Get Updates
Get notified of breaking news, exclusive insights, and must-see stories!

ಸರ್ಕಾರಿ ವಾಹನಗಳಿಗೆ ಇನ್ನು ಮುಂದೆಕನ್ನಡ ಸಂಖ್ಯಾ ಫಲಕ ಕಡ್ಡಾಯ

ಬೆಂಗಳೂರು : ಇದು ಯಾವ ತಿಂಗಳು ಹೇಳಿ. ಹೇಳಿ ಕೇಳಿ ನವೆಂಬರ್‌ ಅಲ್ಲವೆ. ವರ್ಷವಿಡೀ ಮಲಗಿ ನಿದ್ರಿಸುವ ಕನ್ನಡಾಭಿಮಾನಿಗಳು ಹಾಗೂ ಕರ್ನಾಟಕ ಸರಕಾರ ಎಚ್ಚೆತ್ತು ಕನ್ನಡ ಪರ ಕೆಲಸ ಮಾಡುವ ತಿಂಗಳು. ಹೀಗಾಗೇ

ಕರ್ನಾಟಕ ಸರಕಾರವೂ ಈ ತಿಂಗಳಿನಲ್ಲಿ ಒಂದೆರಡು ಕನ್ನಡ ಕೆಲಸಗಳ ಮಾತೂ ಆಡುತ್ತಿದೆ. ಆದೇಶವನ್ನೂ ಹೊರಡಿಸುತ್ತಿದೆ.

ಈಗ ರಾಜ್ಯ ಸರಕಾರದ ಎಲ್ಲ ವಾಹನಗಳ ಸಂಖ್ಯಾ ಫಲಕದಲ್ಲಿ ಇಂಗ್ಲಿಷ್‌ ಜತೆಜತೆಗೇ ಕನ್ನಡ ಅಂಕಿಗಳನ್ನೂ ಕಡ್ಡಾಯವಾಗಿ ಬರೆಸಲೇ ಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಸಚಿವರುಗಳ ವಾಹನಗಳೂ ಹೊರತಲ್ಲ. ಸರಕಾರದ ಎಲ್ಲ ಇಲಾಖೆಗಳ ವಾಹನಗಳಿಗೂ ಇದು ಅನ್ವಯಿಸುತ್ತದೆ. ಹಾಲಿ ಇರುವ ವಾಹನ ನೋಂದಣಿ ಸಂಖ್ಯೆಯ ಜೊತೆ ಕನ್ನಡ ಅಕ್ಷರ ಹಾಗೂ ಅಂಕಿಗಳ ಫಲಕ ಅಳವಡಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ.

ಕನ್ನಡ ಅಂಕಿಗಳು ಕರ್ನಾಟಕದಲ್ಲಿ ಸಾರ್ವತ್ರಿಕವಾಗಿ ಬಳಕೆಯಾಗಲು ಇಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರಕಾರಕ್ಕೆ ಸಲಹೆ ನೀಡಿತ್ತು. ಆದೇಶವೇನೋ ಹೊರ ಬಿದ್ದಿದೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದನ್ನು ಕಾದು ನೋಡದೆ ವಿಧಿ ಇಲ್ಲ. ಜೈ ಕರ್ನಾಟಕ ಮಾತೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+