ಸಾರಾಯಿ ಕುಡಿಯೋದು ನಮ್ಮ ಹಕ್ಕು- ಹಮ್ಮಿಗೆ ಗ್ರಾಮಸ್ಥರ ಹಮ್ಮಿನ ನುಡಿ...
ಬೆಂಗಳೂರು : ಮೊನ್ನೆ ಮೊನ್ನೆಯಷ್ಟೇ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಸಸ್ತಾಪುರ ಗ್ರಾಮದ ಮಹಿಳೆಯರು ಕುಡಿದು ಮನೆಗೆ ಬರುವ ತಮ್ಮ ಪತಿ ದೇವರ ವಿರುದ್ಧ ಹೋರಾಟ ಮಾಡಲಾರದೇ, ಸಾರಾಯಿ ವಿರುದ್ಧವೇ ಸಮರ ಸಾರಿ, ಸಾರಾಯಿ ವ್ಯಾನ್ ಜಖಂಗೊಳಿಸಿ, ಸಾರಾಯಿ ಪ್ಯಾಕೆಟ್‌ಗಳಿಗೆ ಬೆಂಕಿ ಹಚ್ಚಿದ್ದು ನಿಮಗೂ ಗೊತ್ತಲ್ಲ.
ಇಂತಹ ಹೋರಾಟಗಳು ಸದ್ದಿಲ್ಲದೆ ರಾಜ್ಯದ ಕೆಲವೆಡೆ ನಡೆಯುತ್ತಿದೆ. ಮಾನಿನಿಯರ ಈ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಕುಡುಕ ಪತಿಯರ ಪತ್ನಿಯರ ಒತ್ತಡಕ್ಕೆ ಮಣಿದು ಕೆಲವೆಡೆ ಸಾರಾಯಿ ಅಂಗಡಿಗಳಿಗೆ ಬಾಗಿಲೂ ಹಾಕಿಸಲಾಗಿದೆ. ಈಗ ಸಾರಾಯಿ ಕುಡಿಯುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸುತ್ತಿರುವ ಕುಡುಕರು ಹೋರಾಟ ನಡೆಸುತ್ತಿದ್ದಾರೆ.
ಈ ಗ್ರಾಮದ ಮಹಿಳೆಯರ ಹೋರಾಟದ ಫಲವಾಗಿ ಕೆಲವು ದಿನದಿಂದ ಗ್ರಾಮದಲ್ಲಿ ಸಾರಾಯಿ ಮಾರಾಟ ನಿಂತು ಹೋಗಿದೆ. ಮಹಿಳೆಯರು ಗ್ರಾಮದೊಳಕ್ಕೆ ಸಾರಾಯಿ ವಾಹನ ಬರದಂತೆ ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಬಕಾರಿ ಗುತ್ತಿಗೆ ದಾರರು, ಊರ ಹೊರಗೆ ಪುಕ್ಕಟೆ ಸಾರಾಯಿ ಹಂಚಿ ಕುಡುಕರಿಗೆ ಪ್ರೊತ್ಸಾಹ ನೀಡಿದ್ದಾರೆ. ಅತಿಯಾಗಿ ಕುಡಿದ ಕೆಲವರು ತಮ್ಮ ಪತ್ನಿಯರನ್ನು ಥಳಿಸಿದ್ದಾರೆ. ಒಬ್ಬ ಕುಡುಕ ಪತಿಯಂತೂ ತನ್ನ ಪತ್ನಿಯ ಮೂಳೆಗಳನ್ನೆಲ್ಲಾ ಮುರಿದಿದ್ದಾನೆ. ಈ ಎಲ್ಲ ವಿಷಯಗಳೂ ವಿಧಾನಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳು.
ಈಗ ಹಮ್ಮಿಗೆ ಗ್ರಾಮದ ಸಾರಾಯಿ ವಂಚಿತ ಗ್ರಾಮಸ್ಥರು, ತಮ್ಮ ಶ್ರಮದ ಬದುಕಿನ ದಣಿವಾರಿಸುತ್ತಿದ್ದ ಸಾರಾಯಿ, ಮತ್ತೆ ತಮಗೆ ಬೇಕೇ ಬೇಕು. ಸಾರಾಯಿ ಕುಡಿಯುವುದು ನಮ್ಮ ಆಜನ್ಮ ಸಿದ್ಧ ಹಕ್ಕು, ಇದನ್ನು ಕಸಿದುಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ, ಕೂಡಲೇ ಊರಲ್ಲಿ ಸರ್ಕಾರಿ ಸಾರಾಯಿ ಅಂಗಡಿ ತೆರೆಯಬೇಕು ಎಂದು ಮುಂಡರಗಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಪತ್ರದ ಪ್ರತಿಯನ್ನು ಪ್ರದರ್ಶಿಸಿದ ಎಸ್.ಎಸ್. ಪಾಟೀಲರು ವಿಧಾನ ಸಭೆಯಲ್ಲಿ ಸಾರಾಯಿ ಮತ್ತು - ಗಮ್ಮತ್ತಿನ ವಿಷಯ ಪ್ರಸ್ತಾಪಿಸಿದರು. ಕುಡುಕ ಗಂಡಂದಿರ ಆಕ್ರೋಶಕ್ಕೆ ಗುರಿಯಾಗಿರುವ ಹಮ್ಮಿಗೆ ಗ್ರಾಮದ ಮಹಿಳೆರಿಗೆ ರಕ್ಷಣೆ ನೀಡುವಂತೆ ಅವರು ಒತ್ತಾಯಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಅಂತೂ ಗುಂಡಿನ ಮತ್ತಿನ - ಗಮ್ಮತ್ತಿನ ವಿಷಯ ಚರ್ಚೆಯೇನೋ ಆಗಿದೆ. ಸಾರಾಯಿ ಬೇಕು - ಬೇಡ ಎಂಬ ಹೋರಾಟ ಪತಿ - ಪತ್ನಿಯರಿಂದ ಬಂದಿದೆ. ಕೊನೆಗೆ ಜಯ ಯಾರಿಗೆ ದೊರಕುತ್ತದೋ ಕಾದು ನೋಡೋಣ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications