ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ಒರಿಸ್ಸಾ ಕೇಂದ್ರಕ್ಕೆ 10.79 ಬಿಲಿಯನ್‌ ರು.ಉತ್ಪನ್ನದ ರಫ್ತಿನ ಗುರಿ

By Staff
|
Google Oneindia Kannada News

*ಜತೀಂದ್ರ ದಶ್‌

ಭುವನೇಶ್ವರ್‌ : ಭಾರತದ ಬೃಹತ್‌ ಸಾಫ್ಟ್‌ವೇರ್‌ ಉತ್ಪಾದನಾ ಕಂಪನಿ ಇನ್ಫೋಸಿಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌, ಒರಿಸ್ಸಾದ ತನ್ನ ಘಟಕದಿಂದ 2005ರ ಹೊತ್ತಿಗೆ 10.79 ಶತಕೋಟಿ ರುಪಾಯಿ ಮೌಲ್ಯದ ಉತ್ಪನ್ನವನ್ನು ರಫ್ತು ಮಾಡುವ ಗುರಿ ಹೊಂದಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯಾಬ್ಬರು ತಿಳಿಸಿದ್ದಾರೆ.

ಕಂಪನಿಯ ಬೆಂಗಳೂರು ಘಟಕ ಹೊರತು ಪಡಿಸಿದರೆ ವಿದೇಶೀ ವಿನಿಮಯದಲ್ಲಿ ಒರಿಸ್ಸಾದ ಘಟಕದ್ದೇ ದೊಡ್ಡ ಪಾಲು. 1997ರಲ್ಲಿ ಪ್ರಾರಂಭವಾದ ಒರಿಸ್ಸಾದ ಘಟಕ ಮೊದಲ ವರ್ಷದಲ್ಲೇ 46.5 ದಶಲಕ್ಷ ರುಪಾಯಿ ಮೌಲ್ಯದ ಸಾಫ್ಟ್‌ವೇರ್‌ ಉತ್ಪನ್ನ ರಫ್ತು ಮಾಡಿದೆ. 1998-99ನೇ ಸಾಲಿನಲ್ಲಿ 481 ಹಾಗೂ 1999-2000ನೇ ಸಾಲಿನಲ್ಲಿ 741 ದಶಲಕ್ಷ ರುಪಾಯಿ ಮೌಲ್ಯದ ಉತ್ಪನ್ನ ರಫ್ತಾಗಿದೆ. ಈ ವರ್ಷ ಅಕ್ಟೋಬರ್‌ವರೆಗೆ 754 ದಶಲಕ್ಷ ರುಪಾಯಿ ಬೆಲೆಯ ಉತ್ಪನ್ನ ರಫ್ತು ಮಾಡಲಾಗಿದೆ ಎನ್ನುತ್ತಾರೆ ಘಟಕದ ಮುಖ್ಯಸ್ಥ ಭಾಸ್ಕರ್‌ ಘೋಷ್‌.

ಪ್ರಸ್ತುತ ರಾಜ್ಯ ಸರ್ಕಾರದ 40 ಸಾವಿರ ಚದರ ಅಡಿ ಜಾಗೆಯನ್ನು ಒರಿಸ್ಸಾದ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ ಆಫ್‌ ಇಂಡಿಯಾ (ಎಸ್‌ಟಿಪಿಐ) ದಲ್ಲಿ ಬಾಡಿಗೆಗೆ ಪಡೆದು ಘಟಕವನ್ನು ನಿರ್ವಹಿಸುತ್ತಿದ್ದೇವೆ. ರಾಜ್ಯ ಸರ್ಕಾರದ ಕೈಗಾರಿಕಾ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಇಡ್ಕೋ) 75 ಎಕರೆ ಪ್ರದೇಶದ ಇನ್ಫೋ ಸಿಟಿಯನ್ನು ಒದಗಿಸಿದ್ದು, ಕೇಂದ್ರ ಸದ್ಯದಲ್ಲೇ ಅಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.

25 ಕೋಟಿ ರುಪಾಯಿ ವೆಚ್ಚದ ಹೊಸ ಕೇಂದ್ರ ಇಡ್ಕೋ ಮತ್ತು ವಾಣಿಜ್ಯ ಖಾತೆಗಳ ಸಹಯೋಗದಲ್ಲಿ ನಿರ್ಮಿತವಾಗಿದೆ. ಹೊಸ ಜಾಗೆ ಉತ್ಪನ್ನದ ರಫ್ತಿಗೆ ಹೇಳಿ ಮಾಡಿಸಿದಂತಿದೆ. ರಾಜ್ಯದಲ್ಲಿ ಸುಮಾರು 150 ಐಟಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ರಫ್ತಿನ ಪ್ರಮಾಣದಲ್ಲಿ ಶೇ. 12.5ರಷ್ಟು ಏರಿಕೆಯಾಗಿದೆ. ಈ ಬೆಳವಣಿಗೆ ಐಟಿ ರಫ್ತಿನಲ್ಲಿ 11 ಪಟ್ಟು ಏರಿಕೆಯಾಗಲು ಕಾರಣವಾಗಿದೆ. ಇದರಲ್ಲಿ ಇನ್ಫೋಸಿಸ್‌ದೇ ಸಿಂಹಪಾಲು ಎನ್ನುತ್ತಾರೆ ಎಸ್‌ಟಿಪಿಐ ನಿರ್ದೇಶಕ ಮಾನಸ್‌ ಪಟ್ನಾಯಕ್‌.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X