Get Updates
Get notified of breaking news, exclusive insights, and must-see stories!

ಕೆ.ಆರ್‌.ನಗರದಲ್ಲಿ ದರೋಡೆ : 2.34 ಲ-ಕ್ಷ ಬೆಲೆಯ ನಗದು, ಚಿನ್ನ ಕಳವು

ಕೆ.ಆರ್‌.ನಗರ : ಪಟ್ಟಣ ಪ್ರದೇಶದ ಹೊರ ವಲಯದಲ್ಲಿನ ಒಂದು ಕಾನ್ವೆಂಟ್‌ ಶಾಲೆ ಮತ್ತು ಅದರ ಹಿಂದಿನ ಮನೆಗೆ ನುಗ್ಗಿ ಒಟ್ಟು 84 ಸಾವಿರ ರುಪಾಯಿ ನಗದು ಹಾಗೂ 1.5 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆಕೋರರ ತಂಡವೊಂದು ಕದ್ದು ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ.

ಮಧ್ಯರಾತ್ರಿ 1.45ರ ಸಮಯದಲ್ಲಿ ಶಾಲೆಯ ಹಿಂಬಾಗಿಲನ್ನು ದೊಡ್ಡ ಸೈಜುಗಲ್ಲುಗಳಿಂದ ಒಡೆದು ಒಳನುಗ್ಗಿ, ಅಲ್ಲಿದ್ದ 7 ಸಿಸ್ಟರ್‌ಗಳನ್ನು ದುಷ್ಕರ್ಮಿಗಳು ಬೆದರಿಸಿದ್ದಾರೆ. ಶಾಲಾ ಮಕ್ಕಳು ಕೊಟ್ಟಿದ್ದ ಶುಲ್ಕದ ಹಣ 24 ಸಾವಿರ ರುಪಾಯಿ ಕಿತ್ತುಕೊಂಡು, ಸಿಸ್ಟರ್‌ಗಳನ್ನೆಲ್ಲಾ ಶೌಚಾಲಯದಲ್ಲಿ ಕೂಡಿ ಹಾಕಿ ಇನ್ನೊಂದು ಕಳುವಿಗಾಗಿ ಹೊರ ನಡೆದಿದ್ದಾರೆ.

ಶಾಲೆಯ ಹಿಂಬದಿಯಲ್ಲೇ ಇರುವ ಲೋಹಿತ್‌ ಟೈಲ್ಸ್‌ ಕಾರ್ಖಾನೆಯ ಮಾಲೀಕ ಕೃಷ್ಣಮೂರ್ತಿ ಎಂಬುವರ ಮನೆಗೆ ಬಾಗಿಲು ಒಡೆದು ನುಗ್ಗಿ , ಅಲ್ಲೂ ತಮ್ಮ ಹಿಂದಿನ ಕಳುವಿನ ಧಾಟಿಯನ್ನೇ ಮುಂದುವರೆಸಿದ್ದಾರೆ. ಸುಮಾರು 60 ಸಾವಿರ ರುಪಾಯಿ ನಗದು, 1.5 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಸಿದುಕೊಂಡಿದ್ದಾರೆ. ನಂತರ ಕೃಷ್ಣ ಮೂರ್ತಿ ಅವರ ತಾಯಿ, ಪತ್ನಿ, ಭಾವಮೈದುನ ಹಾಗೂ ಇಬ್ಬರು ಮಕ್ಕಳನ್ನು ಶೌಚಾಲಯದಲ್ಲಿ ಬಂಧಿಸಿ ಪೇರಿ ಕಿತ್ತಿದ್ದಾರೆ. ದುಷ್ಕರ್ಮಿಗಳು ಕೃಷ್ಣಮೂರ್ತಿ ಅವರ ಪತ್ನಿಯ ಮಾಂಗಲ್ಯ ಸರವನ್ನೂ ಬಿಟ್ಟಿಲ್ಲ.

ಇಷ್ಟೆಲ್ಲಾ ಮುಗಿವ ಹೊತ್ತಿಗೆ ಬೆಳಗಿನ ಜಾವ 5 ಗಂಟೆ ಸಮೀಪಿಸಿದೆ. ಶೌಚಾಲಯದಿಂದ ಹೇಗೋ ತಪ್ಪಿಸಿಕೊಂಡ ಸಿಸ್ಟರ್‌ಗಳು ಸ್ಥಳೀಯ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ದರೋಡೆಕೋರರ ಪತ್ತೆಗೆ ಯತ್ನಿಸಿದರೂ, ಅವರ ಸುಳಿವು ಸಿಕ್ಕಿಲ್ಲ. ದರೋಡೆಕೋರರು ನಿಕ್ಕರ್‌ ಹಾಗೂ ಬನಿಯನ್‌ ತೊಟ್ಟಿದ್ದು, ತೆಲುಗು- ತಮಿಳು ಮಾತನಾಡುತ್ತಿದ್ದರೆನ್ನಲಾಗಿದೆ. ತನಿಖೆ ಮುಂದುವರೆದಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+