Get Updates
Get notified of breaking news, exclusive insights, and must-see stories!

ಬೆಂಗಳೂರು ವಿಧಾನ ಸೌಧದ ಪಕ್ಕದಲ್ಲೊಂದು ವಿಧಾನಸೌಧ

ಬೆಂಗಳೂರು : ಕೆಂಗಲ್‌ ಹನುಮಂತಯ್ಯನವರು ಕಟ್ಟಿಸಿದ ಬೆಂಗಳೂರಿನ ಭವ್ಯ ಆಡಳಿತ ಸೌಧ ವಿಧಾನಸೌಧದ ಪಕ್ಕದಲ್ಲೇ ಮತ್ತೊಂದು ವಿಧಾನಸೌಧ ಇನ್ನು ಮೂರು ವರ್ಷದಲ್ಲೇ ತಲೆ ಎತ್ತಲಿದೆ. ಸರ್ಕಾರಿ ಮುದ್ರಣಾಲಯದ ಜಾಗದಲ್ಲಿ ಮತ್ತೊಂದು ವಿಧಾನಸೌಧ ನಿರ್ಮಾಣ ಮಾಡಲು ಶುಕ್ರವಾರ ಸಚಿವ ಸಂಪುಟ ಸಮ್ಮತಿ ನೀಡಿದೆ.

ಸುಮಾರು 3 ಎಕರೆ ಪ್ರದೇಶದಲ್ಲಿ 100 ಕೋಟಿ ರುಪಾಯಿಗಳ ವೆಚ್ಚದಲ್ಲಿ ತಲೆಎತ್ತಲಿರುವ ಈ ಭವ್ಯಬಂಗಲೆಗೆ ವಿಧಾನಸೌಧದ ದಕ್ಷಿಣ ವಿಭಾಗ ಎಂದು ನಾಮಕರಣ ಮಾಡಲಾಗುವುದು. ಈ ಹೊಸ ವಿಧಾನಸೌಧಕ್ಕೆ ಸಚಿವರ ಕಚೇರಿಗಳೆಲ್ಲಾ ವರ್ಗವಾಗುತ್ತವೆ. ಮುಂಬರುವ ಜನವರಿಯಲ್ಲಿ ಈ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದ್ದು, ಮೂರು ವರ್ಷದ ಅವಧಿಯಾಳಗೆ ಸಂಪೂರ್ಣಗೊಳ್ಳಲಿದೆ. ಈ ಸೌಧದ ಕೆಳಗೆ ನೆಲಮಾಳಿಗೆ ನಿರ್ಮಿಸಿ 150ಕ್ಕೂ ಹೆಚ್ಚು ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಶ್ರೀಸಾಮಾನ್ಯರ ಅನುಕೂಲಕ್ಕಾಗಿ ಸಬ್‌ವೇಗಳನ್ನು ನಿರ್ಮಿಸುವ ಯೋಜನೆಯೂ ಇದರಲ್ಲಿದೆ.

ಲೋಕೋಪಯೋಗಿ ಸಚಿವರಾದ ಧರ್ಮಸಿಂಗ್‌ ಅವರು, ಉದ್ದೇಶಿತ ಈ ವಿಧಾನಸೌಧದ ನಿರ್ಮಾಣದ ಕುರಿತು ತಮ್ಮ ಇಲಾಖೆ ರೂಪಿಸಿರುವ ಯೋಜನೆಗಳ ಮಾದರಿಯನ್ನು ಸಚಿವ ಸಂಪುಟ ಸಭೆಯಲ್ಲಿ ವಿಡಿಯೋ ಮೂಲಕ ಪ್ರದರ್ಶಿಸಿದರು.

ವಾಸ್ತು : ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲ ಸಚಿವರಿಗೂ ವಾಸ್ತು ಇರುವ ಕೊಠಡಿಗಳೇ ಬೇಕಾಗಿರುವ ಕಾರಣ ಹೊಸ ಕಟ್ಟಡದಲ್ಲಿ ಸಚಿವರುಗಳ ಕೊಠಡಿಗಳನ್ನು ವಾಸ್ತು ಪ್ರಕಾರವಾಗಿ ನಿರ್ಮಾಣ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ವಾಸ್ತುವಿಗಾಗಿ ಸಚಿವರು ಮಾಡುತ್ತಿದ್ದ ಅನಾವಶ್ಯಕ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ ಎಂದು ಅವರು ಹೇಳಿದರು. ಹೊಸ ವಿಧಾನಸೌಧ ಹೈಟೆಕ್‌ ತಂತ್ರಜ್ಞಾನಕ್ಕೆ ಅಗತ್ಯವಾದ ಸೌಲಭ್ಯಗಳನ್ನೂ ಒಳಗೊಂಡಿರುತ್ತದೆ ಎಂದೂ ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+