Get Updates
Get notified of breaking news, exclusive insights, and must-see stories!

ನ.25ರಿಂದ ಮೂರು ದಿನಗಳ ತಾಂತ್ರಿಕ ವಿ.ವಿ.ಯುವಜನ ಮೇಳ

ಬೆಂಗಳೂರು : ಬೆಂಗಳೂರಿನ ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇದೇ 25ರಿಂದ 3 ದಿನಗಳ ಕಾಲ ಯುವಜನ ಮೇಳ ನಡೆಯಲಿದೆ. ಈ ಮೇಳವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. 2ನೇ ಬಾರಿಗೆ ನಡೆಸುತ್ತಿದೆ.

ಯುವಜನ ಮೇಳದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಾಗುವ ವಿದ್ಯಾರ್ಥಿಗಳು ತಾಂತ್ರಿಕ ವಿ.ವಿ. ಪ್ರತಿನಿಧಿಗಳಾಗಿ ಮುಂದಿನ ವರ್ಷ ಜನವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸಾಂಸ್ಕೃತಿಕ ಮೇಳದಲ್ಲಿ ಪಾಲ್ಗೊಳ್ಳುವರು. ಬೆಂಗಳೂರಿನಲ್ಲಿ ಮೂರು ದಿನ ಜರುಗುವ ಈ ಮೇಳದಲ್ಲಿ ರಾಜ್ಯಾದ್ಯಂತ ಇರುವ 90 ಕಾಲೇಜುಗಳ ಸುಮಾರು ಎರಡು ಸಾವಿರ ಸ್ಪರ್ಧಿಗಳು ಭಾಗವಹಿಸುವರು. ಈ ವಿಷಯವನ್ನು ಸಂಘಟನಾ ಸಮಿತಿಯ ಅಧ್ಯಕ್ಷ ಪ್ರೊ. ಪುಟ್ಟರಾಜು ಅವರು ತಿಳಿಸಿದ್ದಾರೆ.

ಈ ಯುವಜನ ಮೇಳವನ್ನು 25ರಂದು ಶನಿವಾರ ರಾಜ್ಯದ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಮಲ್ಲಿಕಾರ್ಜುನ ಅವರು ಉದ್ಘಾಟಿಸಲಿದ್ದಾರೆ. ದಯಾನಂದ ಸಾಗರ್‌ ಕಾಲೇಜಿನ ಅಧ್ಯಕ್ಷ ಡಾ. ಹೇಮಚಂದ್ರ ಸಾಗರ್‌ ಅತಿಥಿಗಳಾಗಿ ಆಗಮಿಸುತ್ತಿದ್ದು, ತಾಂತ್ರಿಕ ವಿ.ವಿ. ಕುಲಪತಿ ಡಾ. ರಾಜಶೇಖರಯ್ಯ ಮೇಳದ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ವಿಜ್‌, ಜನಪದ ನೃತ್ಯ, ಪಾಶ್ಚಾತ್ಯ ಹಾಗೂ ಭಾರತೀಯ ಸಂಗೀತವೇ ಮೊದಲಾದ ಸ್ಪರ್ಧೆಗಳು ನಡೆಯಲಿವೆ ಎಂದೂ ಅವರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+