ಧರ್ಮಸ್ಥಳದಲ್ಲಿ ನ.23 ರಿಂದ ನಾಲ್ಕು ದಿನಗಳ ಲಕ್ಷ ದೀಪೋತ್ಸವ
ಧರ್ಮಸ್ಥಳ : ಲಕ್ಷ ದೀಪೋತ್ಸವದ ಪ್ರಯುಕ್ತ ನವಂಬರ್ 23 ರಿಂದ ನಾಲ್ಕು ದಿನಗಳ ಕಾಲ ಶ್ರೀ ಕ್ಷೇತ್ರ ಧರ್ಮ ಸ್ಥಳದಲ್ಲಿ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ನವೆಂಬರ್ 23ರ ಗುರುವಾರದಂದು ಸಂಜೆ 5ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸಮ್ಯಕ್ ಜ್ಞಾನ ಸಭಾ ಭವನವನ್ನು ಉದ್ಘಾಟಿಸಲಾಗುವುದು. ಖ್ಯಾತ ನಿರ್ಮಾಪಕರು ಹಾಗೂ ನಿರ್ದೇಶಕರಾಗಿರುವ ಮುಂಬಯಿಯ ಪದ್ಮಶ್ರೀ ಡಾ. ರಮಾನಂದ ಸಾಗರ್ ಸಭಾ ಭವನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿರುತ್ತಾರೆ. ಕಾರ್ಯಕ್ರಮದ ಕೊನೆಗೆ ಲಲಿತ ಕಲಾ ಗೋಷ್ಠಿ, ಯಕ್ಷಗಾನ ಮತ್ತು ವಿವಿಧ ವಾದ್ಯ ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಸರ್ವ ಧರ್ಮ ಸಮ್ಮೇಳನ : ಶುಕ್ರವಾರ ಸಂಜೆ, 4.30ಕ್ಕೆ ಸರ್ವಧರ್ಮ ಸಮ್ಮೇಳನ ಮತ್ತು ಮಂಜೂಷಾ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಪುಸ್ತಕ ಬಿಡಗಡೆ ಮಾಡಲಿದ್ದು, ಬೆಂಗಳೂರಿನ ಅಷ್ಟಾಂಗ ವಿಜ್ಞಾನ ಮಂದಿರದ ಪರಮಹಂಸ ಶ್ರೀ ರಂಗಪ್ರಿಯ ಶ್ರೀ ಪಾದ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಮತ್ತು ಜೈನ ಧರ್ಮದ ಕುರಿತು ಪ್ರವಚನಗಳು ನಡೆಲಿವೆ. ಜಾಗತಿಕ ಸಂದರ್ಭದಲ್ಲಿ ಧರ್ಮದ ಪರಿಕಲ್ಪನೆ ಯ ಬಗ್ಗೆ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ, ವಿವಿಧ ಮತ ಧರ್ಮ ಸಮನ್ವಯ ಕುರಿತು ಮಹಾಲಿಂಗಪುರದ ಇಬ್ರಾಹಿಂ ಎನ್. ಸುತ್ತಾರ, ಮತ್ತು ನವಜನಾಂಗ ಎಂಬ ವಿಷಯದ ಬಗ್ಗೆ, ಜೈನ ಧರ್ಮದ ಧರಣೇಂದ್ರ ಕುರಕುರಿ ಮಾತನಾಡಲಿದ್ದಾರೆ. ಅಂದು ರಾತ್ರಿ ಚೆನ್ನೈನ ಪಿ. ಉನ್ನಿ ಕೃಷ್ಣನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿರುತ್ತದೆ.
ಸಾಹಿತ್ಯ ಸಮ್ಮೇಳನ : ಶನಿವಾರ ಸಂಜೆ, ನಾಟಕಕಾರ ಡಾ. ಎಚ್.ಕೆ. ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಡಾ. ಮಂಗಳಾ ಪ್ರಿಯದರ್ಶಿನಿ ಡಿವಿಜಿ ಸಾಹಿತ್ಯದ ಬಗ್ಗೆ, ರಾಘವೇಂದ್ರ ಪಾಟೀಲರು ಬೆಟಗೇರಿ ಸಾಹಿತ್ಯದ ಕುರಿತು ಮತ್ತು ದಕ್ಷಿಣ ಕನ್ನಡದ ಕವಿ ತ್ರಯರ ಬಗ್ಗೆ ಡಾ. ಬಿ.ಎ. ವಿವೇಕ ರೈಗಳು ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ನಂತರ ರತ್ನ ಮಾಲ ಪ್ರಕಾಶ್, ರಾಜು ಅನಂತ ಸ್ವಾಮಿ, ಮಾಲತಿ ಶರ್ಮಾ ರಿಂದ ಗಾಯನ, ಡಾ. ರತ್ನಾ ಶಿವ ಶಂಕರ ಬಳಗದವರಿಂದ ಕಾವ್ಯಗಾಯನ ಮತ್ತು ಪದ್ಮಜಾ ಸುರೇಶ್ ಅವರಿಂದ ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಭಾನುವಾರದಂದು ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ, ಪೂಜಾ ಮಂತ್ರ ಪಠಣ, ಧಾರ್ಮಿಕ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ರಾತ್ರಿ 11ಕ್ಕೆ ಪಾಂಡವಾಶ್ವಮೇಧ ಯಕ್ಷಗಾನ ಕಾರ್ಯಕ್ರಮವಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications