ಗ್ರಾನೈಟ್ ಅವ್ಯವಹಾರ - ವಂಚನೆ ಪ್ರಕರಣದಲ್ಲಿಡಾ. ಭಾನು ಹೆಸರು
ಬೆಂಗಳೂರು : ರಾಜ್ ಬಿಡುಗಡೆಯಲ್ಲಿ ಪ್ರಮುಖ ಪಾತ್ರಧಾರಿಣಿ ಎನ್ನಲಾದ ಡಾ. ಭಾನು ಹಿನ್ನೆಲೆ ಏನು? ಈಕೆ ವೈದ್ಯೆಯೇ, ವಾಣಿಜ್ಯೋದ್ಯಮಿಯೇ? ಈಕೆ ವೈದ್ಯೆಯೇ ಅಲ್ಲ ಕೇವಲ ನರ್ಸ್ ಎಂದೂ, ಇಲ್ಲ ಇಲ್ಲ ಈಕೆ ಆಯುರ್ವೇದ ಪದವೀಧರೆ ಎಂದೂ ಹೇಳಲಾಗುತ್ತಿದೆ. ಅದಕ್ಕಿಂತಲೂ ಮಿಗಿಲಾಗಿ ಈಕೆ ಅಪರಾಧದ ಹಿನ್ನೆಲೆ ಇರುವಾಕೆ ಎನ್ನುವ ಸತ್ಯಗಳೂ ಗರಿಬಿಚ್ಚಿಕೊಳ್ಳುತ್ತಿವೆ.
ಡಾ. ಭಾನು ಅವರ ಮೇಲೆ ಗ್ರಾನೈಟ್ ಅವ್ಯವಹಾರವೊಂದರಲ್ಲಿ ಸಿ.ಸಿ.ಬಿ ಪೊಲೀಸರು ಈ ಹಿಂದೆ ಮೊಕದ್ದಮೆ ದಾಖಲು ಮಾಡಿದ್ದಾರೆ ಎಂಬ ಸಂಗತಿಯೂ ಬೆಳಕುಕಂಡಿದೆ.
1998ರಲ್ಲಿ ಇಟಲಿ ಕಂಪನಿಯಾಂದರ ಜತೆ 40 ಸಾವಿರ ಡಾಲರ್ ಗ್ರಾನೈಟ್ ಪೂರೈಕೆಗೆ ಒಪ್ಪಂದ ಮಾಡಿಕೊಂಡಿದ್ದ ಭಾನು, ಕಳಪೆ ಗುಣಮಟ್ಟದ ಗ್ರಾನೈಟ್ ಪೂರೈಕೆ ಮಾಡಿ ವಂಚಿಸಿದರೆಂಬ ಆರೋಪ ಹೊತ್ತಿದ್ದರು. ಈ ಸಂಬಂಧ ಕಂಪನಿಯವರು ಭಾನು ಅವರ ವಿರುದ್ಧ ಹೊಸತರಗುಪೇಟೆಯಲ್ಲಿರುವ ನಗರ ಅಪರಾಧ ವಿಭಾಗದ ಪೊಲೀಸರಿಗೆ ದೂರು ಸಲ್ಲಿಸಿದ್ದರು ಎಂಬ ಅಂಶವೂ ಹೊರಬಿದ್ದಿದೆ.
ಸಿ.ಸಿ.ಬಿ. ಪೊಲೀಸರು ಭಾರತೀಯ ದಂಡ ಸಂಹಿತೆಯ 420 ಹಾಗೂ 408ನ ಸೆಕ್ಷನ್‌ಗಳ ರೀತ್ಯ ಪ್ರಕರಣವನ್ನು ದಾಖಲಿಸಿಕೊಂಡಿದ್ದರು (ಸಂಖ್ಯೆ 113- 98) ತನಿಖೆಯನ್ನೂ ನಡೆಸಿದ್ದರು. ಭಾನು ಸಹವರ್ತಿಯಾಬ್ಬರನ್ನು ಬಂಧಿಸಿದ್ದರು. ಭಾನು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೂ ಹಾಜರಾಗಿದ್ದರು ಎಂದೂ ತಿಳಿದುಬಂದಿದೆ.
1999ರಲ್ಲಿ ಪೊಲೀಸರು ಈ ಸಂಬಂಧ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ. ವಿಚಾರಣೆ ನಡೆಯಬೇಕಿದೆ. ಭಾನು ಕೆ.ಜಿ.ಎಫ್ ನಿವಾಸಿ. ಮೂಲತಃ ತಮಿಳುನಾಡಿನ ತಿರುವಳ್ಳವರ್ ಜಿಲ್ಲೆಯವರು. ಈಕೆ ಹುಟ್ಟಿದ್ದು ಮಲೇಷಿಯಾದಲ್ಲಿ ಎಂಬ ವಿಷಯಗಳೂ ತಿಳಿದುಬಂದಿವೆ. ಆದರೆ, ಭಾನು ರಾಜ್ ಬಿಡುಗಡೆಗೆ ಕಾಡಿಗೆ ಹೇಗೆ ಹೋದರು ಎಂಬುದು ಇನ್ನೂ ನಿಗೂಢವಾಗಿದೆ.
ಸಂತಸ ತಂದಿತು ಸಂಕಟ : ರಾಜ್‌ಕುಮಾರ್ ತಾವು ಬಿಡುಗಡೆಯಾದ ಸಂತಸದಲ್ಲಿ, ಆ ಉದ್ವೇಗದಲ್ಲಿ ತಮ್ಮನ್ನು ಬಿಡುಗಡೆ ಮಾಡಿಸಿದ ವೈದ್ಯೆಗೆ ಧನ್ಯವಾದವನ್ನು ಅರ್ಪಿಸಲು (ಸಹಜವಾಗಿ ಹಾಗೂ ಎಂದಿನ ತಮ್ಮ ಮುಗ್ಧತೆಯಿಂದ ) ತಮಗರಿವಿಲ್ಲದೆ ಭಾನು ಹೆಸರು ಹೇಳೇ ಬಿಟ್ಟರು. ಇದಕ್ಕೂ ಮುನ್ನ ಯಾವುದೇ ಕಾರಣಕ್ಕೂ, ರಾಮಕುಮಾರ್, ಡಾ. ಭಾನು, ಪೆರಿಯಾರ್ ಗುಂಪಿನ ನಾಯಕ ಷಣ್ಮುಖ ಸುಂದರಂ, ಮಣಿ ಅವರ ಹೆಸರನ್ನು ಬಹಿರಂಗ ಪಡಿಸದಂತೆ ರಾಜ್ ಅವರಿಗೆ ತಿಳಿಸಲಾಗಿತ್ತು ಎನ್ನಲಾಗಿದೆ.
ರಾಜ್ ಅವರನ್ನು ಬಿಡಿಸಲು ಹೋಗಿ ತಾವೇ ಸಿಕ್ಕಿಕೊಂಡೆವಲ್ಲ ಎಂದು ಈಗ ವೈದ್ಯೆ ಪರಿತಪಿಸುತ್ತಿರಬೇಕು. ಈಗ ಎಲ್ಲ ಮಾಧ್ಯಮಗಳೂ ಭಾನು ಅವರ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಹೊಸ ಹೊಸ ಅಂಶಗಳು ಬೆಳಕು ಕಾಣುತ್ತಿವೆ. ಪೊಲೀಸರೂ ಈಗ ಕನ್ನಡ ನೆಲದಲ್ಲಿ ನಡೆಯುತ್ತಿರುವ ಎಲ್‌ಟಿಟಿಈ ಚಟುವಟಿಕೆಗಳ ಬಗ್ಗೆ ಗಂಭೀರವಾಗಿ ತನಿಖೆಗೆ ಮುಂದಾಗಿದ್ದಾರೆ. ಭಾನು, ಮಣಿ, ಷಣ್ಮುಖಂ ಹಾಗೂ ಇತರರ ಜಾತಕಗಳನ್ನು ಕೆದಕುತ್ತಿದ್ದಾರೆ.
ವಾರ್ತಾ ಸಂಚಯ
ಮುಖಪುಟ / ರಾಜ್ ಬಿಡುಗಡೆ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications