Get Updates
Get notified of breaking news, exclusive insights, and must-see stories!

ಕ್ಯಾನ್ಸರ್‌ ರೋಗಿಗಳಿಗೆ ವಿಮಾನದರ ರಿಯಾಯಿತಿ ಪರಿಶೀಲನೆ-ಶರದ್‌ಯಾದವ್‌

ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ವಿಮಾನ ದರದಲ್ಲಿ ರಿಯಾಯಿತಿ ನೀಡುವ ಕುರಿತು ಖಾಸಗಿ ವಿಮಾನ ಕಂಪೆನಿಗಳೊಂದಿಗೆ ಮಾತು ಕತೆ ನಡೆಸುವುದಾಗಿ ನಾಗರಿಕ ವಿಮಾನಯಾನ ಸಚಿವ ಶರದ್‌ ಯಾದವ್‌ ಮಂಗಳವಾರ ಹೇಳಿದ್ದಾರೆ.

ಪ್ರಶ್ನೋತ್ತರ ಸಮಯದಲ್ಲಿ ರಾಜ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು ಕ್ಯಾನ್ಸರ್‌ ರೋಗಿಗಳಿಗೆ ಇಂಡಿಯನ್‌ ಏರ್‌ಲೈನ್ಸ್‌ ಪ್ರಯಾಣ ದರದಲ್ಲಿ ಈಗಾಗಲೇ ರಿಯಾಯಿತಿ ನೀಡಿದೆ. ಈ ಪದ್ಧತಿಯನ್ನು ಖಾಸಗಿ ವಿಮಾನಗಳೂ ಅಳವಡಿಸಿಕೊಳ್ಳವಂತೆ ಮಾಡಲಾಗುವುದು. ಆದರೆ ಅವರ ಮೇಲೆ ಒತ್ತಡ ಹೇರಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ದೇಶದ ಹಿರಿಯ ನಾಗರಿಕರಿಗೆ ವಿಮಾನಯಾನ ದರದಲ್ಲಿ ರಿಯಾಯಿತಿ ಒದಗಿಸುವ ಕುರಿತು ಮಾತನಾಡಿದ ಅವರು, ಈ ವಿಷಯದ ಬಗ್ಗೆ ಇನ್ನೂ ಪ್ರಯಾಣದರ ಸಮನ್ವಯ ಸಮಿತಿಯಲ್ಲಿ ಚರ್ಚಿಸಿಲ್ಲ. ಹಿರಿಯ ನಾಗರಿಕರಿಗೆ ರಿಯಾಯಿತಿ ಒದಗಿಸುವುದರಿಂದ ವಿಮಾನಯಾನ ಸಂಸ್ಥೆಗೆ ಹೆಚ್ಚಿನ ಹೊರೆ ಬೀಳುವುದಿಲ್ಲ . ಆದ್ದರಿಂದ ಸದ್ಯದಲ್ಲಿಯೇ ಈ ಪ್ರಸ್ತಾವವನ್ನು ಪರಿಶೀಲಿಸಲಾಗುವುದು ಎಂದು ಶರದ್‌ ಯಾದವ್‌ ಹೇಳಿದರು.

( ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+