ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಕಾಲಿನಲ್ಲಿ ಚಕ್ರ ಇದೆ. ಇಂದಂತೂ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪ್ರವಾಸ ಹೋಗುತ್ತೀರಿ. ಚಳಿಯೆಂದು ಮುದುಡಿ ಕುಳಿತುಕೊಳ್ಳುವ ಸ್ವಭಾವ ನಿಮ್ಮದಲ್ಲ. ಎಲ್ಲ ರೀತಿಯಲ್ಲೂ ಇಂದು ನಿಮಗೆ ಒಳ್ಳೆಯ ದಿನ.ವೃಷಭ :ಇಂಟರ್‌ನೆಟ್ ಯುಗದಲ್ಲಿ ಸಂವಹನಕ್ಕೇನು ಕೊರತೆ. ಮನೆಯಲ್ಲಿ ಕುಳಿತೇ ಮನದನ್ನೆಯ ಜತೆ ಸರಸವಾಡಬಹುದು. ಏಕೆ ತಡ ನಿಮಗಾಗಿ ಒಂದು ಜೀವ ಚಡಪಡಿಸುತ್ತಿದೆ. ಕಾನೂನು ವಿಷಯದಲ್ಲಿ ಜಯ. ಧನಯೋಗವೂ ಇದೆ.
ಮಿಥುನ : ಅನಾರೋಗ್ಯ ನಿಮ್ಮನ್ನು ಕಾಡುತ್ತಿದೆ. ಏಕೀ ಬದುಕು ಎನ್ನುವ ಜಿಜ್ಞಾಸೆಯೂ ಮೂಡಿದೆ. ಇದು ಕ್ಷಣಿಕ. ನಿಮ್ಮ ನಿರೀಕ್ಷೆಗೂ ಮೀರಿದ ಸುಖ ಲಭಿಸಲಿದೆ. ಇಂದಿನ ಸೋಲೆ ನಾಳಿನ ಗೆಲುವು ಎನ್ನುವುದನ್ನು ಮರೆಯಬೇಡಿ. ಹಿತ ಶತ್ರುಗಳ ಬಗ್ಗೆ ಎಚ್ಚರ ಇರಲಿ.
ಕಟಕ : ಎಷ್ಟೋ ದಿನದಿಂದ ದೂರವಾಗಿದ್ದ ಮಿತ್ರನ ಭೇಟಿ. ನಿಮಗೆ ಲಾಟರಿಯಲ್ಲಿ ನಂಬಿಕೆ ಇದೆಯೋ ಇಲ್ಲ. ಆದರೂ ದಿಢೀರ್ ಧನಯೋಗ ನಿಮಗಾಗಿ ಕಾದಿದೆ, ಮನೆಬಾಗಿಲಿಗೆ ಬರುವ ಧನದೇವತೆಗಾಗಿ ಬಾಗಿಲು ತೆಗೆದು ಕಾದಿರಿ.
ಸಿಂಹ : ಇಂದು ಇಂದಿಗೆ, ನಾಳೆ ನಾಳೆಗೆ ಎನ್ನುವ ಸ್ಥಿತಿ ನಿಮ್ಮದು. ನಾಳೆಯ ಬಗ್ಗೆ ಯೋಚಿಸಲೇ ಬೇಕಾದ ಅನಿವಾರ್ಯತೆ ನಿಮ್ಮೆದುರಿದೆ. ಗಂಭೀರವಾಗಿ ಚಿಂತನೆ ಮಾಡಿ, ಇಷ್ಟಾರ್ಥ ಸಿದ್ಧಿಸಲಿದೆ. ಮನೆಗೆ ಬಂಧುಗಳು ಬರುತ್ತಿದ್ದಾರೆ ಜಾಗರೂಕರಾಗಿರಿ.
ಕನ್ಯಾ : ತಲೆ ನೋವು, ಸೊಂಟ ನೋವು, ಮೈಕೈ ಎಲ್ಲಾ ನೋಯುತ್ತಿದೆ. ಚಿಂತಿಸಬೇಡಿ. ನೀವು ಏನು ತಿನ್ನುತ್ತೀರಿ ಎನ್ನುವ ಬಗ್ಗೆ ಹೆಚ್ಚಿನ ಒತ್ತು ಅಗತ್ಯ. ನೌಕರಿಯಲ್ಲಿ ಪ್ರಗತಿ, ನಿಮ್ಮ ಬುದ್ಧಿ ಚಾತುರ್ಯವೇ ನಿಮಗೆ ಶ್ರೀರಕ್ಷೆ.
ತುಲಾ : ನಿಮಗೇನೂ ಕಚೇರಿಯ ಜಂಜಾಟ ಮರೆತು ಊರೆಲ್ಲಾ ಸುತ್ತಿ - ಸಂತಸ ಪಡುವಾಸೆ. ಅವಕಾಶ ಇಲ್ಲ. ವಿಪರೀತ ಕೆಲಸ. ಕೆಲಸದ ನಡುವೆಯೂ ಆನಂದವಿದೆ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಕಾದಿದೆ.
ವೃಶ್ಚಿಕ : ಆನಂದಕ್ಕೆ ಕೊಂಚ ಕಡಿವಾಣ ಹಾಕಿ. ನಾಲಿಗೆಗೂ ಅಷ್ಟೇ. ಪ್ರಮೋಷನ್ ಬಂದರೂ ಬಂದೀತು. ಇಂದು ಎಷ್ಟು ನಯವಾಗಿದ್ದರೆ ಅಷ್ಟು ಒಳಿತು. ನಾಲಿಗೆ ಹರಿಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಮನದಲ್ಲಿ ಮುಸುಕಿರುವ ಕಾರ್ಮೋಡ ಕರಗಿಸುವ ಶಕ್ತಿ ನಿಮ್ಮಲ್ಲೇ ಇದೆ.
ಧನಸ್ಸು :ಹಿರಿಯರು ಹೇಳುವುದೆಲ್ಲಾ ನಿಮ್ಮ ಒಳ್ಳೆಯದಕ್ಕೇ ತಾನೆ. ಆದರೆ, ನಿಮಗೆ ನೀವೇ ದೊಡ್ಡವರೆಂಬ ಅಹಂಕಾರ ಇದೆ. ಇದು ಸರ್ವತಾ ಒಳ್ಳೆಯದಲ್ಲಾ, ನಿಮ್ಮನ್ನು ನೀವು ತಿದ್ದಿಕೊಂಡರೆ ನಿಮಗಿಂತ ಒಳ್ಳೆಯವರು ಬೇರಿಲ್ಲ.
ಮಕರ : ನೀವೇನೂ ಅಸಹಾಯ ಶೂರರಲ್ಲ. ನನಗೆ ನಾನೇ ಸಾಟಿ ಎಂಬ ಹಮ್ಮು ನಿಮ್ಮದು. ಆಪ್ತ ಸ್ನೇಹಿತರ ಹಿತವಚನ ಉಪೇಕ್ಷಿಸಿದರೆ ನೀವು ಕೆಟ್ಟಿರಿ. ಇತರರ ಸಲಹೆ ಇಂದು ನೆರವಿಗೆ ಬರುತ್ತದೆ. ದೂರ ಪ್ರಯಾಣದ ಯೋಗವೂ ಇದೆ.
ಕುಂಭ : ಕಾಸಿದ್ರೆ ಕೈಲಾಸ. ಇಂದು ನಿಮ್ಮ ಬಳಿ ಹಣಕ್ಕೆ ತೊಂದರೆ. ಸ್ನೇಹಿತರೆಲ್ಲಾ ದೂರ ಆಗ್ತಾರೆ. ಆರೋಗ್ಯವೂ ಕೈಕೊಟ್ಟಿದೆ. ಖರ್ಚು ಹೆಚ್ಚಾಗಿದೆ. ಮನಸ್ಸಿದ್ದರೆ ಮಾರ್ಗವಿದೆ, ಗೆಲ್ಲುವ ಛಲ ಇರಲಿ.
ಮೀನ : ತಿಂದುಂಡು ತೇಗಲು ನಿಮಗೆ ಸಮಯವಿಲ್ಲ. ಸ್ಥಳ ಬದಲಾವಣೆ ಯೋಚನೆ ನಿಮ್ಮಲ್ಲಿದೆ. ಎಲ್ಲ ವ್ಯವಹಾರದಲ್ಲೂ ಜಯ. ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ದೊರೆತ ಚಿನ್ನವನ್ನು ಜೋಪಾನ ಮಾಡಲು ಮರೆತು ಪಶ್ಚಾತ್ತಾಪ ಪಟ್ಟರೆ ಫಲವಿಲ್ಲ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications