Get Updates
Get notified of breaking news, exclusive insights, and must-see stories!

ನರಹಂತಕ ವೀರಪ್ಪನ್‌ ಸಿಗುತ್ತಾನಾ? ಹೌದಾದರೆ ಅದು ತೀರಾ ಆಕಸ್ಮಿಕ

*ಇಮ್ರಾನ್‌ ಖುರೇಷಿ

ಬೆಂಗಳೂರು : ವೀರಪ್ಪನ್‌ ಏಕೆ ಇನ್ನೂ ಸ್ವತಂತ್ರನಾಗಿದ್ದಾನೆ ! ಈ ಪ್ರಶ್ನೆ ಹೊಸದೇನೂ ಅಲ್ಲ ಅಥವಾ ಈ ಹೊತ್ತು ಹುಟ್ಟಿರುವಂಥದ್ದೂ ಅಲ್ಲ . ಅಂತೆಯೇ ಈ ಪ್ರಶ್ನೆ ಇಂದಿಗೆ ಮಾತ್ರ ಪ್ರಸ್ತು ತ ಅನ್ನುವಂತೆಯೂ ಇಲ್ಲ .

ಆದರೆ, ಕಾಡಿನಲ್ಲಿ ಕಾರ್ಯಾಚರಣೆ ನಡೆಸುವ ನಮ್ಮ ಪೋಲೀಸರು, ತಮ್ಮ ವೈಫಲ್ಯಕ್ಕೆ ಎಲ್ಲಾ ಕಾಲಕ್ಕೂ ನೀಡುತ್ತ ಬಂದಿರುವ ಒಂದೇ ಉತ್ತರ- 5 ಸಾವಿರ ಚದರ ಕಿಲೋ ಮೀಟರ್‌ಗಳ ದಟ್ಟ ಕಾಡು ಹಾಗೂ ಸಂದೇಶಕಾರರ ಅಸಹಕಾರ. ಅದೇನೇ ಇರಲಿ. ಉಭಯ ರಾಜ್ಯಗಳು ಹಿಂದೆಂದಿಗಿಂತಲೂ ಹೆಚ್ಚು ಉಮೇದಿನಿಂದ ವೀರಪ್ಪನ್‌ ವಿರುದ್ಧ ಕಾಡಿನಲ್ಲಿ ಕಾರ್ಯಾಚರಣೆಗೆ ತೊಡಗಿರುವಾಗ, ಅವರ ಪ್ರಯತ್ನದ ಫಲಶ್ರುತಿಯ ಬಗ್ಗೆ ಮತ್ತೆ ನಿರೀಕ್ಷೆಗಳು, ಪ್ರಶ್ನೆಗಳು ಉದ್ಭವಿಸುತ್ತವೆ. ಇದು ಅತ್ಯಂತ ಸಹಜ.

ವೀರಪ್ಪನ್‌ ಸಿಗುತ್ತಾನೆಯೇ? ಹೌದಾದರೆ ಅದು ತೀರಾ ಆಕಸ್ಮಿಕ. ಇಂಥಾ ಹೇಳಿಕೆಗಳು ಕಾರ್ಯಾಚರಣೆಯಲ್ಲಿ ಬಿಜಿಯಾಗಿರುವ ಪೊಲೀಸರ ನೈತಿಕ ಸ್ಥೈರ್ಯ ಕುಂದಿಸುತ್ತವಾದರೂ, ಹಿರಿಯ ಪೊಲೀಸ್‌ ಅಧಿಕಾರಿಯಾಬ್ಬರು ಇದೇ ಅಭಿಪ್ರಾಯಕ್ಕೆ ಇಷ್ಟವಿಲ್ಲದೆ ಹ್ಞೂಂಗುಡುತ್ತಾರೆ. ಅವರು ದಶಕದ ಹಿಂದೆ ಇಬ್ಬರು ಪೊಲೀಸರನ್ನು ವೀರಪ್ಪನ್‌ ಗುಂಡಿಕ್ಕಿ ಕೊಂದದ್ದನ್ನು ತೀರಾ ಹತ್ತಿರದಿಂದ ಕಂಡವರು. ನರಹಂತಕನನ್ನು ಹಿಡಿಯಲಾಗದೆ ಇರುವುದಕ್ಕೆ ಅವರು ನೀಡುವ ಮತ್ತೊಂದು ಕಾರಣ- ಅವನು ನಮ್ಮನ್ನು ನೋಡುತ್ತಾನೆ. ನಾವು ಅವನನ್ನು ನೋಡಲು ಸಾಧ್ಯವಾಗುತ್ತಿಲ್ಲ . ಕಾಡು ಅವನಿಗೆ ಅನುಕೂಲವಾಗಿ ಪರಿಣಮಿಸಿದೆ.

ಭಾರತೀಯ ಅರಣ್ಯಾಧಿಕಾರಿ ಬಿ.ಕೆ. ಸಿಂಗ್‌ ಹೇಳುತ್ತಾರೆ...

ನಿತ್ಯ ಹರಿದ್ವರ್ಣದ ಕಗ್ಗಾಡು. ದೊಡ್ಡ ದೊಡ್ಡ ಬಂಡೆಕಲ್ಲು , ಗುಡ್ಡಗಳು, ಕಣಿವೆಗಳು. ಇವೆಲ್ಲಾ ವೀರಪ್ಪನ್‌ಗೆ ವಜ್ರ ಕವಚವಾಗಿದ್ದರೆ ನಮ್ಮ ಪಾಲಿಗೆ ತಡೆಗಳಾಗಿವೆ. ನಾವು ಅವನನ್ನು ಗುರ್ತಿಸುವುದಾಗಲೀ, ತಿರುಗಿ ಸುಡುವುದಾಗಲಿ ಸಾಧ್ಯವಾಗುತ್ತಿಲ್ಲ .

ವೀರಪ್ಪನ್‌ನ ಸಂದೇಶಕಾರರ ಜಾಲ ಕೂಡ ಬಲವಾಗಿದೆ. ಕಾಡಿನ ಒಳ ಹೊರಗನ್ನು ಚೆನ್ನಾಗಿ ಬಲ್ಲ ಇವರು ಸರ್ಕಾರದ ಅಧಿಕಾರಿಗಳಿಗೆ ಯಾವುದೇ ಸುಳಿವನ್ನು ಬಿಟ್ಟು ಕೊಡರು. ಬದಲಿಗೆ ಸಂಧಾನಕಾರರನ್ನು ಸುರಕ್ಷಿತವಾಗಿ ಹಾಗೂ ಶೀಘ್ರವಾಗಿ ವೀರಪ್ಪನ್‌ ಬಳಿಗೆ ಕರೆದೊಯ್ಯಬಲ್ಲರು. ಪೊದೆ ಪೊಟರುಗಳಲ್ಲಿ ರಕ್ಷಣೆ ಪಡೆಯುವ ವೀರಪ್ಪನ್‌ ಒಂದು ವಿಧದಲ್ಲಿ ರಾಬಿನ್‌ಹುಡ್‌ನನ್ನು ಹೋಲುತ್ತಾನೆ ಎಂದು ಪೊಲೀಸರು ಅಭಿಪ್ರಾಯ ಪಡುತ್ತಾರೆ.

ನರಹಂತಕನ ಒತ್ತೆಯಾಳಾಗಿದ್ದಾಗ ರಾಜ್‌ರ ಆರೋಗ್ಯದ ಬಗ್ಗೆ ಅವರ ಕುಟುಂಬ ಆತಂಕಗೊಂಡಿರುವ ಸುದ್ದಿ ಚೆನ್ನೈಗೆ ತಲುಪಿತ್ತು . ಅಂದೇ ಸಂಜೆ ಕಾಡಿನಿಂದ ರಾಜ್‌ ಆರೋಗ್ಯವಾಗಿದ್ದಾರೆ ಎನ್ನುವ ಸಂದೇಶ ಬಂದಿತು. ನಿಜಕ್ಕೂ ಸಂದೇಶಕಾರರ ಜಾಲದ ಬಗ್ಗೆ ಆಶ್ಚರ್ಯವಾಗುತ್ತದೆ ಎಂದು ಅಧಿಕಾರಿಯಾಬ್ಬರು ಮೂಗಿನ ಮೇಲೆ ಬೆರಳಿಡುತ್ತಾರೆ.

ಹಿಂದಿನ ಘಟನೆಗಳು, ವಾಸ್ತವಾಂಶಗಳು ಏನೇ ಇದ್ದರೂ ಉಭಯ ರಾಜ್ಯಗಳು ಪ್ರಸ್ತುತ ಕಾರ್ಯಾಚರಣೆಯ ಬಗ್ಗೆ ಅಪಾರ ವಿಶ್ವಾಸ ಹೊಂದಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೆರವನ್ನು ಪಡೆದಿವೆ. ಇನ್ನೇನು ಕೆಲ ದಿನಗಳಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು, ಕಗ್ಗತ್ತಲಲ್ಲೂ ಮೈಲು ದೂರವನ್ನು ಬೆಳಗುವ ಬ್ಯಾಟರಿಯಂತಹ ಉಪಕರಣಗಳು, ಇಂಡೋ ಟಿಬೆಟಿಯನ್‌ ಪಡೆ ಉಭಯ ರಾಜ್ಯಗಳ ಕಾರ್ಯಪಡೆಯನ್ನು ಕೂಡಿಕೊಳ್ಳಲಿವೆ. ಕೇಂದ್ರ ಗೃಹ ಸಚಿವ ಅಡ್ವಾನಿ ಅವರು ವೀರಪ್ಪನ್‌ ಸೆರೆಗೆ ಅಗತ್ಯವಾದ ಎಲ್ಲಾ ಸಹಾಯ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಪ್ರಶ್ನೆ ಮತ್ತೆ ಕಾಡುತ್ತದೆ. ವೀರಪ್ಪನ್‌ ಸಿಗುತ್ತಾನಾ?

(ಐಎಎನ್‌ಎಸ್‌)

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+