ಹಕ್ಕಿ ಹಾರುತಿದೆ ನೋಡಿದಿರಾ? ದೇವರ ರುಜುವೀಗ ವೆಬ್‌ಸೈಟಿನಲ್ಲಿ
ತುಮಕೂರು : ಸಂಜೆಯಾಯಿತೆಂದರೆ ಮನೆ ಸೇರುವ ಬಣ್ಣಬಣ್ಣದ ತರಾವರಿ ಹಕ್ಕಿಗಳು ನಿಮ್ಮ ಕಂಗಳನ್ನು ಒಮ್ಮೆಯಾದರೂ ಸೆಳೆದಿರದೇ ಇರದು. ಹಾಗೆಯೇ ನಾನು ಇಂಥ ಹಕ್ಕೀನ ನೋಡೇ ಇರ್ಲಿಲ್ವೆ ಅಂತ ಅನಿಸಿರುವುದೂ ಉಂಟು. ಈ ಪ್ರಶ್ನೆ ಇರುವವರಲ್ಲಿ ನೀವೂ ಒಬ್ಬರಾಗಿದ್ದರೆ, ಬೆಳ್ಳಕ್ಕಿ- ಕಳ್ಳಕ್ಕಿಗಳ ಬಗ್ಗೆ ಕುತೂಹಲ ಇದ್ದರೆ http://karnatakabirds.homestead.com/home.html ವೆಬ್‌ಸೈಟ್‌ಗೆ ಭೇಟಿ ಕೊಡಿ.
ಬೆಂಗಳೂರು ಅರಣ್ಯ ಭವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಉದಯವೀರ್ ಸಿಂಗ್ ಮತ್ತು ತುಮಕೂರಿನ ಹಕ್ಕಿ ಪ್ರೇಮಿ ಡಾ.ಅಮೀನ್ ಅಹ್ಮದ್ ಸೇರಿ ಹತ್ತು ವರ್ಷಗಳ ಕಾಲ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸುತ್ತಿ, ಕಲೆ ಹಾಕಿದ ಮಾಹಿತಿಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯ.
ಈ ಇಬ್ಬರೂ ಸಾಧಕರು ಬುಧವಾರ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದ ಪಕ್ಷಿಗಳು ಎಂಬ ಈ ಹೊಸ ವೆಬ್‌ಸೈಟ್‌ನ ಕಿರು ಪರಿಚಯ ಮಾಡಿಕೊಟ್ಟರು. ರಾಜ್ಯದಲ್ಲಿ 522 ಪ್ರಭೇದದ ಪಕ್ಷಿಗಳಿವೆ ! ಬಹುತೇಕರಿಗೆ ಗೊತ್ತಿರದ ಈ ವಿಷಯವನ್ನು ಸಿಂಗ್- ಅಹ್ಮದ್ ಪತ್ತೆ ಹಚ್ಚಿದ್ದಾರೆ. ಎಂಟು ವಿಭಾಗಗಳಿರುವ ವೆಬ್‌ಸೈಟ್‌ನಲ್ಲಿ ಕರ್ನಾಟಕದ ಭೌಗೋಳಿಕ ಪರಿಸರ, ರಾಜ್ಯದ ಪ್ರದೇಶಗಳು, ಸ್ಥಳೀಯ ಪಕ್ಷಿಗಳ ಪ್ರಭೇದಗಳು, ಪಕ್ಷಿ ವೀಕ್ಷಣೆ ಸ್ಥಳಗಳು, ವೀಕ್ಷಕ ಸಂಘಟನೆಗಳು, ಪಕ್ಷಿ ಸಂರಕ್ಷಕ ಸಂಸ್ಥೆಗಳು, ಪಕ್ಷಿ ಮಾಹಿತಿಗಳ ವೆಬ್‌ಸೈಟ್‌ಗಳ ವಿವರ ಹಾಗೂ 40 ಪಕ್ಷಿಗಳ ಚಿತ್ರ ಸಹಿತ ವಿವರಣೆ ಎಲ್ಲವನ್ನೂ ನೋಡಬಹುದಾಗಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications