ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಇಂತೂ ಸರಕಾರದ ವಾಹನಗಳಮೇಲೆ ಕನ್ನಡ ಅಂಕಿ ಬಂತು

By Staff
|
Google Oneindia Kannada News

ಬೆಂಗಳೂರು : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಲಹೆಯ ಮೇರೆಗೆ ಮೊನ್ನೆ ಮೊನ್ನೆಯಷ್ಟೇ ಸರಕಾರದ ಎಲ್ಲ ಇಲಾಖಾ ವಾಹನಗಳ ಸಂಖ್ಯಾ ಫಲಕದ ಮೇಲೆ ಕನ್ನಡ ಅಂಕಿಗಳನ್ನು ಬರೆಸುವುದು ಕಡ್ಡಾಯ ಎಂದು ಸರಕಾರ ಹೇಳಿದ್ದು ನಿಮಗೂ ನೆನಪಿರಬೇಕು.

ಸಾಮಾನ್ಯವಾಗಿ ರಾಜ್ಯೋತ್ಸವ ಮಾಸದಲ್ಲಿ ಬರುವ ಇಂತಹ ಹೇಳಿಕೆಗಳ ಬಗ್ಗೆ ಯಾರೂ ತಲೆಕೆಡೆಸಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಏಕಾಏಕಿ ಕನ್ನಡ ಅಂಕಿ ಬಳಕೆ ಸಪ್ತಾಹವೇ ನಡೆಯುತ್ತಿದೆ. ಭಾನುವಾರ ಈ ಸಪ್ತಾಹ ಉದ್ಘಾಟನೆಗೊಂಡಿದ್ದು, ಹಲವು ಸರಕಾರಿ ಇಲಾಖೆಗಳ ವಾಹನಗಳ ನಾಮಫಲಕ ಕನ್ನಡ ಅಂಕಿಗಳಿಂದ ಕಂಗೊಳಿಸಿದೆ. ವಾಹನಗಳ ಮೇಲೆ ಕನ್ನಡ ಅಂಕಿಗಳನ್ನು ಬರೆಯಿಸುವ ಮೂಲಕ ಕನ್ನಡ ಅಂಕಿಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಕನ್ನಡ ಅಂಕಿ ಬಳಕೆ ಬಗ್ಗೆ ಕನ್ನಡಿಗರನ್ನು ಉತ್ತೇಜನಗೊಳಿಸಲು ಕೈಗೊಂಡ ಈ ಕಾರ್ಯಕ್ರಮ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದೆ.

ಇದಕ್ಕೆ ಅಗತ್ಯವಾದ ಕಾನೂನು ತಿದ್ದುಪಡಿಯೂ ಆಗುವ ಆಶಾಭಾವನೆ ಇದೆ. ಹಾಲಿ ಭಾರತೀಯ ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ವಾಹನಗಳ ಸಂಖ್ಯಾ ಫಲಕಗಳ ಮೇಲೆ ಇಂಡೋ ಅರೇಬಿಕ್‌ ಅಂಕಿಗಳನ್ನು ಮಾತ್ರ ಬಳಸಲು ಅವಕಾಶವಿದೆ. ಈಗ ರಾಜ್ಯದಲ್ಲಿ ಸರಕಾರಿ ವಾಹನಗಳೇ ಕನ್ನಡ ಅಂಕಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಕನ್ನಡ ಅಂಕಿಗಳೂ ಸೇರಿದಂತೆ ಎಲ್ಲ ಭಾರತೀಯ ಭಾಷೆಯ ಅಂಕಿಗಳ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂಬ ಆಶಾಭಾವನೆ ಕನ್ನಡ ಅನುಷ್ಠಾನ ಮಂಡಳಿಯದಾಗಿದೆ.

ಅಂತೂ ಭಾನುವಾರ ಆರಂಭವಾದ ಈ ಸಪ್ತಾಹ ಈ ಕನ್ನಡ ಸೇವೆಯ ಕಾರ್ಯಕ್ಕೆ ಚಾಲನೆ ದೊರೆತಿದೆ. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅ.ರಾ. ಚಂದ್ರಹಾಸ ಗುಪ್ತ, ಮಾಜಿ ಸಚಿವ ಎಂ. ಚಂದ್ರಶೇಖರ್‌, ಮಂಡಳಿಯ ಅಧ್ಯಕ್ಷ ಆರ್‌.ಎ. ಪ್ರಸಾದ್‌, ಪ್ರಾಧಿಕಾರದ ಕಾರ್ಯದರ್ಶಿ ಸಿ. ಸೋಮಶೇಖರ್‌ ಮೊದಲಾದವರು ಹಾಜರಿದ್ದರು.

ನವೆಂಬರ್‌ 20ರ ಆದೇಶದಲ್ಲಿ ಇಂಗ್ಲಿಷ್‌ ಸಂಖ್ಯೆಗಳ ಜತೆಗೇ ಕನ್ನಡ ಅಂಕಿಗಳನ್ನೂ ಬರೆಸುವ ಬಗ್ಗೆ ಸೂಚನೆ ನೀಡಲಾಗಿತ್ತು. ಆದರೆ, ಸಪ್ತಾಹದಲ್ಲಿ ಸಂಖ್ಯಾ ಫಲಕ ಸಂಪೂರ್ಣ ಕನ್ನಡ ಅಂಕಿಗಳನ್ನೇ ಒಳಗೊಂಡದ್ದು, ಕನ್ನಡಾಭಿಮಾನಿಗಳಿಗೆ ಮತ್ತಷ್ಟು ಆನಂದ ತಂದಿತು. ಈ ವಾರವಿಡೀ ಎಲ್ಲ ಇಲಾಖಾ ವಾಹನಗಳ ಮೇಲೆ ಕನ್ನಡ ಅಂಕಿಗಳ ಬರೆಸುವ ಕಾರ್ಯಕ್ರಮ ಮುಂದುವರಿಯುತ್ತದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X