ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಯಾಚರಣೆ ಸಿದ್ಧತೆ ದುರಾದೃಷ್ಟಕರ : ನೆಡುಮಾರನ್‌

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ವೀರಪ್ಪನ್‌ ಮತ್ತು ಆತನ ಸಹಚರರನ್ನು ಬಂಧಿಸಲು ಕೈಗೊಂಡಿರುವ ಕ್ರಮಗಳು ದುರಾದೃಷ್ಟಕರ ಎಂದು ಹೇಳಿರುವ ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ಪಿ. ನೆಡುಮಾರನ್‌, ಕಾರ್ಯಾಚರಣೆ ಪಡೆಗಳನ್ನು ಕಾಡಿಗೆ ಕಳಿಸುವುದನ್ನು ಪುನಾಪರಿಶೀಲಿಸಬೇಕೆಂದು ಎರಡೂ ಸರಕಾರಗಳಿಗೆ ಮನವಿ ಮಾಡಿದ್ದಾರೆ.

ಖಾಸಗಿ ಚಾನೆಲ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಈ ್ಫಅಭಿಪ್ರಾಯ ವ್ಯಕ್ತಪಡಿಸಿರುವ ನೆಡುಮಾರನ್‌, ಆಯಾ ರಾಜ್ಯಗಳ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಸರಕಾರಗಳು ಈ ನಿರ್ಧಾಧಿರಕ್ಕೆ ಬಂದಿವೆ ಎಂದು ಹೇಳಿದ್ದಾರೆ.

ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವ ನೆಡುಮಾರನ್‌, ಊರಿನಲ್ಲಿರುವ ವೀರಪ್ಪನ್‌ಗಳನ್ನು ವಿಚಾರಿಸಿಕೊಳ್ಳವಂತೆ ಈ ಹಿಂದೆ ಹೇಳಿಕೆ ನೀಡಿದ್ದರು.

17 ಗುಂಪು : ವೀರಪ್ಪನ್‌ ಬಂಧನಕ್ಕೆ ನಿಯೋಜಿತವಾಗಿರುವ ಕಾರ್ಯಾಚರಣೆ ಪಡೆಯಲ್ಲಿ ಸುಮಾರು 300 ಸಿಬ್ಬಂದಿ ಇದ್ದು ಅವರನ್ನು 17 ಗುಂಪುಗಳಾಗಿ ವಿಂಗಡಿಸಲಾಗಿದೆ. ಈಗ ಕಾರ್ಯಪಡೆಯಲ್ಲಿ ಅಗತ್ಯ ಸಿಬ್ಬಂದಿ ಇದ್ದು , ಇನ್ನೂ ಹೆಚ್ಚಿನ ಸಿಬ್ಬಂದಿ ಬೇಕಾದರೆ ಕಾರ್ಯಪಡೆಯ ಮುಖ್ಯಸ್ಥರು ಬೇಡಿಕೆ ಸಲ್ಲಿಸಿ ಪಡೆಯಬಹುದಾಗಿದೆ. ಈಗ ವಿಭಾಗಿಸಲಾಗಿರುವ 17 ಗುಂಪುಗಳ ಪೈಕಿ ಐದು ಗುಂಪುಗಳು ವಿಶ್ರಾಂತಿಯಲ್ಲಿರುತ್ತವೆ. ಉಳಿದ 12 ಗುಂಪುಗಳು ಸದಾ ಕಾರ್ಯಾಚರಣೆಯಲ್ಲಿ ತೊಡಗಿರುತ್ತವೆ. ಕಾರ್ಯಾಚರಣೆ ಸಂಬಂಧ ರಾಜ್ಯದ ವಿಶೇಷ ಪಡೆ ತಮಿಳುನಾಡಿನ ವಿಶೇಷ ಪಡೆಯಾಂದಿಗೆ ಸತತ ಸಂಪರ್ಕ ಇಟ್ಟುಕೊಂಡಿದ್ದು, ಕಾರ್ಯಾಚರಣೆ ಜಂಚಿಯಾಗಿ ಮುಂದುವರಿಯಲಿದೆ. 1997ರಿಂದ ಹರ್ಷವರ್ಧನರಾಜು ಅವರು ಕಾಯಾಚರಣೆ ಪಡೆಯ ಮುಖ್ಯಸ್ಥರಾಗಿದ್ದರು. ಈಗ ಹರ್ಷವರ್ಧನರಾಜು ಪಡೆಯಲ್ಲೇ ಇದ್ದು, ಕೆಂಪಯ್ಯ ಮತ್ತು ಶಂಕರ ಬಿದರಿ ಸೇರ್ಪಡೆಯಾಗಿದ್ದಾರೆ. ಸಂಪೂರ್ಣ ಉಸ್ತುವಾರಿಯನ್ನು ಎಚ್‌. ಟಿ. ಸಾಂಗ್ಲಿಯಾನ ಅವರಿಗೆ ವಹಿಸಲಾಗಿದೆ.

ಮಲೆಮಹದೇಶ್ವರ ಬೆಟ್ಟಕ್ಕೆ ಸಾಂಗ್ಲಿಯಾನ : ರಾಜ್ಯ ಕಾರ್ಯಾಚರಣೆ ಪಡೆಯ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಸಾಂಗ್ಲಿಯಾನ ಮಂಗಳವಾರ ರಾತ್ರಿ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ತಂಡದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಬುಧವಾರ ತಮಿಳುನಾಡು ಪಡೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಲಿದ್ದು, ಕೆಲವು ಪ್ರದೇಶಗಳಿಗೆ ಭೇಟಿ ನೀಡುವರೆಂದು ಉನ್ನತ ಮೂಲಗಳು ತಿಳಿಸಿವೆ. ಕಾರ್ಯಾಚರಣೆ ಪಡೆಗಳು ರಾಮಾಪುರ ಬನ್ನಾರಿ, ದಿಂಬಂ ಮುಂತಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ಪ್ರಾರಂಭಿಸಿವೆ. ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎರಡೂ ರಾಜ್ಯಗಳ ಪಡೆಗಳ ನಡುವೆ ಸೌಹಾರ್ಧಯುತ ವಾತಾವರಣ ನಿರ್ಮಿಸಲು ಸಾಂಗ್ಲಿಯಾನ ಆಸಕ್ತರಾಗಿದ್ದಾರೆ ಎಂದು ಹೇಳಲಾಗಿದೆ.

ಕೇಂದ್ರದ ನೆರವಿಗೆ ಅಗತ್ಯ ಕ್ರಮ : ವೀರಪ್ಪನ್‌ ಹಾಗೂ ಆತನ ಸಹಚರರನ್ನು ಬಂಧಿಸಲು ಕೇಂದ್ರದ ನೆರವು ಬಳಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಮಂಗಳವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ. ವೀರಪ್ಪನ್‌ ಬಂಧನಕ್ಕೆ ಎರಡೂ ಸರಕಾರಗಳು ನಡೆಯುವ ಯತ್ನಗಳಿಗೆ ಕೇಂದ್ರ ನೇತೃತ್ವ ವಹಿಸಬೇಕೆಂಬುದು ರಾಜ್ಯ ಸರಕಾರದ ಬಯಕೆಯಾಗಿದೆ. ಈ ಸಂಬಂಧ ಆಗತ್ಯ ನೆರವು ನೀಡುವುದಾಗಿ ಕೇಂದ್ರ ಭರವಸೆ ನೀಡಿದೆ ಎಂದು ಕೃಷ್ಣ ತಿಳಿಸಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X