ತವರೂರಿಗೆ ಬಂದ ನಾಗಪ್ಪ ಮಾರಡಗಿ
ಹುಬ್ಬಳ್ಳಿ : ನಮ್ಮೂರಿಗೆ ಬಂದ ಮೇಲೆ ನನಗೆ ಸಂತೋಷ ಉಕ್ಕುತ್ತಿದೆ. ನನಗೆ ಮರು ಜನ್ಮ ಪಡೆದಷ್ಟು ಸಂತೋಷ ಆಗ್ತಿದೇರೀ... ಇದು ಕಾಡು -ನಾಡಿನ ಬಂಧನದಲ್ಲಿ ಒಟ್ಟು 122 ದಿನ ಕಳೆದ ಹಾಗೂ ವೀರಪ್ಪನ್ ಕಬಂಧ ಬಾಹುಗಳಿಂದ ತಪ್ಪಿಸಿಕೊಂಡು ನಾಡಿಗೆ ಓಡಿಬಂದ ನಾಗಪ್ಪ ಶುಕ್ರವಾರ ತಮ್ಮ ಸ್ವಗ್ರಾಮ ಮಾರಡಗಿಯಲ್ಲಿ ಆಡಿದ ಮಾತುಗಳು.
ಕಾಡುಗಳ್ಳ ವೀರಪ್ಪನ್ ಹಾಗೂ ಆತನ ಜತೆಯವರ ಚಲನವಲನ ನೋಡಿ ನನಗೆ ಕಾಡಿನಲ್ಲಿ ಭಯ ಹುಟ್ಟುತ್ತಿತ್ತು. ವೀರಪ್ಪನ್‌ನಿಂದ ನನಗೆ ಪ್ರಾಣ ಭಯನೂ ಇತ್ತು. ಅಲ್ಲದೆ ರೇಡಿಯೋದಲ್ಲಿ ಪಾರ್ವತಮ್ಮನೋರು ಅತ್ತಿದ್ದು ಕೇಳಿ ದುಃಖ ಆಯ್ತು ರಾತ್ರಿ ತಪ್ಪಿಸಿಕೊಂಡು ಓಡಿಬಂದೆ. ನನ್ನ ಯಾರೂ ಕಾಡಿನಿಂದ ತಂದು ಬಿಡಲಿಲ್ರೀ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕಾಡಿನಲ್ಲಿ ಅನುಭವಿಸಿದ ಯಾತನೆ ಸಾಕಾಗಿತ್ತು. ಜೊತೆಗೆ ಪ್ರಾಣ ಭಯನೂ ಇತ್ತು ಎಂಬುದನ್ನು ನಾಗಪ್ಪ ಒಪ್ಪಿಕೊಂಡ ನಾಗಪ್ಪ ಆ ವೀರಪ್ಪನ್‌ನ ಮಟ್ಟ ಹಾಕಲೇ ಬೇಕ್ರೀ ಎಂದಾಗ ಮುಖದಲ್ಲಿ ಕೋಪ ಉಕ್ಕುತ್ತಿತ್ತು. ಮುಖ್ಯಮಂತ್ರಿಗಳು ಹಾಗೂ ಮಲ್ಲಿಕಾರ್ಜುನ ಖಗ್ರಪ್ಪನ್ನೋರು ನನಗೆ ರಕ್ಷಣೆ ಕೊಟ್ಟಿದ್ರು. ನನಗೆ ಯಾವುದೇ ಹೆದರಿಕೆ ಇಲ್ಲ. ಇಷ್ಟು ದಿನ ರೆಸ್ಟ್ ತಗೋತ್ತಿದ್ದೆ ಎಂದೂ ನಾಗಪ್ಪ ಹೇಳಿದರು.
ಕಾಡಿಗೆ ಬಹಳ ಜನ ಸಂಧಾನಕ್ಕೆ ಬಂದರು, ಆದರೆ ಅಲ್ಲಿ ಬ್ರೀಫ್‌ಕೇಸ್‌ಗಳು ಬಂದ ಬಗ್ಗೆ ನನಗೆ ಗೊತ್ತಿಲ್ಲ ಎಂದೂ ನಾಗಪ್ಪ ಹೇಳಿದರು. ಪೊಲೀಸ್ ಬೆಂಗಾವಲಿನಲ್ಲೇ ಇದ್ದ ನಾಗಪ್ಪ ಅವರು, ನನಗೆ ಈಗೇನೂ ಭಯ ಇಲ್ಲ. ಒಂದೆರಡು ದಿನ ಅಪ್ಪ - ಅಮ್ಮನ ನೋಡಿಕೊಂಡು ಮತ್ತೆ ಬೆಂಗಳೂರಿಗೆ ವಾಪಸ್ ಆಗ್ತೀನಿ ಎಂದಷ್ಟೇ ಹೇಳಿದರು.
ಮುಖಪುಟ / ಊರು ಕೇರಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications