ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋವೋ ನಾರ್ಡಿಸ್ಕ್‌ ಅನಿಲ್‌ ಕಪೂರ್‌ಗೆ ಡೆನ್ಮಾರ್ಕ್‌ನ ಪ್ರತಿಷ್ಠಿತ ಡಿಪ್ಲೊಮಾ

By Staff
|
Google Oneindia Kannada News

ಬೆಂಗಳೂರು : ಕಳೆದ ಎರಡು ತಲೆಮಾರುಗಳ ರಾಜಕಾರಣಿಗಳು, ಶಿಕ್ಷಣ ತಜ್ಞರು, ನೌಕರ ಶಾಹಿಗಳು ಮತ್ತು ನಿಗಮಗಳು ದೇಶವನ್ನು ವಂಚಿದ್ದಾರೆ. ಇವರು ದೇಶದ ಸಮಸ್ಯೆಗಳ ಬಗ್ಗೆ ತೋರಿಸುತ್ತಿರುವ ಕಾಳಜಿ ತೋರಿಕೆಯದು ಎಂದು

ಸಾಫ್ಟ್‌ವೇರ್‌ ಜಗತ್ತಿನ ಮನೆಮಾತಾಗಿರುವ ಇನ್ಫೋಸಿಸ್‌ ಅಧ್ಯಕ್ಷ ಎನ್‌.ಆರ್‌. ನಾರಾಯಣಮೂರ್ತಿ ಟೀಕಿಸಿದ್ದಾರೆ.

ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಂಸ್ಥೆ (ಐಸೆಕ್‌) , ರಾಜ್ಯೋತ್ಸವ ಆಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಜನಸಾಮಾನ್ಯನ ದೃಷ್ಟಿಯಲ್ಲಿ ಭಾರತದ ಆರ್ಥಿಕ ನೀತಿಗಳು ಎನ್ನುವ ವಿಷಯದ ಬಗ್ಗೆ ಅವರು ಸೋಮವಾರ ಸಂಜೆ ಮಾತನಾಡುತ್ತಿದ್ದರು.

ಪ್ರಸಿದ್ಧ ಅರ್ಥ ಶಾಸ್ತ್ರಜ್ಞ ಮೈಕೆಲ್‌ ಪಾರ್ಕಿನ್‌ನ ಸಿದ್ಧಾಂತಗಳು ಮತ್ತು ತಮ್ಮ ಭಾರತದ ಅನುಭವಗಳ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರದಲ್ಲಿ ಭಾರತವು ತನ್ನ ಅಸಮರ್ಪಕ ನೀತಿಗಳ ಮೂಲಕ ಅವಕಾಶಗಳನ್ನು ಹಾಳುಮಾಡಿಕೊಂಡಿತು. ಸ್ಪರ್ಧೆಯನ್ನು ಅದುಮಿಡುವ ಮೂಲಕ ತನ್ನಲ್ಲಿನ ಧನಾತ್ಮಕ ಅಂಶಗಳನ್ನು ಪ್ರಗತಿಯ ನಿಟ್ಟಿನಲ್ಲಿ ಬಳಸಿಕೊಳ್ಳಲು ಯಶಸ್ವಿಯಾಗಲಿಲ್ಲ ಎಂದರು.

ದೇಶದಲ್ಲಿನ ಹೆಚ್ಚಿನ ಪ್ರಮಾಣದ ತೆರಿಗೆ ನೀತಿಯನ್ನು ಕಟುವಾಗಿ ಟೀಕಿಸಿದ ಅವರು, ದೇಶದ ಐಟಿ ಕಂಪನಿಗಳು ತೆರಿಗೆ ಭಾರದಿಂದ ಕುಸಿಯುತ್ತಿವೆ ಎಂದರು. ದೇಶದಲ್ಲಿ ಜನಸಂಖ್ಯೆಯ ನಿಯಂತ್ರಣ ಮತ್ತು ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ , ನೆಹರು ಕೂಡ ದೊಡ್ಡ ಕುಟುಂಬಗಳ ಪರವಾಗಿದ್ದರು ಎಂದು ಅವರು ವಿಷಾದಿಸಿದರು.

ಭೋಗ ಜೀವನ ನಡೆಸುತ್ತಿರುವ ರಾಜಕಾರಣಿಗಳು ಮತ್ತು ಅಧಿಕಾರ ಶಾಹಿಗಳು ಬಡವರಿಗೆ ಉತ್ತಮ ಜೀವನದ ಹಕ್ಕನ್ನು ನಿರಾಕರಿಸುತ್ತಿದ್ದಾರೆ. ಬದಲಿಗೆ ಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆಯ ಶಿಕ್ಷೆ ವಿಧಿಸಲಾಗುತ್ತಿದೆ. ಜನತೆ ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳುವಲ್ಲಿ ಇವರು ತಡೆಯಾಗಿದ್ದಾರೆ ಎಂದು ಟೀಕಿಸಿದರು.

ಭೂಸ್ವಾಧೀನ ಮತ್ತು ಬಾಡಿಗೆ ನಿಯಂತ್ರಣ ಕಾಯ್ದೆಗಳು ವಸತಿ ಸಮಸ್ಯೆಗೆ ಕಾರಣವಾಗುತ್ತಿವೆ, ಇದರಿಂದಾಗಿ ಪ್ರಗತಿಯ ವೇಗಕ್ಕೂ ಧಕ್ಕೆಯಾಗುತ್ತಿದೆ ಎಂದು ಹೇಳಿದ ನಾರಾಯಣಮೂರ್ತಿ, ಮುಂಬಯಿಯಿಂದ ಬೆಂಗಳೂರಿಗೆ ತಾವು ಸ್ಥಳಾಂತರಗೊಳ್ಳಲು ಮಹಾರಾಷ್ಟ್ರದಲ್ಲಿನ ವಸತಿ ಸಮಸ್ಯೆಯೇ ಕಾರಣ ಎಂದು ನೆನಪಿಸಿಕೊಂಡರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X