Get Updates
Get notified of breaking news, exclusive insights, and must-see stories!

ಸ್ಯಾನಿಟರಿ ಬೇಸಿನ್‌ಗಳಲ್ಲಿ ಹಿಂದೂ ದೇವರ ಚಿತ್ರ: ಪ್ರತಿಭಟನೆ

ಬೆಂಗಳೂರು : ಹಿಂದೂ ದೇವರುಗಳ ಚಿತ್ರವುಳ್ಳ ಸ್ಯಾನಿಟರಿ ಬೇಸಿನ್‌ಗಳನ್ನು ಮಾರಾಟ ಮಾಡುತ್ತಿರುವ ಅಮೆರಿಕಾ ಕಂಪನಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರ ಸಾಯಂಕಾಲ ಬೆಂಗಳೂರಿನಲ್ಲಿ ಪ್ರತಿಭಟನೆ ಕಾರ್ಯಕ್ರಮ ನಡೆಯಲಿದೆ.

ಮಲಮೂತ್ರ ವಿಸರ್ಜಿಸುವ ಈ ಉಪಕರಣಗಳ ಮೇಲೆ ಗಣೇಶ, ದುರ್ಗೆ ಮುಂತಾದ ದೇವರುಗಳ ಚಿತ್ರವನ್ನು ಅಚ್ಚು ಹಾಕುವ ಮೂಲಕ ಹಿಂದೂ ಧರ್ಮೀಯರ ಭಾವನೆಗಳಿಗೆ ಈ ಸಂಸ್ಥೆ ಆಘಾತ ಉಂಟು ಮಾಡಿದೆ ಎಂದು ರಾಜ್ಯ ಯುವ ಜನತಾದಳದ ಸರ್ವಧರ್ಮ ಸಮನ್ವಯ ಸಮಿತಿ ಆರೋಪಿಸಿದೆ. ಕಂಪನಿಯ ಈ ಕ್ರಮವನ್ನು ಪ್ರತಿಭಟಿಸಲು ಹಾಗೂ ಈ ಕಂಪನಿಯ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಬಸವನಗುಡಿ ರಸ್ತೆಯಲ್ಲಿರುವ ದೊಡ್ಡ ಗಣಪನ ಗುಡಿಯೆದುರು ಭೂತದಹನ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ.

ಈ ಸಂಬಂಧ ಹೇಳಿಕೆ ನೀಡಿರುವ ಸಮಿತಿಯ ಉಪಾಧ್ಯಕ್ಷ ಬಿ. ಗಣೇಶ್‌ ಅವರು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿರುವ ಕಂಪನಿಯ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಸಚಿವ ಜೀವರಾಜ ಆಳ್ವ, ಪಿ.ಜಿ.ಆರ್‌. ಸಿಂಧ್ಯಾ, ವಿ.ಎಸ್‌. ಕೃಷ್ಣ ಅಯ್ಯರ್‌, ಆರ್‌.ವಿ. ಹರೀಶ್‌ ಮೊದಲಾದವರು ಪಾಲ್ಗೊಳ್ಳುತ್ತಾರೆಂದೂ ಅವರು ತಿಳಿಸಿದ್ದಾರೆ.

ಸೋಮವಾರದಿಂದ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಭಾರಿ ಜನಬೆಂಬಲ ವ್ಯಕ್ತವಾಗಲಿದೆ, ಪರಿಷೆಗೆ ಬರುವ ಪ್ರತಿಯಾಬ್ಬರೂ ತಮ್ಮೀ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಾರೆ ಎಂದೂ ಅವರು ಹೇಳಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+