ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋವೋ ನಾರ್ಡಿಸ್ಕ್‌ ಅನಿಲ್‌ ಕಪೂರ್‌ಗೆ ಡೆನ್ಮಾರ್ಕ್‌ನ ಪ್ರತಿಷ್ಠಿತ ಡಿಪ್ಲೊಮಾ

By Staff
|
Google Oneindia Kannada News

ಬೆಂಗಳೂರು : ಮಧುಮೇಹದ ಬಗೆಗೆ ಜಾಗೃತಿ ಮೂಡಿಸಿದ್ದಕ್ಕೆ ಹಾಗೂ ಡೆನ್ಮಾರ್ಕ್‌ನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿಕೊಟ್ಟಿರುವುದಕ್ಕಾಗಿ ನೋವೋ ನಾರ್ಡಿಸ್ಕ್‌ ಫಾರ್ಮ ಇಂಡಿಯಾ ಲಿಮಿಟೆಡ್‌ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಅನಿಲ್‌ ಕಪೂರ್‌ ಅವರಿಗೆ ನ್ಯಾಷನಲ್‌ ಅಸೋಸಿಯೇಶನ್‌ ಫಾರ್‌ ಡ್ಯಾನಿಷ್‌ ಎಂಟರ್‌ಪ್ರೆೃಸ್‌ನ ಡಿಪ್ಲೊಮ ಹಾಗೂ ಪ್ರಿನ್ಸ್‌ ಹೆನ್ರಿಕ್‌ ಪದಕ ಲಭಿಸಿದೆ.

ಭಾರತದಲ್ಲಿನ ಡೆನ್ಮಾರ್ಕ್‌ ರಾಯಭಾರಿ ಬರ್ಗಿತ್‌ ಸ್ಟೋರ್‌ಗಾರ್ಡ್‌ ಮ್ಯಾಡ್‌ಸೆನ್‌ ಮಂಗಳವಾರ ನಡೆದ ಸರಳ ಸಮಾರಂಭವೊಂದರಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದರು. 10 ವರ್ಷದ ಹಿಂದೆ ನೋವೋ ನಾರ್ಡಿಸ್ಕ್‌ ಶುರುಮಾಡಿದಾಗ ಡೆನ್ಮಾರ್ಕ್‌ ಉತ್ಪನ್ನಗಳಿಗೆ ಈ ಮಟ್ಟದ ಬೇಡಿಕೆ ದೊರೆಯುವುದರ ಬಗ್ಗೆ ಕೊಂಚವೂ ನಿರೀಕ್ಷೆಯಿರಲಿಲ್ಲ. ಈ ಹೊತ್ತು ಒಂದು ಬಿಲಿಯನ್‌ ಸಂಪಾದನೆ ಕಂಪನಿಯದು. ಇಷ್ಟಕ್ಕೆಲ್ಲಾ ಕಾರಣ ಕಪೂರ್‌ ಶ್ರದ್ಧೆ.

ಭಾರತದಲ್ಲಿ ಸುಮಾರು 3 ಕೋಟಿ ಮಧುಮೇಹಿಗಳಿದ್ದಾರೆ. ಅವರಿಗೆ ಈ ಖಾಯಿಲೆ ಬಗ್ಗೆ ಅರಿವು ಹುಟ್ಟಿಸಿ, ಜಾಗೃತಿ ಮೂಡಿಸುವುದು ಅತ್ಯವಶ್ಯಕ. ಕಂಪನಿಯು ಬಡ ಮಧುಮೇಹಿಗಳ ಸಮಸ್ಯೆಗೆ ಸ್ಪಂದಿಸುತ್ತಿದ್ದು, ಉಚಿತ ಇನ್‌ಸುಲಿನ್‌ ವಿತರಿಸುತ್ತಿದೆ ಎಂದು ಪ್ರಶಸ್ತಿ ಪಡೆದ ನಂತರ ಕಪೂರ್‌ ಹೇಳಿದರು.

ಐಟಿ ಪಂಡಿತರಿಗೆ ಡೆನ್ಮಾರ್ಕ್‌ಗೂ ಬುಲಾವು : ಡೆನ್ಮಾರ್ಕ್‌ ದೇಶ ಭಾರತದ ಐಟಿ ಪರಿಣತರನ್ನು ಹುಡುಕುತ್ತಿದೆ. ಹಾಗಂತ ಈಗಲೇ ಅಮೆರಿಕ, ಬ್ರಿಟನ್‌ ಹಾಗೂ ಜರ್ಮನಿಗಳಂತೆ ಹಸುರು ಕಾರ್ಡ್‌ ವಿತರಿಸುತ್ತಿಲ್ಲ. ಅದರ ಬಗೆಗೆ ಚರ್ಚೆಗಳು ನಡೆಯುತ್ತಿವೆ ಎಂದು ಬರ್ಗಿತ್‌ ತಿಳಿಸಿದರು.

ಡೆನ್ಮಾರ್ಕ್‌ ಪುಟ್ಟ ದೇಶ. ಅದರ ಜನಸಂಖ್ಯೆ ಕೇವಲ 50 ಲಕ್ಷ. ಭಾರತೀಯರ ಸಮುದಾಯ, ಅವರಿಗೆ ಬೇಕಾದ ಊಟ ದೊರೆಯುವ ಹೊಟೇಲುಗಳು, ಪ್ರತ್ಯೇಕ ಮನರಂಜನೆಗಳು ಇಲ್ಲದಿರುವುದರಿಂದ ಅವರು ತಮ್ಮ ದೇಶಕ್ಕೆ ಭಾರತೀಯರನ್ನು ಆಕರ್ಷಿಸಲು ಸುಲಭವಾಗುತ್ತಿಲ್ಲ. ಆದರೆ ಕಳೆದೈದು ವರ್ಷಗಳಲ್ಲಿ 50 ಕಂಪನಿಗಳು ಹುಟ್ಟಿಕೊಂಡಿದ್ದು, ಹೆಸರನ್ನೂ ಮಾಡಿವೆ. ಭಾರತೀಯ ಐಟಿ ಪರಿಣತರೂ ಇಂಥ ಉತ್ತಮ ಅವಕಾಶವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಷ್ಟೆ ಎಂದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X