ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಂಖ್ಯಾ ಫಲಕವೂ, ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯೂ

By Staff
|
Google Oneindia Kannada News

ಬೆಂಗಳೂರು : ಕನ್ನಡ ನಾಡಿನಲ್ಲಿ ಕನ್ನಡದ ಅಂಕಿಗಳು ಹಾಗೂ ಕನ್ನಡ ಸಂಪೂರ್ಣವಾಗಿ ಬಳಕೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಮುಂದೆ ರಾಜ್ಯ ಸರಕಾರದ ಎಲ್ಲ ಇಲಾಖೆಗಳ ವಾಹನಗಳ ಸಂಖ್ಯಾಫಲಕವೂ ಕನ್ನಡ ಅಂಕಿಗಳಿಂದ ಕಂಗೊಳಿಸಲಿದೆ.

ಇದು ಕನ್ನಡದ ಬೆಳವಣಿಗೆಯ ದೃಷ್ಟಿಯಿಂದ ಶುಭದಾಯಕ ವಿಚಾರವೇ ಸರಿ. ಆದರೆ, ಇದರ ಹಿಂದಿರುವ ಕೆಲವು ಸಮಸ್ಯೆಗಳ ಬಗ್ಗೆ ಹಾಗೂ ಸರಕಾರದ ಕೆಲವು ಇಲಾಖೆ ಮಾಡುತ್ತಿರುವ ಕಾನೂನು ಉಲ್ಲಂಘನೆಯ ಬಗ್ಗೆ ಗಮನ ಹರಿಸುವುದೂ ಅಗತ್ಯ. ಭಾನುವಾರದಿಂದ ಆರಂಭವಾಗಿರುವ ಕನ್ನಡ ಅಂಕಿ ಸಪ್ತಾಹದಲ್ಲಿ ಎಲ್ಲ ಸರಕಾರಿ ವಾಹನಗಳ ಸಂಖ್ಯಾ ಫಲಕಗಳನ್ನೂ ಕನ್ನಡ ಅಂಕಿಗಳಿಗೆ ಪರಿವರ್ತಿಸಲಾಗುತ್ತಿದೆ.

ಕಾನೂನು ಏನು ಹೇಳುತ್ತದೆ : ಭಾರತೀಯ ಮೋಟಾರು ವಾಹನ ಕಾಯಿದೆಯಡಿ ಸದ್ಯಕ್ಕಂತೂ ಇಂಡೋ ಅರೇಬಿಕ್‌ ಅಂಕಿಗಳ ಬದಲು ಮತ್ತಾವುದೇ ಭಾರತೀಯ ಭಾಷೆಯ ಸಂಖ್ಯೆಗಳನ್ನು ಮಾತ್ರ ಯಾವುದೇ ವಾಹನ ಹೊಂದಲು ಅವಕಾಶ ಕಲ್ಪಿಸಲಾಗಿಲ್ಲ. ಆದರೆ, ಮಾಲಿಕರು ಇಚ್ಛಿಸಿದಲ್ಲಿ ಹಾಲಿ ಸಂಖ್ಯಾ ಫಲಕದ ಜತೆ ಹೆಚ್ಚುವರಿಯಾಗಿ ಪ್ರಾದೇಶಿಕ ಭಾಷಾ ಸಂಖ್ಯಾ ಫಲಕ ಹೊಂದಲು ಅವಕಾಶ ಇದೆ. ಈ ರೀತಿಯ ರಾಷ್ಟ್ರೀಯ ಕಾನೂನಿಗೆ ಕಾರಣವೂ ಇದೆ. ಉದಾಹರಣೆಗೆ ಕನ್ನಡೇತರರಿಗೆ ಹಾಗೂ ಅಶಿಕ್ಷಿತ ಹಾಗೂ ಅರೆ ಶಿಕ್ಷಿತ ಕನ್ನಡಿಗರಿಗೇ ಕನ್ನಡ ಅಂಕಿಗಳ ಪರಿಚಯ ಇರುವುದಿಲ್ಲ. ಅಂತೆಯೇ ಇತರ ಭಾರತೀಯ ಭಾಷೆಗಳ ಸಂಖ್ಯೆಗಳ ಪರಿಚಯ ಇತ-ರ ಭಾಷೆಯ ನಾಗರಿಕರಿಗೆ ತಿಳಿದಿರುವುದಿಲ್ಲ.

ಒಂದೊಮ್ಮೆ ಭಾರತೀಯ ಭಾಷೆಯ ಸಂಖ್ಯಾ ಫಲಕ ಹೊತ್ತ ವಾಹನಗಳು ಅನ್ಯ ಭಾಷಿಕರಿಗೆ ಅಪಘಾತ ಮಾಡಿ ತಪ್ಪಿಸಿಕೊಂಡಲ್ಲಿ , ಹಾನಿಗೊಳಗಾದ ವ್ಯಕ್ತಿಗೆ ತನಗೆ ಯಾವ ವಾಹನದಿಂದ ಹಾನಿಯಾಯಿತು ಎಂದು ದಾಖಲಿಸಿಕೊಳ್ಳಲೂ ಕಷ್ಟವಾಗುತ್ತದೆ. ಈ ಬಗ್ಗೆ ಅಧಿ--ಕಾ-ರಿ-ಗ-ಳ-ನ್ನು ಪ್ರ-ಶ್ನಿ-ಸಿದಾ--ಗ ಈ ಸಂಬಂ-ಧ ಇಲ್ಲಿ-ಯ-ವ-ರೆ-ಗೆ ಯಾವ ದೂರೂ ತಮಗೆ ಬಂದಿ-ಲ್ಲಿ ಎಂದು ಜಾರಿ-ಕೆ ಉತ್ತ-ರ ನೀಡಿ-ದ-ರು.

ಪ್ರಾಧಿಕಾರದ ಸಲಹೆಯ ಮೇರೆಗೆ ಡಿ.ಪಿ.ಆರ್‌. ಹಾಲಿ ಸಂಖ್ಯಾ ಫಲಕದ ಜತೆ ವಾಹನದ ನಿರ್ದಿಷ್ಟ ಜಾಗದಲ್ಲಿ ಕನ್ನಡ ಫಲಕವನ್ನೂ ಹಾಕುವಂತೆ ಆದೇಶ ಹೊರಡಿಸಿತ್ತು. ಈಗ ಪ್ರಥಮ ಹಂತವಾಗಿ ಕರ್ನಾಟಕ ರಾಜ್ಯದ ಸರಕಾರಿ ವಾಹನಗಳಿಗೆ ಕನ್ನಡ ಸಂಖ್ಯಾ ಫಲಕಗಳನ್ನು ಮಾತ್ರವೇ ಅಳವಡಿಸಲಾಗುತ್ತಿದೆ. ಇದನ್ನೇ ಅನುಸರಿಸಿ ಕನ್ನಡಾಭಿಮಾನಿಗಳೆಲ್ಲರೂ ಕನ್ನಡದಲ್ಲೇ ಸಂಖ್ಯಾ ಫಲಕ ಬರೆಸಿದರೆ, ಆ ವಾಹನಗಳಿಂದ ಕನ್ನಡೇತರರಿಗೆ ತೊಂದರೆಯಾದರೆ, ಸಮಸ್ಯೆ ಆಗ ಉದ್ಭವಿಸುತ್ತದೆ. ಅಂತೆಯೇ ನೆರೆ ರಾಷ್ಟ್ರಗಳಿಗೆ ಹೋದ ಕನ್ನಡಿಗರಿಗೆ ತಮಿಳು, ತೆಲಗು, ಹಿಂದಿ, ಪಂಜಾಬಿ ಹೀಗೆ ಅನ್ಯ ಭಾಷೆಯ ಅಂಕಿಗಳುಳ್ಳ ವಾಹನದಿಂದ ತೊಂದರೆಯಾದರೆ, ಆಗ ಇದೇ ಸಮಸ್ಯೆಯನ್ನು ಕನ್ನಡಿಗರೂ ಅನುಭವಿಸಬೇಕಾಗುತ್ತದೆ.

ಇದನ್ನು ಅರಿತು ಸರಕಾರ ಇಂಗ್ಲಿಷ್‌ ಸಂಖ್ಯಾ ಫಲಕಗಳ ಜತೆ ಕನ್ನಡ ಫಲಕ ಹಾಕ ಬೇಕೇ ಹೊರತು, ಇಂಗ್ಲಿಷ್‌ ಬೋರ್ಡ್‌ ಬದಲು ಕನ್ನಡ ಫಲಕ ಹಾಕುವುದು ಸೂಕ್ತವಲ್ಲ. ಕನ್ನಡಾಭಿಮಾನ ಎಲ್ಲರಲ್ಲೂ ಇರಬೇಕು. ಕನ್ನಡಾಭಿಮಾನದ ಹೆಸರಿನಲ್ಲಿ ಕೇಂದ್ರದ ಕಾನೂನು ಉಲ್ಲಂಘಿಸುವುದು ಸಾಧುವೇ ಎನ್ನುವುದು ಈಗ ಉದ್ಭವಿಸಿರುವ ಪ್ರಶ್ನೆ.

  • ಮುಖಪುಟ / ಇವತ್ತು... ಈ ಹೊತ್ತು...
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X