ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ 7 ವಿಕೆಟ್‌ಗಳ ಅರ್ಹ ಜಯ

By Staff
|
Google Oneindia Kannada News

ನವದೆಹಲಿ : ದೆಹಲಿಯಲ್ಲಿ ಬುಧವಾರ ಮುಕ್ತಾಯವಾದ ಜಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯಗಳಿಸಿದೆ. ಗೆಲ್ಲಲು 190 ರನ್‌ ಗಳಿಸಬೇಕಾಗಿದ್ದ ಭಾರತ ತಂಡ, ಉದ್ದೇಶಿತ ಗುರಿಯನ್ನು 38 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು ಸಾಧಿಸಿತು.

ಮೊದಲ ಇನಿಂಗ್ಸ್‌ನಲ್ಲಿ ಅಜೇಯ ದ್ವಿ ಶತಕ ಗಳಿಸಿದ್ದ ರಾಹುಲ್‌ ದ್ರಾವಿಡ್‌ ಅವರು ಎರಡನೇ ಇನಿಂಗ್ಸ್‌ನಲ್ಲೂ ಮನಮೋಹಕ ಅಜೇಯ 70(91 ಚೆಂಡು, 8 ಬೌಂಡರಿ) ರನ್‌ಗಳನ್ನು ಗಳಿಸಿ ತಂಡದ ಗೆಲುವಿನ ರೂವಾರಿ ಎನಿಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ದ್ವಿಶತಕದ ಸಾಧನೆಗೈದ ಅವರಿಗೆ 25 ಸಾವಿರ ರುಪಾಯಿಗಳ ವಿಶೇಷ ಬಹುಮಾನ ನೀಡಲಾಯಿತು. ಉತ್ತಮ ಆಟ ಪ್ರದರ್ಶಿಸಿದ ನಾಯಕ ಗಂಗೂಲಿ 65 (90 ಚೆಂಡು, 5 ಬೌಂಡರಿ, 3 ಸಿಕ್ಸರ್‌) ರನ್‌ ಗಳಿಸಿ ಔಟಾಗದೆ ಉಳಿದರು.

ಪಂದ್ಯದ ಪುರುಷೋತ್ತಮ ಪ್ರಶಸ್ತಿ ವೇಗಿ ಜಾವಗಲ್‌ ಶ್ರೀನಾಥ್‌ ಅವರ ಪಾಲಾಯಿತು. ಎರಡನೆ ಇನಿಂಗ್ಸ್‌ನಲ್ಲಿ ತಮ್ಮ ಅಮೋಘ ಬೌಲಿಂಗ್‌ ಮೂಲಕ ಜಿಂಬಾಬ್ವೆ ಬ್ಯಾಟಿಂಗ್‌ ಬೆನ್ನೆಲುಬು ಮುರಿದು 5 ವಿಕೆಟ್‌ ಗಳಿಸಿದ ಶ್ರೀನಾಥ್‌ ಹೋರಾಟಕ್ಕೆ ವೇದಿಕೆ ಅಣಿ ಪಡಿಸಿದ್ದರು.

ಸ್ಕೋರ್‌ ವಿವರ : ಜಿಂಬಾಬ್ವೆ- ಮೊದಲ ಇನಿಂಗ್ಸ್‌ 9 ವಿಕೆಟ್‌ಗೆ 422 (ಡಿಕ್ಲೇರ್‌), ಎರಡನೇ ಇನಿಂಗ್ಸ್‌ 225.

ಭಾರತ- ಮೊದಲ ಇನಿಂಗ್ಸ್‌ 4 ವಿಕೆಟ್‌ಗೆ 458(ಡಿಕ್ಲೇರ್‌), ಎರಡನೇ ಇನಿಂಗ್ಸ್‌ 3 ವಿಕೆಟ್‌ಗೆ 190.

ಕಾನ್ಪುರ್‌ ಟೆಸ್ಟ್‌ಗೆ ತಂಡ ಪ್ರಕಟ : ಯುವರಾಜ್‌ ಬದಲಿಗೆ ಕೈಫ್‌

ಉತ್ತರ ಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮೊಹಮದ್‌ ಕೈಫ್‌ ನ.25 ರಿಂದ ಕಾನ್ಪುರದಲ್ಲಿ ಪ್ರಾರಂಭವಾಗುವ ಜಿಂಬಾಬ್ವೆ ವಿರುದ್ಧದ ಎರಡನೆ ಟೆಸ್ಟ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಚಂದು ಬೋರ್ಡೆ ಅವರ ಅಧ್ಯಕ್ಷತೆಯಲ್ಲಿ ಬುಧವಾರ ದೆಹಲಿಯಲ್ಲಿ ಸಭೆ ಸೇರಿದ ರಾಷ್ಟ್ರೀಯ ಆಯ್ಕೆದಾರರು ಮೊದಲ ಟೆಸ್ಟ್‌ನಲ್ಲಿ ಆಡಿದ ತಂಡದಲ್ಲಿ ತಂದದ್ದು ಏಕಮಾತ್ರ ಪರಿವರ್ತನೆಯನ್ನು. ಕೈಫ್‌ ಅವರನ್ನು ಆಯ್ಕೆ ಮಾಡಿದ ಆಯ್ಕೆದಾರರ ತಂಡ, ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರನ್ನು ತಂಡದಿಂದ ಕೈ ಬಿಟ್ಟಿತು. ಸಾಕಷ್ಟು ಚರ್ಚೆಯ ನಂತರ ತಂಡವನ್ನು ಆಯಲಾಗಿದೆ ಎಂದು ಬೋರ್ಡೆ ಸುದ್ದಿಗಾರರಿಗೆ ತಿಳಿಸಿದರು.

ತಂಡ ಇಂತಿದೆ : ಸೌರವ್‌ ಗಂಗೂಲಿ (ನಾಯಕ), ಶಿವ್‌ ಸುಂದರ್‌ ದಾಸ್‌, ಶಡಗೋಪನ್‌ ರಮೇಶ್‌, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ವಿಜಯ್‌ ದಾಹಿಯ (ವಿಕೆಟ್‌ ಕೀಪರ್‌), ಸುನಿಲ್‌ ಜೋಶಿ, ಜಾವಗಲ್‌ ಶ್ರೀನಾಥ್‌, ಮುರಳಿ ಕಾರ್ತೀಕ್‌, ಅಜಿತ್‌ ಅಗರ್ಕರ್‌, ವಿವಿಎಸ್‌ ಲಕ್ಷ್ಮಣ್‌ ಮತ್ತು ಮೊಹಮದ್‌ ಕೈಫ್‌.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X