Get Updates
Get notified of breaking news, exclusive insights, and must-see stories!

ಅಬ್ಬಲಗೆರೆಯಲ್ಲಿ 2.5 ಲಕ್ಷ ರು. ಅಡಿಕೆ ದರೋಡೆ

ಶಿವಮೊಗ್ಗ : ಲಾರಿ ರಿಪೇರಿಗೆ ಸ್ಕೂೃ ಡ್ರೆೃವರ್‌ ಕೇಳುವ ನೆಪದಲ್ಲಿ ದುಷ್ಕರ್ಮಿಗಳ ತಂಡವೊಂದು ತೋಟದ ಮನೆಯಾಂದಕ್ಕೆ ನುಗ್ಗಿ 2.50 ಲಕ್ಷ ರುಪಾಯಿ ಮೌಲ್ಯದ ಅಡಿಕೆಯನ್ನು ಕದ್ದೊಯ್ದ ಘಟನೆ ಅಬ್ಬಲಗೆರೆ ಗ್ರಾಮದಲ್ಲಿ ನಡೆದಿದೆ.

ತಂಡದಲ್ಲಿ ಸುಮಾರು 8-10 ಜನರಿದ್ದು ಹಿಂದಿ ಹಾಗೂ ಉರ್ದು ಮಾತನಾಡುತ್ತಿದ್ದರೆನ್ನಲಾಗಿದೆ. ಶನಿವಾರ ರಾತ್ರಿ ಸುಮಾರು 2 ಗಂಟೆಯ ವೇಳೆಯಲ್ಲಿ ಲಾರಿ ರಿಪೇರಿ ಮಾಡಲು ಸ್ಕೂೃ ಡ್ರೆೃವರ್‌ ಯಾಚಿಸಿ ತೋಟದ ಮನೆಗೆ ನುಗ್ಗಿದ ಖದೀಮರು ಕಾವಲುಗಾರರಾದ ರಾಜಶೇಖರಯ್ಯ, ರಾಜಯ್ಯ ಹಾಗೂ ಅಡಿಕೆ ಬೇಯಿಸುವ ಕೆಲಸಗಾರ ನಜೀರ್‌ ಸೇರಿದಂತೆ 6 ಮಂದಿಯ ಕೈಕಾಲುಗಳನ್ನು ಕಟ್ಟಿಹಾಕಿ, 34 ಚೀಲ ಅಡಿಕೆಯನ್ನು ಮಿನಿ ಲಾರಿಯಲ್ಲಿ ಸಾಗಿಸಿ ಪರಾರಿಯಾಗಿದ್ದಾರೆ.

ಈ ಕೃತ್ಯ ಎಸಗಿದ ತಂಡದ ಸದಸ್ಯರ ವಯಸ್ಸು 25-30 ಎನ್ನಲಾಗಿದೆ. ತೋಟದ ಮನೆ ಮುಖ್ಯರಸ್ತೆಯ ಸಮೀಪವೇ ಇದ್ದುದರಿಂದ ದರೋಡೆ ಕೋರರು ಕ್ಷಿಪ್ರವಾಗಿ ಪೇರಿ ಕೀಳಲು ಸಾಧ್ಯವಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+