Get Updates
Get notified of breaking news, exclusive insights, and must-see stories!

ಪ್ಯಾರಿಸ್‌ನಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕಸಂಗೀತದ ಜುಗಲ್‌ ಬಂದಿ

ರಣವೀರ್‌ ನಾಯರ್‌

ಪ್ಯಾರೀಸ್‌ : ಹಿಂದೂಸ್ತಾನೀ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಜುಗಲ್‌ಬಂದಿ ಕಚೇರಿ ಪ್ರಥಮ ಬಾರಿಗೆ ಈ ಭಾನುವಾರದಂದು ಪ್ಯಾರಿಸ್‌ನ ಸಂಜೆಗೆ ರಂಗು ಬಳಿಯಲಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತದ ಕಲ್ಪನಾ ವೆಂಕಟ್‌ ಅವರ ವಯಲಿನ್‌ ಮತ್ತು ಹಿಂದುಸ್ತಾನೀ ಸಂಗೀತದ ಬಿ. ಶಿವರಾಮ ಕೃಷ್ಣ ರಾವ್‌ ಅವರ ಸಿತಾರ್‌ ವಾದನ , ವೇದಿಕೆಯಲ್ಲೊಂದು ಕೌಶಲ್ಯ ಸ್ಪರ್ಧೆಯನ್ನೇ ನಿರ್ಮಿಸಲಿದೆ. ಭಾರತದ ಸಾಂಸ್ಕೃತಿಕ ಹೆಚ್ಚುಗಾರಿಕೆಯನ್ನು ಫ್ರಾನ್ಸ್‌ನಲ್ಲಿ ಪರಿಚಯಿಸುವ ಉದ್ದೇಶದೊಂದಿಗೆ ಹುಟ್ಟಿಕೊಂಡಿರುವ ತ್ರಿವೇಣಿ ಸಂಘಟನೆ ಕಾರ್ಯಕ್ರಮವನ್ನು ಆಯೋಜಿಸಿದೆ. ಫ್ರಾನ್ಸ್‌ಗೆ ಜುಗಲ್‌ ಬಂದಿ ಹೊಸದೇನಲ್ಲ . ಆದರೆ ಹಿಂದೂಸ್ತಾನೀ ಮತ್ತು ಕರ್ನಾಟಕ ಸಂಗೀತ ಜುಗಲ್‌ ಬಂದಿ ಕಾರ್ಯಕ್ರಮ ಪ್ರಥಮ ಬಾರಿಗೆ ನಡೆಯುತ್ತಿದೆ ಎನ್ನುತ್ತಾರೆ ಆಯೋಜಕರು.

ಕಲ್ಪನಾ, ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಿಣತೆ. ತನ್ನ ಆರನೇ ವಯಸ್ಸಿನಲ್ಲಿ ತಾಯಿ ಸೀತಾ ಕಿಶೋರ್‌ ಅವರ ಮಾರ್ಗದರ್ಶನದಲ್ಲಿ ಸಂಗೀತ ಕಲಿಕೆ ಆರಂಭಿಸಿದ ಈಕೆ, ನಂತರದಲ್ಲಿ ಸಂಗೀತ ಚೂಡಾ ಮಣಿ ಟಿ. ರುಕ್ಮಿಣಿ ಕಲ್ಪನಾರ ಶಿಷ್ಯೆಯಾಗಿ ಸಂಗೀತಾಭ್ಯಾಸ ಮುಂದುವರೆಸಿದರು. ಕಲ್ಪನಾ ಈವರೆಗೆ ಭಾರತದಾದ್ಯಂತ, ಪಶ್ಚಿಮ ಏಷ್ಯ , ಯುಎಸ್‌ಎ ಮತ್ತು ಸಿಂಗಾಪುರಗಳಲ್ಲಿ ಸುಮಾರು 1,500ಕ್ಕೂ ಹೆಚ್ಚು ಕಚೇರಿಗಳನ್ನು ಕೊಟ್ಟಿದ್ದಾರೆ.

ಕಚೇರಿಯಲ್ಲಿ ಹಿಂದುಸ್ತಾನಿ ಸಂಗೀತ ಪೀಠದಲ್ಲಿ ಕುಳಿತು ಕೊಳ್ಲಲಿರುವ ಬಸವರಾಜ ಶಿವರಾಮ್‌ ಕೃಷ್ಣ ರಾವ್‌ 1976ರಲ್ಲಿ ಸಂಗೀತ ಕುಟುಂಬದಲ್ಲಿಯೇ ಹುಟ್ಟಿದವರು. ತಂದೆ ಪಂಡಿತ್‌ ಸುಬ್ಬರಾವ್‌ ಅವರಿಂದ ಸಂಗೀತ ಪಾಠಕ್ಕೆ ಗಣಾಧಿಪತಯೇ ನಮಃ ಬರೆದರು. ನಂತರ ಮಿಯಾನ್‌ ಅಚ್‌ಪಾಲ್‌ ಘರಾನಾದ ಹಿರಿಯರಾದ, ಅಹ್ಮದ್‌ ಹುಸೈನ್‌ ಅವರ ಶಿಷ್ಯತ್ವ. ಶಿವರಾಮ ಅವರ ಲಯಜ್ಞಾನದ ಕೀರ್ತಿಗೆ, ತಿರುಪತಿಯಲ್ಲಿರುವ ದಕ್ಷಿಣ ಭಾರತೀಯ ರಾಜ್ಯಗಳ ಸಂಗೀತ ಸಂಸ್ಥೆ ‘ಲಯ ಬ್ರಹ್ಮ ’ ಬಿರುದಿನ ಮುಕುಟವಿಟ್ಟಿದೆ.

ಪ್ಯಾರಿಸ್‌ನ ಸಂಗೀತ ಕಚೇರಿಯಲ್ಲಿ ಮೃದಂಗ ಸಾಥಿಯಾದರೆ ಡಿ.ಎ. ಶ್ರೀನಿವಾಸ್‌ ಮತ್ತು ಬಿ. ಗಣೇಶ್‌ ರಾವ್‌ ತಬಲಾ ಸಾಥಿಯಾಗಲಿದ್ದಾರೆ. ಅಂದು ಸಂಜೆ ಪ್ಯಾರಿಸ್‌ನ ಸಂಗೀತ ಪ್ರೇಮಿಗಳು ಸಾಲೆ ಅಡ್ಯಾರ್‌ನಲ್ಲಿ ಸಂಜೆ 6.30ಕ್ಕೆ ಸೇರಲಿದ್ದಾರೆ. ಜುಗಲ್‌ ಬಂದಿಯ ಸವಿ ಸಂಜೆ ಅವರನ್ನು ಎದುರುಗೊಳ್ಳಲಿದೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+