ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಭಾರತೀಯರಿಗೆ ದ್ವಿ ಪೌರತ್ವ ಪ್ರಸ್ತಾವನೆ ಕೈ ಬಿಟ್ಟ ಕೇಂದ್ರ ಸರ್ಕಾರ

By Staff
|
Google Oneindia Kannada News

ನವ ದೆಹಲಿ : ಅನಿವಾಸಿ ಭಾರತೀಯರಿಗೆ ದ್ವಿ ಪೌರತ್ವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಕೈ ಬಿಟ್ಟಿದೆ. ಆದರೆ, ಕಳೆದ ವರ್ಷದ ಮಾರ್ಚ್‌ನಲ್ಲಿ ಪರಿಚಯಿಸಿದ್ದ , ಭಾರತೀಯ ಮೂಲದವರಿಗೆ ವಿವಿಧ ಸೌಲಭ್ಯಗಳನ್ನು ನೀಡುವ ಕಾರ್ಡ್‌ಗಳನ್ನು ಮುಂದುವರಿಸಲು ನಿರ್ಧರಿಸಿದೆ.

ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಅಜಿತ್‌ ಕುಮಾರ್‌ ಪಾಂಜಾ ಅವರು ಶುಕ್ರವಾರ ಲಿಖಿತ ಹೇಳಿಕೆಯ ಮೂಲಕ ಲೋಕಸಭೆಗೆ ಈ ವಿಷಯವನ್ನು ತಿಳಿಸಿದರು. ಸಂಸದ ಕೃಷ್ಣ ಭೋಸ್‌ ಅವರು ದ್ವಿ ಪೌರತ್ವದ ಬಗ್ಗೆ ಕೇಳಿದ್ದ ಪ್ರಶ್ನೆಯಾಂದಕ್ಕೆ, ಗೃಹ ಸಚಿವಾಲಯ ಈ ಪ್ರಸ್ತಾವನೆಯನ್ನು ಕೈ ಬಿಟ್ಟಿದೆ ಎಂದು ಪಾಂಜಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದ್ವಿ ಪೌರತ್ವದ ಪರಿಶೀಲನೆಯು ಅಂತರ ಸಚಿವಾಲಯಗಳ ನಡುವೆ ಅನೇಕ ಸಲ ಪ್ರಸ್ತಾಪಕ್ಕೆ ಬಂದಿದ್ದರೂ, ಪ್ರತಿ ಸಲವೂ ದ್ವಿ ಪೌರತ್ವ ನೀಡುವ ವಿಷಯಕ್ಕೆ ವಿರೋಧ ಎದುರಾಗಿದೆ. ಪೌರತ್ವ ಮಸೂದೆ 1955 ರ 9 ನೇ ಪರಿಚ್ಛೇದದ ಪ್ರಕಾರ, ಒಬ್ಬ ವ್ಯಕ್ತಿ ಮತ್ತೊಂದು ದೇಶದ ಪೌರತ್ವವನ್ನು ಅಂಗೀಕರಿಸಿದಾಗ ಆತನ ಭಾರತೀಯ ಪೌರತ್ವ ತಂತಾನೇ ರದ್ದಾಗುತ್ತದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X