Get Updates
Get notified of breaking news, exclusive insights, and must-see stories!

ತಮಿಳಿನ ‘ಪೋಕಿರಿ’ ಸಿನಿಮಾ ಪ್ರದರ್ಶನಕ್ಕೆ ‘ಕರವೇ’ ತಡೆ

ಬೆಂಗಳೂರು : ತಮಿಳು ಚಲನಚಿತ್ರ ಪ್ರದರ್ಶಿಸುತ್ತಿದ್ದ ನಗರದ ಎರಡು ಚಿತ್ರಮಂದಿರಗಳ ಮೇಲೆ ದಾಳಿ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು, ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದಾರೆ.

ಶೇಷಾದ್ರಿಪುರದ ನಟರಾಜ ಮತ್ತು ಶ್ರೀರಾಮಪುರದ ದೇವಿ ಚಿತ್ರಮಂದಿರಕ್ಕೆ ನುಗ್ಗಿದ ವೇದಿಕೆ ಸದಸ್ಯರು, ಬೆಳ್ಳಿತೆರೆಯನ್ನು ಹರಿದು ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಕಟೌಟುಗಳನ್ನು ಮುರಿದರು. ಪ್ರದರ್ಶನ ರದ್ದು ಪಡಿಸಿದ್ದರಿಂದ, ಪರಿಸ್ಥಿತಿ ಶಾಂತವಾಯಿತು. ಘಟನೆಗೆ ಸಂಬಂಧಿಸಿದಂತೆ 60ಮಂದಿ ರಕ್ಷಣಾ ವೇದಿಕೆ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಚಿತ್ರಮಂದಿರಗಳಲ್ಲಿ ‘ಪೋಕಿರಿ’ ತಮಿಳು ಚಿತ್ರ ಪ್ರದರ್ಶನಗೊಳ್ಳುತ್ತಿತ್ತು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವೇದಿಕೆ ಅಧ್ಯಕ್ಷ ನಾರಾಯಣಗೌಡ, ಕಾವೇರಿ ನ್ಯಾಯಮಂಡಳಿ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸುವ ತನಕ, ಕರ್ನಾಟಕದಲ್ಲಿ ತಮಿಳು ಚಿತ್ರಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದರು.

(ದಟ್ಸ್‌ ಕನ್ನಡ ವಾರ್ತೆ)

ಪೂರಕ ಓದಿಗೆ
ಕಾವೇರಿ ಶಾಂತ : ಕಿರುತೆರೆಯಲ್ಲಿ ತಮಿಳು ಚಾನಲ್‌ ಪ್ರವಾಹ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+