Get Updates
Get notified of breaking news, exclusive insights, and must-see stories!

ಇನ್ನೆರಡು ವರ್ಷಗಳಲ್ಲಿ ಕೆಫಿನ್‌ ರಹಿತ ಕಾಫಿ ಮಾರುಕಟ್ಟೆಗೆ

ಬೆಂಗಳೂರು : ಕಾಫಿಯಲ್ಲಿನ ಕೆಫಿನ್‌ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೂ ಕಾಫಿ ಚಟ ಬಹು ಜನರಿಗೆ ಅಂಟಿದ್ದು. ಕೆಫಿನ್ನೇ ಕಡಿಮೆ ಇರುವ ಕಾಫಿ ಸಿಕ್ಕಿದರೆ? ಈ ಪ್ರಶ್ನೆಗೆ ಇಲ್ಲಿದೆ ಸಕಾರಾತ್ಮಕ ಉತ್ತರ....

ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆರ್‌ಐ) ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜಂಟಿಯಾಗಿ ಇನ್ನೆರಡು ವರ್ಷಗಳಲ್ಲಿ ಅತಿ ಕಡಿಮೆ ಕೆಫಿನ್‌ ಅಂಶವನ್ನು ಹೊಂದಿದ ಹೊಸ ತಳಿಯ ಕಾಫಿ ಬೀಜಗಳನ್ನು ಪ್ರಸ್ತುತ ಪಡಿಸಲಿವೆ. ಈಗಾಗಲೇ ಸಂಸ್ಥೆಗಳ 3 ವರ್ಷ ಅವಧಿಯ ಈ ಜಂಟಿ ತಳಿ ಸಂಶೋಧನೆ ಯೋಜನೆ ಶುರುವಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ ಅತಿ ಕಡಿಮೆ ಪ್ರಮಾಣದ ಕೆಫಿನ್‌ ಇರುವ ಅಥವಾ ಕೆಫಿನ್‌ ರಹಿತ ಕಾಫಿ ಬೀಜಗಳ ತಳಿ ಉತ್ಪಾದಿಸಬಲ್ಲ ಜೀನ್‌ನನ್ನೂ ಕಂಡು ಹಿಡಿದಿದೆ ಎಂದು ಸಿಸಿಆರ್‌ಐ ನಿರ್ದೇಶಕ ಆರ್‌. ನಾಯ್ಡು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವರ್ಷ ಪ್ಲಾಟಿನಂ ಜ್ಯುಬಿಲಿ ಆಚರಿಸಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಇದಷ್ಟೇ ಅಲ್ಲದೆ ಹೈದರಾಬಾದ್‌ನಲ್ಲಿ ಸೆಲ್ಯುಲಾರ್‌ ಮತ್ತು ಮಾಲಿಕ್ಯುಲಾರ್‌ ಜೀವಶಾಸ್ತ್ರದ ಬಗೆಗೂ ಸಂಶೋಧನೆ ನಡೆಸುತ್ತಿದೆ. ಸಿಸಿಆರ್‌ಐ ಇತ್ತೀಚೆಗೆ ಹೊಸ ತಳಿಯ ಕಾಫಿ ಬೀಜಗಳನ್ನು ಕಂಡು ಹಿಡಿದಿದ್ದು, ಸುವಾಸನೆ ಹಾಗೂ ಕಡಿಮೆ ಆಮ್ಲೀಯ ಗುಣ ಅವುಗಳ ವಿಶೇಷವಾಗಿದೆ ಎಂದರು.

ಡಿ.4 ಕ್ಕೆ ಅಂತರರಾಷ್ಟ್ರೀಯ ಕಾಫಿ ಗೋಷ್ಠಿ : ಪ್ಲಾಟಿನಂ ಜ್ಯುಬಿಲಿಯ ಸಮಾರಂಭದ ಅಂಗವಾಗಿ ಡಿಸೆಂಬರ್‌ 4ರಂದು ಬಾಳೆಹೊನ್ನೂರಿನ ತನ್ನ ಕೇಂದ್ರದಲ್ಲಿ ಸಿಸಿಆರ್‌ಐ ಅಂತರರಾಷ್ಟ್ರೀಯ ಮಟ್ಟದ ವೈಜ್ಞಾನಿಕ ವಿಚಾರ ಗೋಷ್ಠಿ ಏರ್ಪಡಿಸಿದೆ. ಕೀನ್ಯಾ, ವಿಯೆಟ್ನಾಂ, ಇಂಡೋನೇಷ್ಯಾ, ಫ್ರಾನ್ಸ್‌, ಇಂಗ್ಲೆಂಡ್‌, ಸ್ವಿಟ್ಜರ್‌ಲ್ಯಾಂಡ್‌, ನೆದರ್‌ ಲ್ಯಾಂಡ್‌, ಮಲೇಷಿಯಾ ಮುಂತಾದ ದೇಶಗಳ ಕಾಫಿ ವಿಜ್ಞಾನಿಗಳು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ನಾಯ್ಡು ತಿಳಿಸಿದರು.

ಅಂತರರಾಷ್ಟ್ರೀಯ ಕಾಫಿ ಸಂಸ್ಥೆಯಿಂದ ಕಾಫಿ ಬೆಳೆ ಅಭಿವೃದ್ಧಿ ಕಾರ್ಯಕ್ರಮ

ಹಸುರು ಕಾಫಿ ಬೀಜಗಳನ್ನು ಅಗತ್ಯಕ್ಕೆ ತಕ್ಕಷ್ಟು ಪೂರೈಸಲು ಸಾಧ್ಯವಾಗದಿರುವ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಫಿ ಬೆಳೆಯನ್ನು ವೃದ್ಧಿಸುವ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಕಾಫಿ ಸಂಸ್ಥೆ (ಇಂಟರ್‌ ನ್ಯಾಷನಲ್‌ ಕಾಫಿ ಆರ್ಗನೈಸೇಷನ್‌) ಹಮ್ಮಿಕೊಳ್ಳಲಿದೆ ಎಂದು ಕಾಫಿ ಬೋರ್ಡ್‌ ಅಧ್ಯಕ್ಷೆ ಲಕ್ಷ್ಮಿ ವೆಂಕಟಾಚಲಂ ಹೇಳಿದ್ದಾರೆ.

ರಷ್ಯಾ ಮತ್ತು ಚೀನಾ ದೇಶಗಳಲ್ಲಿ ಕಾಫಿಗೆ ಬೇಡಿಕೆ ಹೆಚ್ಚುತ್ತಿದ್ದು, ಆ ದೇಶಗಳು ಪ್ರಸ್ತುತ ನಮ್ಮ ಗುರಿಗಳಾಗಿವೆ. ಕಾಫಿ ರಫ್ತು ಮಾಡುವ ದೇಶಗಳ ಯಾದಿಯಲ್ಲಿ ಭಾರತ ಮೇಲ್ಪಂಕ್ತಿಯಲ್ಲಿದ್ದು, 1900 ಕೋಟಿ ರುಪಾಯಿಗಳ ವಾರ್ಷಿಕ ವಹಿವಾಟು ನಡೆಸುತ್ತಿದೆ. ಅರೇಬಿಕ ಮಾದರಿಯ ಕಾಫಿ ಬೆಲೆ ಲಂಡನ್ನಿನಲ್ಲಿ 2 ದಿನಗಳ ಹಿಂದೆ ತೀವ್ರ ಮಟ್ಟಕ್ಕೆ ಕುಸಿಯಿತು. ಕಳೆದ 30 ವರ್ಷಗಳಲ್ಲಿ ಕಾಫಿ ಬೆಲೆಗೆ ಇಷ್ಟೊಂದು ಹೊಡೆತ ಬಿದ್ದಿರಲಿಲ್ಲ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಮುನ್ನಡೆಯಬೇಕು ಎಂದು ಲಕ್ಷ್ಮಿ ಸಲಹೆ ಕೊಟ್ಟರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+