ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನೇಕ ಹೊಸತುಗಳ ಹನುಮಂತನಗರದತಿಮ್ಮೇಶ್‌ ಪ್ರಭು ಉದ್ಯಾನ

By Staff
|
Google Oneindia Kannada News

ಬೆಂಗಳೂರು : ರಾಜಧಾನಿಯ ಹಸುರು ನಗರ ಎಂದೇ ಹೆಸರಾದ ಹನುಮಂತ ನಗರದ ಎಷ್ಟೋ ಇಳಿ ಜೀವಗಳಿಗೆ, ಹದಿಹರೆಯದವರಿಗೆ ಹಸುರಿನ ಮುದ ಕೊಟ್ಟಿರುವ ತಿಮ್ಮೇಶ್‌ ಪ್ರಭು ಉದ್ಯಾನವನ ಈಗ ಹೊಸ ರೂಪು ತಳೆದಿದ್ದು, ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸೋಮವಾರ ಇದನ್ನು ಉದ್ಘಾಟಿಸಲಿದ್ದಾರೆ.

ವಾರ್ಡ್‌ ಕಾಮಗಾರಿ ಕಾರ್ಯಕ್ರಮ ಹಾಗೂ ಮೇಯರ್‌ ನಿಧಿಯಿಂದ 80 ಲಕ್ಷ ರುಪಾಯಿ ವೆಚ್ಚದಲ್ಲಿ ಕೇವಲ ನಾಲ್ಕೂವರೆ ತಿಂಗಳಲ್ಲೇ ವಿಸ್ತರಣೆಗೊಂಡಿರುವ ಈ ಉದ್ಯಾನವನದಲ್ಲಿನ ಹೊಸತುಗಳ ಪಟ್ಟಿ ಇಂತಿದೆ....

  • ಪ್ರೇಮಿಗಳ ಲಲ್ಲೆ ತಾಣ- ಪಿಸುಮಾತು
  • ಚರ್ಚಾ ಸ್ಥಾನ- ಚಿಂತಕರ ಚಾವಡಿ
  • ಮಹಿಳಾ ಹಿತ ರಕ್ಷಣಾ ಸ್ಥಳ- ಮಹಿಳಾ ವಾಣಿ
  • ಹೆಂಗಸರಿಗೆ ವ್ಯಾಯಾಮ ಮಾಡಲು ಪ್ರತ್ಯೇಕ ಜಾಗೆ- ಸ್ತ್ರೀ ಶಕ್ತಿ
  • ಇಳಿಜೀವಗಳಿಗೆ ಇಂಬುಗೊಡುವ ಹರಟೆ ಕಟ್ಟೆ- ಹಣ್ಣೆಲೆ ಚಿಗುರಿದಾಗ
  • ಮಕ್ಕಳ ಜಾರುಬಂಡೆ- ಮಕ್ಕಳ ಕೂಟ
  • ಹಸುರು ನಳನಳಿಸುವ ಜಾಗೆ- ಸಿರಿ ಸಂಪದ
  • ದಿನನಿತ್ಯ ಬಣ್ಣ ಬಣ್ಣದ ಹೂಗಳ ನೋಟ ಇಲ್ಲಿ- ನಿತ್ಯೋತ್ಸವ
  • ನಾಲ್ಕು ಎಕರೆ ಪ್ರದೇಶದಲ್ಲಿ ಕಾಫಿ ಎಸ್ಟೇಟ್‌ನಂತೆ ಉದ್ಯಾನವನದ ಸಿಂಗರ
  • ಪ್ಲಾಂಟರ್‌ ಬಾಕ್ಸ್‌ ವಿನ್ಯಾಸ ಹೊಂದಿದ ಉದ್ಯಾನ- ಚಂದವಳ್ಳಿಯ ತೋಟ
  • ಒಂದೇ ಅಳತೆಗೆ ಕತ್ತರಿಸಲಾದ ಹುಲ್ಲುಗಾವಲು, ಹುಲ್ಲಿನ ದಿಬ್ಬಣಗಳು
  • ನೈಸರ್ಗಿಕ ಕಲ್ಲು ಬಂಡೆಗಳನ್ನು ಒಡೆಯದೇ ಇರಿಸಿರುವುದು ಪ್ರಕೃತಿಯ ಸೊಬಗ ಬಿಂಬಿಸುವಂತಿವೆ
  • ಅಮೃತಬಳ್ಳಿಯಂಥ ಅನೇಕ ಔಷಧೀಯ ಸಸ್ಯಗಳಿಂದ ಕೂಡಿದ ಆರೋಗ್ಯ ಧಾಮ
  • ಒಂದು ಸಂಗೀತ ಕಾರಂಜಿ, 172 ಟೈಮರ್‌ ಲೈಟ್‌ಗಳಿಂದ ಕಣ್ಣುಕೋರೈಸುವ ನಾಲ್ಕು ಬಣ್ಣದ ಕಾರಂಜಿಗಳು
ಜಕ್ಕರಾಯನಕೆರೆ, ಮಡಿವಾಳ ಹಾಗೂ ಕೆಂಪಾಂಬುಧಿ ಕೆರೆಗಳ ಉದ್ಯಾನ ಕಾಮಗಾರಿಗಳನ್ನೂ ಮಹಾನಗರ ಪಾಲಿಕೆಯೇ ಕೈಗೆತ್ತಿಕೊಂಡಿದ್ದು, ಕೆಲಸ ಆಮೆಗತಿಯಲ್ಲಿ ಸಾಗಿರುವಾಗ ಹನುಮಂತ ನಗರದ ತಿಮ್ಮೇಶ್‌ ಪ್ರಭು ಉದ್ಯಾನ ಕ್ಷಿಪ್ರವಾಗೇ ಹೊಸ ಬಣ್ಣ ಪಡೆದು ನಿಂತಿರುವುದು ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿದೆ! ನಮ್ಮ ಬಡಾವಣೆಯಲ್ಲಿ ಮಾತ್ರ ಯಾಕೆ ಬೇಗ ಕೆಲಸ ಮಾಡೋಲ್ಲ ಅಂತ ಕೆಲವರು ಬಿಸಿಸಿಯವರಿಗೆ ಶಾಪ ಕೂಡ ಹಾಕುತ್ತಿದ್ದಾರೆ. ಹಾಗೆ ಶಾಪ ಹಾಕಿದ ಮರುಕ್ಷಣವೇ ತಮ್ಮನ್ನು ತಾವು ಮರೆಯುತ್ತಾರೆ, ಹೊಸ ಉದ್ಯಾನ ನೋಡುತ್ತಾ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X