ವೀರಪ್ಪನ್ ಕಾರ್ಯಾಚರಣೆ ವಿರುದ್ಧ ತಮಿಳು ಸಂಘಟನೆ ಆಂದೋಲನ
ಮೈಸೂರು : ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವಿರೋಧಿಸಿ, ಹಾಗೂ ಟಾಡಾ ಬಂದಿಗಳ ಬಿಡುಗಡೆ ನೆನೆಗುದಿಗೆ ಬಿದ್ದಿರುವುದರ ವಿರುದ್ಧ, ವೀರಪ್ಪನ್ ಪರ ಮೃದು ಧೋರಣೆ ಹೊಂದಿರುವ ಕೆಲವು ತಮಿಳು ಸಂಘಟನೆಗಳು ಇದೇ 26ರಂದು ಭಾನುವಾರ ಕರ್ನಾಟಕ - ತಮಿಳುನಾಡು ಗಡಿಯಲ್ಲಿನ ಕೊಳತ್ತೂರಿನಲ್ಲಿ ಬಹಿರಂಗ ಸಭೆ ಹಮ್ಮಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ವೀಶೇಷ ಕಾರ್ಯಾಚರಣೆ ಪಡೆಯಿಂದ ದೌರ್ಜನ್ಯಕ್ಕೊಳಗಾಗಿದ್ದವರು ಹಾಗೂ ವೀರಪ್ಪನ್ ಸಹಚರರೆಂದು ಶಂಕೆಗೊಳಗಾಗಿ ಟಾಡಾ ಕಾಯಿದೆ ಅಡಿ ಬಂಧನಕ್ಕೊಳಗಾಗಿರುವವರ ಕುಟುಂಬದ ಸದಸ್ಯರೂ ಸೇರಿದಂತೆ ರಾಜ್ ಬಿಡುಗಡೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ನೆಡುಮಾರನ್ ಸಹ ಈ ಆಂದೋಲನದಲ್ಲಿ ಭಾಗವಹಿಲಿದ್ದಾರೆ ಎಂದು ಹೇಳಲಾಗಿದೆ.
ರಾಜ್ ಬಿಡುಗಡೆಯ ನಂತರ ಚೆನ್ನೈನಲ್ಲಿ ನೆಡುಮಾರನ್ ತಾವು ಇಂತಹ ಒಂದು ಸಮ್ಮೇಳನವನ್ನು ಕೃಷ್ಣ ಅಯ್ಯರ್ ಅವರ ನೇತೃತ್ವದಲ್ಲಿ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ತಾವು ವೀರಪ್ಪನ್‌ಗೆ ನೀಡಿರುವ ಭರವಸೆಗಳ ಈಡೇರಿಕೆಗೆ ಅಗತ್ಯ ಬಿದ್ದರೆ, ಪ್ರಜಾಪ್ರಭುತ್ವ ಮಾದರಿಯಲ್ಲಿ ಚಳವಳಿ ನಡೆಸುವುದಾಗಿಯೂ ನೆಡುಮಾರನ್ ಹೇಳಿದ್ದರು.
ರಾಜ್ ಬಿಡುಗಡೆ ನಂತರ ಟಾಡಾ ಬಂಧಿಗಳ ಬಿಡುಗಡೆ ಪ್ರಶ್ನೆ ನನೆಗುದಿಗೆ ಬಿದ್ದಿರುವ ಬಗ್ಗೆ, ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ವಿತರಣೆ ಬಗ್ಗೆ 26ರಂದು ನಡೆಯಲಿರುವ ಈ ಸಭೆಯಲ್ಲಿ ಚರ್ಚಿಸಿ, ಮುಂದಿನ ಹೋರಾಟ ರೂಪಿಸಲಾಗುವುದೆಂದು ಸಂಘಟನೆಯ ಮೂಲಗಳು ತಿಳಿಸಿವೆ.
ಪಿಯುಸಿಎಲ್‌ನ ರಾಷ್ಟ್ರೀಯ ಅಧ್ಯಕ್ಷ ಎ.ಜಿ. ಕನ್ನಬ್ರಾನ್ ತಮಿಳುನಾಡಿನ ಕೆಲವು ಸ್ಥಳೀಯ ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಹಾಗೂ ವೀರಪ್ಪನ್ ಪರ ಮೃದು ಧೋರಣೆ ಹೊಂದಿರುವ ಎಲ್ಲ ವ್ಯಕ್ತಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ವಿಷಯಗಳು ಕುತೂಹಲ ಕೆರಳಿಸಿವೆ.
ನೆಡುಮಾರನ್‌ರಿಂದ ಟಾಡಾ ಕೈದಿಗಳ ಭೇಟಿ : ಕೊಳತ್ತೂರಿನ ಸಭೆಗೆ ಹೋಗುವ ಮುಂಚೆ 25ರಂದು ಮೈಸೂರಿಗೆ ಭೇಟಿ ನೀಡುವ ನೆಡುಮಾರನ್, ಕಾರಾಗೃಹದಲ್ಲಿರುವ ಕೈದಿಗಳನ್ನು ಭೇಟಿ ಮಾಡಿ, ಅವರ ಕಷ್ಟ ಸುಖ ವಿಚಾರಿಸಲಿದ್ದಾರೆ ಎಂದು ತಿಳಿದುಬಂದಿದೆ.
26ರಂದು ಕೃಷ್ಣ - ಪ್ರಧಾನಿ ಭೇಟಿ : (ಬೆಂಗಳೂರು ವರದಿ) ಈ ಮಧ್ಯೆ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ಕೇಂದ್ರದ ನೆರವು ಕೋರುವ ಸಂಬಂಧ 26ರಂದು ಮುಖ್ಯಮಂತ್ರಿ ಕೃಷ್ಣ ಮತ್ತು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ವಾಜಪೇಯಿ ಮತ್ತು ಕೇಂದ್ರ ಗೃಹಮಂತ್ರಿ ಅಡ್ವಾಣಿ ಅವರನ್ನು ಭೇಟಿ ಮಾಡಲಿದ್ದಾರೆ.
ಈ ವಿಷಯ ತಿಳಿಸಿರುವ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು, ರಾಜ್ಯದ ಮುಖ್ಯ ಕಾರ್ಯದರ್ಶಿ ಭಟ್ಟಾಚಾರ್ಯ, ಗೃಹ ಆಯುಕ್ತ ಪ್ರಕಾಶ್ ಹಾಗೂ ಪೊಲೀಸ್ ಮಹಾ ನಿರ್ದೇಶಕ ದಿನಕರ್ ಶುಕ್ರವಾರ ದೆಹಲಿಗೆ ತೆರಳಲಿದ್ದು, ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ವೀರಪ್ಪನ್ ಶರಣಾಗಲು ಬಯಸಿದರೆ, ಚಂಬಲ್ ಕಣಿವೆ ಮತ್ತು ಕಾಶ್ಮೀರ ಉಗ್ರಗಾಮಿಗಳ ಶರಣಾಗತಿ ಹಿನ್ನೆಲೆಗಳಲ್ಲಿ ಗಮನಿಸಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರದ ನೆರವಿಗೆ ಅಡ್ವಾಣಿ ಭರವಸೆ : ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ಕೇಂದ್ರವು ಸೇನೆ ಅಥವಾ ಆಧುನಿಕ ಶಸ್ತ್ರಾಸ್ತ್ರಗಳ ನೆರವು ನೀಡುವ ಬಗ್ಗೆ ಕೇಂದ್ರ ಗೃಹ ಸಚಿವ ಅಡ್ವಾಣಿ ಅವರು ತಮಿಳುನಾಡು ಸರಕಾರದ ಉನ್ನತ ಅಧಿಕಾರಿಗಳ ತಂಡಕ್ಕೆ ಗುರುವಾರ ಭರವಸೆ ನೀಡಿದ್ದಾರೆ ಎಂದು ಚೆನ್ನೈ ವರದಿಗಳು ಹೇಳಿವೆ.
ಗೃಹಸಚಿವರನ್ನು ಭೇಟಿ ಮಾಡಿದ ನಂತರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರನ್ನೂ ಭೇಟಿ ಮಾಡಿದ ಈ ತಂಡದಲ್ಲಿ ತಮಿಳುನಾಡು ಮುಖ್ಯ ಕಾರ್ಯದರ್ಶಿ ಎ.ಪಿ. ಮುತ್ತುಸ್ವಾಮಿ, ಗೃಹಕಾರ್ಯದರ್ಶಿ ಶಾಂತಶೀಲ ನಾಯರ್, ಪೊಲೀಸ್ ಮಹಾನಿರ್ದೇಶಕ ರಾಜಗೋಪಾಲನ್ ಇದ್ದರು.
ಬಂದ್‌ಗೆ ಬೆಂಬಲವಿರಲಿಲ್ಲ : ರಾಜ್ ಅಪಹರಣ ಸಂದರ್ಭದಲ್ಲಿ ನೀಡಿದ್ದ ಬಂದ್ ಕರೆಗೆ ಮುಖ್ಯಮಂತ್ರಿ ಕೃಷ್ಣ ಅವರು ಬೆಂಬಲ ಸೂಚಿಸಿದ್ದರು ಎಂದು ರಾಜ್ ಅವರ ಹಿರಿಯ ಪುತ್ರ ಶಿವರಾಜ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆಯಾಂದು ಮಾಡಿದ್ದ ವರದಿಯನ್ನು ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ ವಿಧಾನಪರಿಷತ್ತಿನಲ್ಲಿ ತಳ್ಳಿಹಾಕಿದ್ದಾರೆ.
ಮುಖಪುಟ / ವೀರಪ್ಪನ್ ಶಿಕಾರಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications