ರಾಜ್ ಪುತ್ರರಿಂದ ಕರುಣಾನಿಧಿ ಭೇಟಿ : ಧನ್ಯವಾದ ಅರ್ಪಣೆ
ಚೆನ್ನೈ : ರಾಜ್ ಪುತ್ರರಿಂದ ಕರುಣಾನಿಧಿ ಭೇಟಿ - ಕೃತಜ್ಞತೆಯ ಸಲ್ಲಿಕೆ, ದೆಹಲಿಯಲ್ಲಿ ಕೃಷ್ಣ - ಜಾರ್ಜ್ ಫರ್ನಾಂಡಿಸ್ ಮಾತುಕತೆ, ವೀರಪ್ಪನ್ ಹುಟ್ಟಡಗಿಸಲು ಕಾರ್ಯತಂತ್ರ, ಮೊದಲು ವೀರಪ್ಪನ್ ಭಾರತದಲ್ಲಿ ಇದ್ದಾನೆಯೇ ಖಾತ್ರಿ ಪಡಿಸಿಕೊಳ್ಳಿ ಎಂಬ ಜಯಲಲಿತಾರ ಹೇಳಿಕೆ ಇದಿಷ್ಟು ರಾಜ್ ಬಿಡುಗಡೆ ನಂತರ ಮಂಗಳವಾರದ ವಿಧ್ಯಮಾನ.
ಕಾಡುಗಳ್ಳ ವೀರಪ್ಪನ್ ಕಪಿಮುಷ್ಟಿಯಿಂದ ತಮ್ಮ ತಂದೆ ಹಾಗೂ ವರನಟ ಡಾ.ರಾಜ್‌ಕುಮಾರ್ ಅವರನ್ನು ಬಿಡುಗಡೆ ಮಾಡಿಸಲು ಅವಿರತ ಶ್ರಮಿಸಿದ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ಡಾ. ರಾಜ್ ಪುತ್ರರಾದ ಶಿವರಾಜ್, ರಾಘವೇಂದ್ರ ಹಾಗೂ ಪುನೀತ್ ಧನ್ಯವಾದ ಅರ್ಪಿಸಿದರು.
ತಮ್ಮ ಕೃತಜ್ಞತೆ ಅರ್ಪಿಸಲೆಂದೇ ಇಲ್ಲಿಗೆ ಆಗಮಿಸಿರುವ ಈ ಮೂವರು ಚಿತ್ರನಟರು ಮಂಗಳವಾರ ಸಂಜೆ ಕರುಣಾನಿಧಿ ಅವರನ್ನು ಅವರ ಗೋಪಾಲಪುರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಭೇಟಿಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರುಣಾನಿಧಿ ಅವರನ್ನು ಖುದ್ದಾಗಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಲು ತಮ್ಮ ತಂದೆ ಇಚ್ಛಿಸಿದ್ದು, ಅದಕ್ಕಾಗಿ ದಿನಾಂಕ ನಿಗದಿಪಡಿಸಿಕೊಳ್ಳಲು ತಾವು ಇಲ್ಲಿಗೆ ಆಗಮಿಸಿದ್ದಾಗಿ ತಿಳಿಸಿದರು.
ದೆಹಲಿ ವರದಿ : ಈ ಮಧ್ಯೆ ಕಾಡುಗಳ್ಳ ವೀರಪ್ಪನ್ ಅಟ್ಟಹಾಸವನ್ನು ಮಟ್ಟಹಾಕಲು ಕರ್ನಾಟಕದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು, ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ಮಾತುಕತೆ ನಡೆಸಿದರು. ವೀರಪ್ಪನ್ ಹಾಗೂ ಅವನ ಸಹಚರರ ಜೀವಂತವಾಗಿ ಹಿಡಿಯಲು ಅಥವಾ ಅವರ ಹುಟ್ಟಡಗಿಸಲು ಕೇಂದ್ರದ ನೆರವನ್ನು ಕೋರಿದರು.
ಚೆನ್ನೈ ವರದಿ : ಕರ್ನಾಟಕ ಹಾಗೂ ತಮಿಳು ನಾಡು ಸರಕಾರಗಳು ವೀರಪ್ಪನ್ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು, ಮೊದಲು ವೀರಪ್ಪನ್ ಭಾರತದಲ್ಲಿ ಇದ್ದಾನೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ಆನಂತರ ಕಾರ್ಯಾಚರಣೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಖಪುಟ / ವೀರಪ್ಪನ್ ಶಿಕಾರಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications