Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ವಾತಾವರಣ ಹೇಗೋ, ಹಾಗೆ ನಿಮ್ಮ ಮನ. ಹೊರಗೆ ಕೊರೆಯುವ ಚಳಿ, ಹಿಮಪಾತ . ರಗ್ಗು ಹೊದ್ದು ಮುದುರಿ ಕುಳಿತಂತೆ ಬದುಕು - ಭಾವ. ಮನೆಯಲ್ಲೇ ಸೃಜನಶೀಲ ಚಟುವಟಿಕೆಯತ್ತ ಗಮನ ಹರಿಸಿ. ಚಳಿಗಾಲದಲ್ಲಿ ಕಲೆಗಳು ಅರಳುತ್ತವಂತೆ !

ವೃಷಭ : ಗೆಳತಿಯ ನಿರೀಕ್ಷೆಯಲ್ಲಿ ವೃಥಾ ಸಮಯ ಹಾಳು. ಬಂದಾಳೋ ಬಾರಳೋ ? ತಳಮಳ. ಆಧುನಿಕ ಸಂಪರ್ಕ ಸಾಧನಗಳ ಪ್ರಯೋಜನ ಪಡೆಯುವುದು ಒಳಿತು.

ಮಿಥುನ : ಎಷ್ಟು ಕಲಿತರೂ , ಎಷ್ಟು ಸಂಪಾದಿಸಿದರೂ, ಇವೆಲ್ಲ ಯಾವ ಪುರುಷಾರ್ಥಕ್ಕೆ ಅನ್ನಿಸುವುದು. ಸಹಜ. ಇದೂ ಕ್ಷಣಿಕ ವೈರಾಗ್ಯದ ಇನ್ನೊಂದು ಅಂಕ. ನಾಳೆ ಇಂಥ ಆಲೋಚನೆ ನಿಮಗೆ ಬರದು, ನಿಸ್ಸಂದೇಹ.

ಕಟಕ : ಪಿತ್ತ ಪ್ರಕೋಪ , ಉದರ ಬಾಧೆ, ತಲೆ ಶೂಲೆ ! ಪ್ಲೀಸ್‌ ರಿಮೆಂಬರ್‌, ಯು ಆರ್‌ ವಾಟ್‌ ಯು ಈಟ್‌. ಟೇಕ್‌ ಕೇರ್‌.


ಸಿಂಹ : ಲಾಟರಿ, ಲೋಟೋ ಮುಂತಾದ ದಿಢೀರ್‌ ಡಾಲರ್‌ಪತಿ ಸ್ಪೆಕ್ಯುಲೇಶನ್‌ಗಳಲ್ಲಿ ನಿಮಗೆ ನಂಬುಗೆ ಇಲ್ಲದಿರಬಹುದು. ಆದರೆ, ಎಲ್ಲೋ ಹುದುಗಿದ ಹಣ ನಿಮ್ಮ ಕಡೆ ಹರಿದು ಬರುತ್ತಿದೆ. ಲಕ್ಷ್ಮಿಯನ್ನು ಆದರದಿಂದ ಬರಮಾಡಿಕೊಳ್ಳಿ.

ಕನ್ಯಾ : ಇವತ್ತು ಹೀಗೆ, ನಾಳೆ ಹೇಗೋ ! ಮಾನಸಿಕ ತುಮುಲದಲ್ಲಿ ತೊಳಲಾಡುತ್ತಿದ್ದೀರಿ. ನಿಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳೇನು ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಆನಂತರ ಕಾರ್ಯೋನ್ಮುಖರಾಗಿರಿ.

ತುಲಾ : ನೀವು ನೌಕರಿ ಮಾಡುವ ಕಚೇರಿಯಲ್ಲಿ ನೀವೇ ಇವತ್ತು ಕೇಂದ್ರ ಬಿಂದು. ಆಫೀಸಿನಲ್ಲಿ ಸರ್‌ಪ್ರೆೃಸಸ್‌ಗಳ ಸುರಿಮಳೆ. ಪ್ರೊಮೋಷನ್‌ ಬಂದರೂ ಬಂದೀತು. ಅದೆಲ್ಲ ಸಿಹಿ ಸುದ್ದಿಯೇ. ಆದರೆ ನಿಮ್ಮ ರಾಗರಂಜನೆಯ ಸಮಯವನ್ನು ಹಾಳಾದ್ದು ಆಫೀಸು ಹಾಳುಮಾಡುತ್ತದೆ. ನೀವಿವತ್ತು , ಅಯ್ಯೋ ಪಾಪ !

ವೃಶ್ಚಿಕ : ಯಾರಿಂದಲೂ ಕಿಂಚಿತ್ತೂ ಸಹಾಯ ಸಿಗುವುದಿಲ್ಲ. ಒಂದು ವ್ಯವಸ್ಥೆ ನಿಮಗೆ ನೆರವು ಕೊಡಲು ಸಾಧ್ಯವಾಗುತ್ತಿಲ್ಲ ಎಂದರೆ ನಿಮ್ಮ ಕಾಲ ಮೇಲೆ ನೀವೇ ನಿಂತುಕೊಳ್ಳುವುದರತ್ತ ನೀವಿನ್ನೂ ಗಮನ ಹರಿಸಿಲ್ಲ ಎಂದಾಯಿತು

ಧನಸ್ಸು: ಇನ್ನೊಬ್ಬರ ರೊಕ್ಕದಲ್ಲಿ ನೀವಿವತ್ತು ರಿಸ್ಕ್‌ ತೆಗೆದುಕೊಂಡರೆ ಕೆಟ್ಟಿರಿ. ನಿಮ್ಮ ಸ್ನೇಹಿತರು ನಿಮ್ಮನ್ನು ನಂಬಬಹುದು. ಆದರೆ, ಪರಧನ..ಪರಸತಿ...ನೆನಪಿರಲಿ .

ಮಕರ : ರಾಜಿ ಮಾರ್ಗದಲ್ಲಿ ವರ್ತಿಸುವುದು ನಿಮಗೆ ಪಥ್ಯವಲ್ಲ . ಹೌದು ತಾನೆ ? ಅದಕ್ಕೇ ನೆರೆಹೊರೆಯವರು ನಿಮ್ಮನ್ನು ಕಿರಿಕಿರಿ ಪಿರಿಪಿರಿ ಆಸಾಮಿ ಅಂತ ದೂಷಿಸುವರು . ಒಂದು ಸ್ಪಲ್ಪ ಕಾಂಪ್ರಮೈಸ್‌ ಮಾಡಿಕೊಂಡರೆ ನಿಮ್ಮಪ್ಪನ ಗಂಟೇನು ಹೋಗುತ್ತದೆ ?

ಕುಂಭ : ಮನಸ್ಸಿದ್ದಂತೆ ಮಹದೇವ ಎನ್ನುವಂತೆ ವರ್ತಿಸುವುದು ಅಪಾಯಕರ. ಶಾಂತ ಚಿತ್ತದಿಂದ ಆಲೋಚಿಸಿ, ವರ್ತಿಸಿದರೆ ಅಪಘಾತಗಳಿಂದ ತಪ್ಪಿಸಿಕೊಳ್ಳಬಹುದು. ಕಡೆಯಪಕ್ಷ ಭಾವನಾತ್ಮಕ ಆಕ್ಸಿಡೆಂಟ್‌ಗಳಿಂದಾದರೂ....

ಮೀನ : ಗಡದ್ದಾದ ತಿಂಡಿ, ತೀರ್ಥ, ಊಟ ! ಇದಕ್ಕಿಂತ ಇನ್ನೇನು ಬೇಕು ? ಕೆಲಸ ಮಾಡುವುದು ಇದ್ದೇ ಇರತ್ತೆ, ಒಂದು ದಿವಸವಾದರೂ ಬಿಂದಾಸ್‌ ಮಜಾ ಮಾಡೋಣ ಎನ್ನುವ ನಿಮ್ಮ ಬಹುದಿನಗಳ ನಿರೀಕ್ಷೆ ಇಂದು ಕೈಗೂಡುತ್ತದೆ. ಯು ಆರ್‌ ರಿಯಲಿ ಲಕ್ಕಿ ಟುಡೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+