Get Updates
Get notified of breaking news, exclusive insights, and must-see stories!

ಹಿತವಾಗಿ ನಡುಗಿಸಿದ ಬೆಂಗಳೂರು ಚಳಿ

ಬೆಂಗಳೂರು : ಮತ್ತೆ ಮುಂದುವರಿದಿದೆ ರಾಜ್ಯದಲ್ಲಿ ಒಣಹವೆ. ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಡನಾಡಿನಲ್ಲಿ ಸಾಮಾನ್ಯವಾಗಿ ಒಣಹವೆಯೇ ಕಂಡುಬಂದಿದೆ. ರಾತ್ರಿಯ ವೇಳೆ ಗಾಳಿಯ ಮೊರೆತದ ಜತೆಗೆ ಚಳಿಯ ಅನುಭವವೂ ಆಗುತ್ತಿದೆ. ಪೆಟ್ಟಿಗೆ ಸೇರಿದ್ದ, ಉಣ್ಣೆಯ ಬಟ್ಟೆಗಳೆಲ್ಲಾ ಹೊರಗೆ ಬಂದಿವೆ.

ರಂಗು ರಂಗಿನ ಉಣ್ಣೆಯ ಶಾಲುಗಳು, ಸ್ವೆಟರ್‌ಗಳು ಬಟ್ಟೆಯಂಗಡಿಗಳ ಷೋಕೇಸ್‌ನಲ್ಲಿ ರಾರಾಜಿಸುತ್ತಿವೆ. ಮಾರಾಟವೂ ಭರದಿಂದ ನಡೆಯುತ್ತಿದೆ. ಸಂಜೆಯ ವೇಳೆ ಉಣ್ಣೆಯ ಟೋಪಿ ಧರಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬೆಳಗಿನ ಝಾವ ಹಿತವಾಗಿ ನಡುಗಿಸುವ ಚಳಿ ಬೆಂಗಳೂರಿನಲ್ಲಿದೆ.

ಕರಾವಳಿಯಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬಂದಿದ್ದರೆ, ಒಳನಾಡುಗಳಲ್ಲಿ ಹೆಚ್ಚಿನ ಬದಲಾವಣೆ ಏನಿಲ್ಲ. ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಕೆಲವೆಡೆ ಸಾಮಾನ್ಯಕ್ಕಿಂತಲೂ ಹೆಚ್ಚಾಗಿತ್ತು. ಉತ್ತರ ಒಳನಾಡಿನಲ್ಲಿ ಕಡಿಮೆ ಆಗಿತ್ತು. ಕನಿಷ್ಠ ತಾಪಮಾನ 12.3 ಡಿಗ್ರಿ ಸೆಲ್ಸಿಯಸ್‌ ಗುಲ್ಬರ್ಗಾದಲ್ಲಿ ದಾಖಲಾಗಿದೆ. ಬೇಸಿಗೆಯ ಕಾಲದಲ್ಲಿ 38-43 ಡಿಗ್ರಿಗಳಷ್ಟು ಏರುತ್ತಿದ್ದ ಬಿಸಿಲು ಇಲ್ಲಿ ಚಳಿಗಾಲದಲ್ಲಿ ದೊಪ್ಪೆಂದು ಕುಸಿದಿದೆ.

ಈ ಮಧ್ಯೆ ದಕ್ಷಿಣ ಒಳನಾಡಿನ ಕೆಲವುಕಡೆ ಗುಡುಗು ಸಹಿತ ಸುರಿಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ವೀಕ್ಷಣಾಲಯ ನೀಡಿದೆ. ಉಳಿದಂತೆ ಕರಾವಳಿ ಹಾಗೂ ಇನ್ನಿತರ ಕಡೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದಿದ್ದು, ಒಂದೆರಡು ಕಡೆ ಅದೂ ಒಂದೆರಡು ಬಾರಿ ಹಗುರದಿಂದ ಮಳೆ ಬೀಳುವ ನಿರೀಕ್ಷೆ ಇದೆ. ರಾತ್ರಿಯ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಂಭವ ಉಂಟು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+