Get Updates
Get notified of breaking news, exclusive insights, and must-see stories!

ಮನರಂಜನಾ ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ಪರಿಷತ್ತಿನ ಅನುಮೋದನೆ

ಬೆಂಗಳೂರು : ಮುಂದಿನ ಸಾಲಿನಿಂದ ಕನ್ನಡ ಚಿತ್ರಗಳಿಗೂ ತೆರಿಗೆ ವಿನಾಯಿತಿ ಬೇಡ ಎಂಬ ಒತ್ತಾಯ, ಕನ್ನಡ ಚಿತ್ರಗಳ ಸಾಹಿತ್ಯ, ಗುಣಮಟ್ಟ, ಚಿತ್ರೋದ್ಯಮದ ವಾಸ್ತವ ಸ್ಥಿತಿ-ಗತಿಗಳ ಚರ್ಚೆ, ರಾಜ್ಯ ಸರಕಾರವು ಚಿತ್ರಮಂದಿರ ಮಾಲಿಕರ ಜತೆ ಶಾಮೀಲಾಗಿದೆ ಎಂಬ ಆರೋಪ, ಪ್ರತಿಪಕ್ಷಗಳ ವಾಗ್ವಾದ ಈ ಎಲ್ಲದರ ನಡುವೆ ಕನ್ನಡೇತರ ಚಿತ್ರಗಳಿಗೆ ಮನರಂಜನಾ ತೆರಿಗೆಯಲ್ಲಿ ರಿಯಾಯಿತಿ ನೀಡುವ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ತು ಗುರುವಾರ ಅನುಮೋದನೆ ನೀಡಿದೆ. ಧ್ವನಿಮತದ ಮೂಲಕ ವಿಧೇಯಕ ಅನುಮೋದನೆ ಪಡೆಯಿತು.

ಈ ವಿಧೇಯಕದ ಮೇಲೆ ನಡೆದ ಚರ್ಚೆಗೆ ರಾಜ್ಯ ಹಣಕಾಸು ಸಚಿವ ಎಂ. ಶಿವಣ್ಣ ಉತ್ತರಿಸಿದರು. ಈ ವಿಧೇಯಕದಡಿಯಲ್ಲಿ ಕನ್ನಡೇತರ ಚಿತ್ರಗಳಗೆ ನೀಡಲಾಗುತ್ತಿರುವ ಶೇಕಡಾ 20ರಷ್ಟು ಮನರಂಜನಾತೆರಿಗೆ ವಿನಾಯಿತಿಯಿಂದ ಈ ಸಾಲಿನಲ್ಲಿ ಐದು ಕೋಟಿ ನಲವತ್ತೆೈದು ಲಕ್ಷ ರುಪಾಯಿ ನಷ್ಟ ರಾಜ್ಯ ಬೊಕ್ಕಸಕ್ಕೆ ಉಂಟಾಗಲಿದೆ ಎಂದು ಅವರು ವಿವರಿಸಿದರು. ಈ ವಿಧೇಯಕವು ಕನ್ನಡೇತರ ಚಿತ್ರಗಳಿಗೆ ಶೇ. 80 ರಷ್ಟು ತೆರಿಗೆ ವಿನಾಯಿತಿ ನೀಡಲು ಅವಕಾಶ ಕಲ್ಪಿಸುತ್ತದೆ. ಈ ಮುನ್ನ ಕನ್ನಡೇತರ ಚಿತ್ರಗಳಿಗೆ ಶೇ. 100ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.

ಚಿತ್ರೋದ್ಯಮ ಬಂದ್‌ನಿಂದ ಉಂಟಾದ ನಷ್ಟ : ರಾಜ್‌ ಅಪಹರಣದ ಕಾಲದಲ್ಲಿ ಕನ್ನಡ ಚಿತ್ರೋದ್ಯಮ ನಡೆಸಿದ ಸ್ವಯಂ ಘೋಷಿತ ಬಂದ್‌ನಿಂದಾಗಿ ಮೂರುವರೆ ಕೋಟಿ ರುಪಾಯಿ ಮನರಂಜನಾ ತೆರಿಗೆ ನಷ್ಟ ಉಂಟಾಯಿತು ಎಂದು ಅವರು ಹೇಳಿದರು. ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಸಚಿವರು ಈ ವಿಧೇಯಕ ಜಾರಿಗೆ ತರುತ್ತಿರುವುದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದರು.

ವಿಧೇಯಕ ಅನುಮೋದನೆ ಪಡೆವ ಮುನ್ನ ನಡೆದ ಚರ್ಚೆಯಲ್ಲಿ ಚಿತ್ರ ಮಂದಿರಗಳ ಮಾಲಿಕರ ಜತೆ ಸರಕಾರ ಶಾಮೀಲಾಗಿದೆ ಎಂಬ ಶಂಕೆಯೂ ವ್ಯಕ್ತವಾಯಿತು.

ಕನ್ನಡ ಚಿತ್ರಗಳಿಗೂ ವಿನಾಯಿತಿ ಬೇಡ : ಈ ಮಧ್ಯೆ ಮುಂದಿನ ಹಣಕಾಸು ವರ್ಷದಿಂದ ಕನ್ನಡ ಚಿತ್ರಗಳಿಗೂ ನೀಡುತ್ತಿರುವ ಶೇಕಡಾ ನೂರರಷ್ಟು ಮನರಂಜನಾ ತೆರಿಗೆ ವಿನಾಯಿತಿಯನ್ನು ಸರಕಾರ ನಿಲ್ಲಿಸಬೇಕು ಎಂದು ಮಾಜಿ ಸಚಿವ ಹಾಗೂ ಹಿರಿಯ ಸದಸ್ಯ ಎಂ.ಸಿ. ನಾಣಯ್ಯ ವಿಧಾನ ಪರಿಷತ್ತಿನಲ್ಲಿ ಆಗ್ರಹಿಸಿದರು.

ಇನ್ನೂ ಎಷ್ಟು ವರ್ಷಗಳ ಕಾಲ ತೆರಿಗೆ ವಿನಾಯಿತಿ ನೀಡಬೇಕು. ಸರಕಾರ ತೆರಿಗೆ ವಿನಾಯಿತಿ ನೀಡಿರುವುದರಿಂದ ಉತ್ತಮ ಕನ್ನಡ ಚಿತ್ರಗಳೇನಾದರೂ ಬರುತ್ತಿದೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ನಾಣಯ್ಯ ಕೇಳಿದರು. ಇಷ್ಟು ವರ್ಷಗಳ ಕಾಲ ಕನ್ನಡವೂ ಸೇರಿದಂತೆ ಎಲ್ಲ ಚಿತ್ರಗಳಿಗೂ ನೀಡಿರುವ ತೆರಿಗೆ ವಿನಾಯಿತಿ ನಿಲ್ಲಿಸಿ, ಮುಂದಿನ ಆಯವ್ಯಯದಲ್ಲಿ ತೆರಿಗೆ ವಿನಾಯಿತಿ ಕೈಬಿಡಿ ಎಂದು ಒತ್ತಾಯಿಸಿ, ಸರಕಾರ ಈ ಕುರಿತು ಗಂಭೀರವಾಗಿ ಚಿಂತನೆ ಮಾಡಬೇಕೆಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+