೆ. ಹಾಗಾಗಿ ಭಾನುವಾರದವರೆಗೆ ಅಲ್ಲೆಲ್ಲಾ ಸುತ್ತಾಡುವ ಬಯಕೆ ಆಕೆಯದು.

ಡಯಾನಾಗೆ ಕೃತಜ್ಞತೆ : ಅಂತಿಮ ಸುತ್ತಿನ ಸ್ಪರ್ಧೆಗೆ 72 ಗಂಟೆಗಳನ್ನು ಸತತ ತಾಲೀಮು ಮಾಡಲು ಮೀಸಲಿಟ್ಟಿದ್ದಾಗಿ ಪ್ರಿಯಾಂಕ ಹೇಳಿದ್ದಾರೆ. ಆ ಸಂದರ್ಭದಲ್ಲಿ ಮಾಜಿ ವಿಶ್ವ ಸುಂದರಿ ಡಯಾನಾ ಹೇಡನ್‌ ಅವರು 24 ಗಂಟೆಗಳ ಮುಂಚೆ ದೂರವಾಣಿ ಮಾಡಿ ಕೆಲವು ಸಲಹೆ ನೀಡಿದ್ದನ್ನು ಪ್ರಿಯಾಂಕಾ ಸ್ಮರಿಸಿಕೊಂಡಿದ್ದಾರೆ.

ಸುಮಾರು ಅರ್ಧ ಗಂಟೆ ಮಾತನಾಡಿ ಸಲಹೆಗಳನ್ನು ನೀಡಿದ ಡಯಾನಾಗೆ ಧನ್ಯವಾದ ಹೇಳಿರುವ ಪ್ರಿಯಾಂಕ, ಡಯಾನ ತುಂಬಾ ದೃಢ ವ್ಯಕ್ತಿತ್ವ ಹೊಂದಿರುವವರು ಎಂದು ಪ್ರಸಂಶೆ ವ್ಯಕ್ತಪಡಿಸಿದ್ದಾರೆ. ತನ್ನ ಸಹ ಸ್ಪರ್ಧಿಗಳ ಬಗ್ಗೆಯೂ ಒಳ್ಳೆಯ ಮಾತುಗಳನ್ನಾಡಿರುವ ಪ್ರಿಯಾಂಕಾ, ಮಕ್ಕಳನ್ನು ಕಾಡುವ ರಕ್ತ ಸಂಬಂಧೀ ರೋಗದ ಬಗ್ಗೆ ಕೆಲಸ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ಭಾತರ ಸುಂದರಿಯಾಗಿ ಆಯ್ಕೆಯಾದಂದಿನಿಂದ ಕೆಲಸ ಮಾಡಿರುವ ಅವರು ವಿಶ್ವ ಸುಂದರಿ ಪಟ್ಟ ತಮ್ಮ ಕೆಲಸಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬಲ ತಂದುಕೊಡಲಿದೆ ಎಂಬ ಆಶಾವಾದ ತಾಳಿದ್ದಾರೆ.

ಸಿನಿಮಾಗೆ ಬರುವ ಸಾಧ್ಯತೆ ತಳ್ಳಿ ಹಾಕದ ಪ್ರಿಯಾಂಕ : ತಾವು ಬಾಲಿವುಡ್‌ಗೆ ಪ್ರವೇಶಿಸುವ ಸಾಧ್ಯತೆಯನ್ನು ಪ್ರಿಯಾಂಕಾ ನಿರಾಕರಿಸಿಲ್ಲ. ತಾವು ಸ್ಪರ್ಧೆಯಲ್ಲಿ ಆರಿಸಿಬರುವ ಮುಂಚೆ ಬಾಲಿವುಡ್‌ ಪ್ರವೇಶದ ಬಗ್ಗೆ ತೀವ್ರ ಪ್ರತಿರೋಧ ಎದುರಿಸಿದ ಪ್ರಿಯಾಂಕ ಅವರು ಬಾಲಿವುಡ್‌ ಪ್ರವೇಶಿಸುವುದಿಲ್ಲ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಉತ್ತರಿಸಿರುವ ಪ್ರಿಯಾಂಕ, ತಮಗೆ ಶಾಲಾ ದಿನಗಳಿಂದಲೂ ನಾಟಕ ಗೊತ್ತು. ಅಭಿನವೂ ಗೊತ್ತು ಆದರೆ ಅದರಲ್ಲಿ ವಿಶೇಷ ತರಬೇತಿಯನ್ನೇನೂ ಪಡೆದಿಲ್ಲ. ಹಾಗೆಯೇ ನೃತ್ಯ ಕೂಡಾ ಗೊತ್ತಿದೆ ಆದರೆ ತಾವು ಬಾಲಿವುಡ್‌ ಪ್ರವೇಶಿಸುವ ಬಗ್ಗೆ ಗೊತ್ತಿಲ್ಲ ಎಂಬ ಜಾರಿಕೆ ಉತ್ತರ ನೀಡಿದ್ದಾರೆ.

ನನ್ನ ಗೆಲುವಿನ ಬಗ್ಗೆ ತಂದೆ-ತಾಯಿಗಳಿಗೆ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ. ಈಗಾಗಲೇ ನಾಲ್ಕು ವರ್ಷ ಅಮೆರಿಕದಲ್ಲಿ ನೆಲೆಸಿರುವ ಅವರು ಪ್ರಶಸ್ತಿಯಿಂದ ತಮಗೆ ಸಿಕ್ಕಿರುವ ವಿಶ್ವಪರ್ಯಟನೆ ಅವಕಾಶ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ತಮ್ಮ ತಂದೆ ಮಿಲಿಯರಿಯಲ್ಲಿರುವುದರಿಂದ ತಾವು ಸಾಧ್ಯವಾದ ಎಲ್ಲ ಕಡೆಯಾ ವಾಸಿಸಲು ಬಯಸುವುದಾಗಿ ತಿಳಿಸಿದ್ದಾರೆ.

(ಐಎಎನ್‌ಎಸ್‌)

ವಾರ್ತಾ ಸಂಚಯ

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more