ಕೈಕೊಟ್ಟ ಓವರ್ಟೇಕ್ ಆಟ : 8 ಸಾವು, 34 ಜನ ಆಸ್ಪತ್ರೆಗೆ
ಶಿವಮೊಗ್ಗ : ಸಮೀಪದ ಆಯನೂರಿನಲ್ಲಿ ಖಾಸಗಿ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಮೃತಪಟ್ಟು, 34 ಜನ ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮಲೆಶಂಕರದ ನಿವಾಸಿ ನಜೀರ್ಸಾಬ್, ಹಾರನಹಳ್ಳಿಯ ಸತ್ಯಪ್ಪ, ಅತಾವುಲ್ಲಾ, ಸೋಮಣ್ಣ ಹಾಗೂ ಕಮಲ ಎಂಬುವರ ಮಗಳು (ಹೆಸರು ತಿಳಿದಿಲ್ಲ), ಹೊಳೆ ಹೊನ್ನೂರಿನ ಹಾಲಪ್ಪ, ಬಸವರಾಜ ಹಾಗೂ ಗೋವಿಂದಪ್ಪ ಇವರೇ ಮೃತಪಟ್ಟ ನತದೃಷ್ಟರು. ಗಾಯಗೊಂಡಿರುವವ ಬಹುತೇಕರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಹಾಗೂ ನಂಜಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ತೀವ್ರ ಗಾಯಗೊಂಡಿರುವ ಒಬ್ಬನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಕ್ರೆಬೈಲಿನಿಂದ ಶಿವಮೊಗ್ಗ- ಆಯನೂರು- ಹಾರನಹಳ್ಳಿ ಮಾರ್ಗವಾಗಿ ಹೊನ್ನಾಳಿಗೆ ಹೋಗುತ್ತಿದ್ದ ಆಂಜನೇಯ ಎಂಬ ಖಾಸಗಿ ಬಸ್ಸು ಆಯನೂರಿಗೆ ಇನ್ನೊಂದು ಕಿ.ಮೀ. ದೂರವಿರುವಂತೆ ವಿಜಯಲಕ್ಷ್ಮಿ ಬಸ್ಸನ್ನು ಹಿಂದಿಕ್ಕುವ ಯತ್ನದಲ್ಲಿ ನಿಯಂತ್ರಣ ತಪ್ಪಿ ದ ಚಾಲಕ ತಬ್ಬಿಬ್ಬಾಗಿ ಬಸ್ಸು ಸೀದಾ ಮರಕ್ಕೆ ಹೊಡೆಯಿತು. ಬಸ್ಸಿನ ವೇಗ ಎಷ್ಟಿತ್ತೆಂದರೆ ಮರ ಬುಡ ಸಮೇತ ಉರುಳಿತು.
ಸಂಬಂಧಿಕರೊಬ್ಬರ ಶವ ಸಂಸ್ಕಾರಕ್ಕೆಂದು ಹೊರಟಿದ್ದ ಹೊಳೆ ಹೊನ್ನೂರಿನ ಹಾಲಪ್ಪ, ಬಸವರಾಜ ಹಾಗೂ ಗೋವಿಂದಪ್ಪ ಈ ಅಪಘಾತದಿಂದ ಶವವಾದರು. ಬಸ್ಸನ್ನು ಓಡಿಸುತ್ತಿದ್ದವ ಖಾಯಂ ಚಾಲಕನಲ್ಲ , ಆತನ ತಮ್ಮ ಎಂದು ತಿಳಿದು ಬಂದಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications