Get Updates
Get notified of breaking news, exclusive insights, and must-see stories!

ಎಚ್‌.ಟಿ.ಸಾಂಗ್ಲಿಯಾನ ನೇತೃತ್ವದಲ್ಲಿ ವೀರಪ್ಪನ್‌ ಶಿಕಾರಿ

s.m. krishnaಬೆಂಗಳೂರು : ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆ ಪ್ರಾರಂಭವಾಗಿದ್ದು, ವಿಶೇಷ ಕಾರ್ಯಪಡೆಯ ನೇತೃತ್ವವನ್ನು ಅಪರ ಪೊಲೀಸ್‌ ಮಹಾ ನಿರ್ದೇಶಕ ಎಚ್‌.ಟಿ. ಸಾಂಗ್ಲಿಯಾನ ಅವರಿಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮಂಗಳವಾರ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.

ನೂರಾ ಒಂಬತ್ತು ದಿನಗಳ ರಾಜ್‌ ಅಪಹರಣ ಪ್ರಕರಣದ ನಂತರದ ಒತ್ತಡ, ಅಗತ್ಯತೆಗೆ ಸ್ಪಂದಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕರ್ನಾಟಕ ಹಾಗೂ ತಮಿಳು ನಾಡು ಸರ್ಕಾರಗಳ ಜಂಟಿ ವಿಶೇಷ ಕಾರ್ಯಾಚರಣೆ ಪಡೆಯ ನಾಯಕತ್ವವನ್ನು ಕೇಂದ್ರ ಸರ್ಕಾರ ವಹಿಸಲಿದೆ ಎಂಬ ಭರವಸೆ ನಮ್ಮದು ಎಂದು ಕೃಷ್ಣ ಹೇಳಿದರು.

ವೀರಪ್ಪನ್‌ ವಿರುದ್ಧದ ವಿಶೇಷ ಕಾರ್ಯಾಚರಣೆಯ ನೇತೃತ್ವವನ್ನು ಸಾಂಗ್ಲಿಯಾನ ಅವರಿಗೆ ವಹಿಸಬೇಕೆಂಬುದು ಕರ್ನಾಟಕದ ಜತೆಯ ಬಹು ದಿನಗಳ ಬೇಡಿಕೆಯಾಗಿತ್ತು. ಹಿಂದೆಂದೂ ಈ ಬೇಡಿಕೆಗೆ ಓ ಎನ್ನದ ಸರ್ಕಾರ ಈಗ ಒಪ್ಪಿರುವುದು ಕಾಡುಗಳ್ಳನ ಬಂಧನದ ಬಗೆಗಿನ ನಿರೀಕ್ಷೆಗಳನ್ನು ಜೀವಂತವಾಗಿಸಿದೆ.

ಇದೇ ವಿಷಯವನ್ನು ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದರು.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+